ಜೋಧ್​ಪುರ:ಭಾರತ ಭೇಟಿಯಲ್ಲಿದ್ದಾಗ ಕೋವಿಡ್-19, ಡೆಂಘ ಮತ್ತು ಮಲೇರಿಯಾ ರೋಗಪೀಡಿತರಾಗಿ ಗುಣಮುಖರಾದ ಬ್ರಿಟನ್ ಪ್ರಜೆ ಇಯಾನ್ ಜೋನ್ಸ್ ಇದೀಗ ಕಾಳಿಂಗ ಸರ್ಪ ಕಡಿತಕ್ಕೆ ಒಳಗಾಗಿ ಚೇತರಿಸಿಕೊಳ್ಳುತ್ತಿದ್ದಾರೆ.
ರಾಜಸ್ಥಾನದ ಜೋಧ್​ಪುರ ಸಮೀಪದ ಹಳ್ಳಿಯೊಂದರಲ್ಲಿ ಕಳೆದ ವಾರ ಕಾಳಿಂಗ ಸರ್ಪವೊಂದು ಜೋನ್ಸ್​ರನ್ನು ಕಚ್ಚಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ದಕ್ಷಿಣ ಇಂಗ್ಲೆಂಡ್​ನ ಐಸ್ಲ್ ವೈಟ್​ನವರಾದ ಜೋನ್ಸ್, ಹಾವು ಕಡಿತ ಬಳಿಕ ಮಂದ ದೃಷ್ಟಿ ಹಾಗೂ ನಡೆಯಲು ಸಮಸ್ಯೆ ಎದುರಿಸಿದ್ದರು. ಈ ಸಮಸ್ಯೆ ಕ್ರಮೇಣ ಗುಣಮುಖವಾಗುವುದೆಂದು ಹೇಳಿದ್ದಾರೆ.
ಜೋನ್ಸ್ ಎರಡನೇ ಬಾರಿ ಕೋವಿಡ್​ಗೆ ಒಳಗಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿತ್ತು. ಆದರೆ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದೆ ಎಂದು ಸ್ಥಳೀಯ ಆಸ್ಪತ್ರೆಯ ವೈದ್ಯ ಅಭಿಷೇಕ್ ಟೇಟರ್ ಹೇಳಿದ್ದಾರೆ. ಬ್ರಿಟನ್​ನಲ್ಲಿ ಆರೋಗ್ಯ ಕಾರ್ಯಕರ್ತರಾಗಿದ್ದ ಜೋನ್ಸ್, ರಾಜಸ್ಥಾನದ ಸಾಂಪ್ರದಾಯಿಕ ಕುಶಲಕರ್ವಿುಗಳಿಗೆ ನೆರವಾಗುವ ಸ್ವಯಂಸೇವಾ ಸಂಸ್ಥೆಯೊಂದನ್ನು ನಡೆಸಲು ಭಾರತಕ್ಕೆ ಬಂದಿದ್ದಾರೆ. ಜೋನ್ಸ್​ರ ಆಸ್ಪತ್ರೆ ವೆಚ್ಚ ಭರಿಸಲು ಹಾಗೂ ಸ್ವದೇಶಕ್ಕೆ ಮರಳಲು ಅನುಕೂಲವಾಗಲು ಅವರ ಕುಟುಂಬ 12,000 ಪೌಂಡ್ ಹಣ ಸಂಗ್ರಹ ಮಾಡಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + 6 =
Remember me
