ಹೈದರಾಬಾದ್​: ಸಾಮಾನ್ಯ ದರ್ಪಣ(ಕನ್ನಡಿ) ನಮ್ಮೆದುರಿಗಿದ್ದರಷ್ಟೇ ನಮ್ಮ ಮುಖವನ್ನು ತೋರಿಸುತ್ತದೆ. ಆದರೆ ಇಲ್ಲೊಂದು ದರ್ಪಣ, 2 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಬಾಲಕಿಯ ಮುಖವನ್ನು ಪತ್ತೆ ಮಾಡಿ ತೋರಿಸಿದೆ!
ಏಳು ವರ್ಷದ ಬಾಲಕಿ 2017ರ ಜನವರಿಯಲ್ಲಿ ಹೈದರಾಬಾದ್​ನಲ್ಲಿ ಕಾಣೆಯಾಗಿದ್ದಳು. ಆದರೆ ಇದೀಗ ಆಕೆ ಮಧ್ಯಪ್ರದೇಶದಲ್ಲಿ ಪತ್ತೆಯಾಗಿದ್ದು, ಮತ್ತೆ ತನ್ನ ಕುಟುಂಬವನ್ನು ಸೇರಿಕೊಂಡಿದ್ದಾಳೆ. ಇದನ್ನು ಸಾಧ್ಯವಾಗಿಸಿದ್ದು, ‘ದರ್ಪಣ’.
ಕಾಣೆಯಾದವರನ್ನು ಪತ್ತೆ ಮಾಡಲೆಂದೇ ತೆಲಂಗಾಣ ಪೊಲೀಸರು ಫೇಸ್​ ರೆಕಗ್ನಿಷನ್​ ಟೆಕ್ನಾಲಜಿ ಅಳವಡಿಸಿರುವ ವ್ಯವಸ್ಥೆಯೊಂದನ್ನು ರೂಪಿಸಿದ್ದು, ಅದಕ್ಕೆ ‘ದರ್ಪಣ’ ಎಂದು ಹೆಸರಿಟ್ಟಿದ್ದಾರೆ. ಕಾಣೆಯಾದವರ ಫೋಟೋಗಳನ್ನು ಈ ವ್ಯವಸ್ಥೆಯಲ್ಲಿ ಅಳವಡಿಸಲಾಗುತ್ತದೆ. ಈ ಮೂಲಕ ಬಾಲಕಿ ಮಧ್ಯಪ್ರದೇಶದ ಬೇಟುಲ್ ಜಿಲ್ಲೆಯಲ್ಲಿರುವುದನ್ನು ತೆಲಂಗಾಣ ಸಿಐಡಿ ಪೊಲೀಸರು ಕಂಡುಕೊಂಡಿದ್ದಾರೆ.
ಹೀಗೆ ನಾಪತ್ತೆಯಾದವರು ದರ್ಪಣದ ಮೂಲಕ ಮತ್ತೆ ಮನೆಯವರನ್ನು ಸೇರುತ್ತಿರುವ ಪ್ರಕರಣದಲ್ಲಿ ಇದು 18ನೆಯದ್ದು. ಆರ್ಟಿಫಿಷಿಯಲ್ ಇಂಟೆಲಿಜೆನ್ಸಿಯನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದಕ್ಕೆ ಇದೊಂದು ಉದಾಹರಣೆ ಎಂಬುದಾಗಿ ಸಿಐಡಿ ಪೊಲೀಸ್​ ಅಧಿಕಾರಿ ಗೋವಿಂದ್ ಸಿಂಗ್​ ಹೇಳಿದ್ದಾರೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 11 =
Remember me
