ಮುಂಬೈ :ಬಾಲಿವುಡ್ ನಟ ರಣವೀರ್​ ಸಿಂಗ್​ ಅವರಿಗೆ ಸಂಭ್ರಮದ ಮೇಲೆ ಸಂಭ್ರಮ! ಏಕೆ ಗೊತ್ತೆ? ಕಳೆದ ಮೇನಲ್ಲಷ್ಟೇ ಲ್ಯಾಂಬೋರ್ಗಿನಿಯ ವಿಶೇಷ ಮಾಡೆಲ್​ ಕಾರು ಖರೀದಿಸಿದ್ದ ರಣವೀರ್​, ಇದೀಗ ಮರ್ಸಿಡಿಸ್​ನ ಲೇಟೆಸ್ಟ್​ ಮಾಡೆಲ್​ಅನ್ನು ತಮ್ಮದಾಗಿಸಿಕೊಂಡಿದ್ದಾರೆ.
ನಿನ್ನೆಯ ದಿನ ತಮ್ಮ 36ನೇ ಜನ್ಮದಿನ ಆಚರಿಸಿಕೊಂಡ ರಣವೀರ್​ ಅತ್ಯಂತ ದುಬಾರಿಯಾಗಿರುವ ಎಸ್​​ಯುವಿಗಳಲ್ಲೊಂದಾದ ಮರ್ಸಿಡಿಸ್​ ಮೇಬಚ್ ಜಿಎಲ್​ಎಸ್​ 600 ಕಾರಿನ ಒಡೆಯರಾಗಿದ್ದಾರೆ. ಈ ಕಾರಿನೊಂದಿಗಿನ ಅವರ ಚಿತ್ರ ಜಾಲತಾಣದಲ್ಲಿ ವೈರಲ್ ಆಗಿದೆ. ಭಾರತದಲ್ಲಿ ಕಳೆದ ತಿಂಗಳಷ್ಟೇ 2.43 ಕೋಟಿ ರೂ. ಬೆಲೆಗೆ ಲಾಂಚ್​ ಆದ ಕಾರಿದು.
ಇದನ್ನೂ ಓದಿ:ಮಾಜಿ ರಣಜಿ ಕ್ರಿಕೆಟಿಗ, ಈಗ ರಸ್ತೆಬದಿ ದಾಲ್​ ಪೂರಿ ಮಾರುತ್ತಿದ್ದಾನೆ!
ಇನ್ನು ಇದೇ ವರ್ಷ ಮೇ ತಿಂಗಳಲ್ಲಿ ಅವರು ಲ್ಯಾಂಬೋರ್ಗಿನಿ ಉರುಸ್ ಪರ್ಲ್​ ಕ್ಯಾಪ್ಸೂಲ್​​ನ ಡಿಸೈನ್ ಎಡಿಶನ್​ನ ಡೆಲಿವರಿ ಪಡೆದಿದ್ದರು. ಮಾರ್ಚ್​ನಲ್ಲಿ ಲಾಂಚ್​ ಆದ ಪರ್ಲ್​ ಕ್ಯಾಪ್ಸೂಲ್ ಕಾರಿನ ಸ್ಟಾಂಡರ್ಡ್​ ಮಾಡೆಲ್​ಗೇ 3.15 ಕೋಟಿ ರೂ.ಗಳಷ್ಟು ಶೋರೂಂ ಬೆಲೆ ಇದ್ದರೆ, ಡಿಸೈನ್ ಎಡಿಷನ್​ಗೆ ಅದಕ್ಕಿಂತ ಶೇ.20 ರಷ್ಟು ಹೆಚ್ಚು ಬೆಲೆ ಎನ್ನಲಾಗಿದೆ.(ಏಜೆನ್ಸೀಸ್)
VIDEO | ಕ್ಯಾಪ್ಟನ್​ ಕೂಲ್​ ಧೋನಿ ಬರ್ತ್​​ಡೇಗೆ ಐಸಿಸಿ ವಿಶೇಷ ಕೊಡುಗೆ

ತಾಯಿ-ಚಿಕ್ಕಪ್ಪನ ಅಕ್ರಮ ಸಂಬಂಧ ಅರಿತ ಬಾಲಕ… ಮುಂದಾದದ್ದು ಭಾರೀ ದುರಂತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − 3 =
Remember me
