ನವದೆಹಲಿ:ಜಮ್ಮು ಮತ್ತು ಕಾಶ್ಮೀರದಲ್ಲಿ ಇತ್ತೀಚೆಗೆ ಭಾರತೀಯ ಭದ್ರತಾ ಪಡೆಗಳು ಆಪರೇಷನ್​ ಜ್ಯಾಕ್​ಬೂಟ್​ ಎಂಬ ಕಾರ್ಯಾಚರಣೆ ಆರಂಭಿಸಿದ ಬಳಿಕ ಭಯೋತ್ಪಾದಕ ಸಂಘಟನೆಗಳಿಗೆ ಭಾರಿ ಹಿನ್ನಡೆಯಾಗಿದೆ. ಭಯೋತ್ಪಾದಕ ಪಡೆಗಳ ಪ್ರಮುಖ ಉಗ್ರನೊಬ್ಬ ಈ ವಿಷಯವನ್ನು ಸ್ವತಃ ಒಪ್ಪಿಕೊಂಡಿದ್ದಾನೆ.
ಹಿಜ್ಬುಲ್​ ಮುಜಾಹಿದ್ದೀನ್​ ಉಗ್ರ ಸಂಘಟನೆಯ ಪ್ರಮುಖ ಉಗ್ರ ಸೈಯೀದ್​ ಸಲಾಹುದ್ದೀನ್​ನ ಈ ಹೇಳಿಕೆಯ ವಿಡಿಯೋ ತುಣಕನ್ನು ಬಿಜೆಪಿ ವಕ್ತಾರ ಸಂಬಿತ್​ ಪಾತ್ರಾ ಟ್ವೀಟ್​ ಮಾಡಿದ್ದಾರೆ.
ಇದನ್ನೂ ಓದಿ:ಷಾ ಆರೋಗ್ಯದ ಬಗ್ಗೆ ರೂಮರ್: ಗುಜರಾತಿನ ನಾಲ್ವರ ಬಂಧನರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್​ ದೋವಲ್​ ನೇತೃತ್ವದಲ್ಲಿ ಆಪರೇಷನ್​ ಜ್ಯಾಕ್​ಬೂಟ್​ ಅನ್ನು ರೂಪಿಸಿ, ಜಾರಿಗೊಳಿಸಲಾಗಿತ್ತು. ಈ ಕಾರ್ಯಾಚರಣೆಯ ಭಾಗವಾಗಿ ಭಾರತೀಯ ಸೇನಾಪಡೆ, ಸಿಆರ್​ಪಿಎಫ್​ ಹಾಗೂ ಜಮ್ಮು ಮತ್ತು ಕಾಶ್ಮೀರದ ಪೊಲೀಸ್​ ಪಡೆ ಜಂಟಿಯಾಗಿ ಪುಲ್ವಾಮಾದ ಬೇಗ್​ಪೋರಾ ಪ್ರದೇಶದಲ್ಲಿ ದಾಳಿ ನಡೆಸಿ ಹಿಜ್ಬುಲ್​ ಮುಜಾಹಿದ್ದೀನ್​ನ ಚೀಫ್​ ಕಮಾಂಡರ್​ ರಿಯಾಜ್​ ನಾಯ್ಕೋನನ್ನು ಹತ್ಯೆ ಮಾಡಿದ್ದವು.
ನಾಯ್ಕೋ ಹತ್ಯೆಯಿಂದ ಭಾರತದಲ್ಲಿ ಹಿಜ್ಬುಲ್​ ಮುಜಾಹಿದ್ದೀನ್​ ಭಯೋತ್ಪಾದನಾ ಸಂಘಟನೆಗೆ ಭಾರಿ ಹಿನ್ನಡೆಯಾಗಿದೆ. ಅದನ್ನೇ ಸಲಾಹುದ್ದೀನ್​ ಪುನರುಚ್ಚರಿಸಿದ್ದಾನೆ ಎಂದು ಹೇಳಲಾಗಿದೆ.
हिज़बुल मुजाहिदीन का सरग़ना आतंकवादी Sayeed Salahudeen का विडीओ सामने आया है …अब वो मान गया है की दुश्मन(भारत) का पलड़ा भारी है!जय हिंद की सेना🙏pic.twitter.com/CXnBu5fV7I— Sambit Patra (@sambitswaraj)May 9, 2020
हिज़बुल मुजाहिदीन का सरग़ना आतंकवादी Sayeed Salahudeen का विडीओ सामने आया है …अब वो मान गया है की दुश्मन(भारत) का पलड़ा भारी है!जय हिंद की सेना🙏pic.twitter.com/CXnBu5fV7I
ಭಾರತದಲ್ಲಿ ದಿನಕ್ಕೆ 95 ಸಾವಿರ ಜನರಿಗೆ ಕೋವಿಡ್​ ಪರೀಕ್ಷೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − thirteen =
Remember me
