ನವದೆಹಲಿ:ಜೈಸಲ್ಮೇರ್​ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಅರ್ಜುನ್​ ಟ್ಯಾಂಕ್​ನಲ್ಲಿ ಸವಾರಿ ಮಾಡಿದ್ದು, ಸೇನೆಯಿಂದ ಸುಧಾರಿತ ಸ್ವದೇಶಿ ಟ್ಯಾಂಕ್​ನ ಆರ್ಡರ್ ಪಡೆದುಕೊಳ್ಳುವ ಡಿಆರ್​ಡಿಒ (ಡಿಫೆನ್ಸ್ ರಿಸರ್ಚ್​ ಡೆವಲಪ್​ಮೆಂಟ್​ ಆರ್ಗನೈಸೇಷನ್) ನಿರೀಕ್ಷೆ ಹೆಚ್ಚಾಗಿದೆ. ಅಲ್ಲದೆ, ಈಗ ಬಳಕೆಯಲ್ಲಿರುವ ಅರ್ಜುನ್ ಟ್ಯಾಂಕ್​ಗಿಂತ ಹೆಚ್ಚು ಸುಧಾರಿತ ಅರ್ಜುನ್​ ಮಾರ್ಕ್​ 1ಎ ಟ್ಯಾಂಕ್​ಗಳನ್ನು ಪೂರೈಸುವುದಕ್ಕೆ ಡಿಆರ್​ಡಿಎ ಸಜ್ಜಾಗಿದೆ.
ಡಿಆರ್​ಡಿಒ ಸೈಂಟಿಸ್ಟ್ ವಿ ಬಾಲಗುರು ಎಎನ್​ಐ ಜತೆಗೆ ಮಾತನಾಡಿದ್ದು, ಜೈಸಲ್ಮೇರ್​ನ ಮರಳುಗಾಡಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಅರ್ಜುನ್ ಟ್ಯಾಂಕ್ ಸವಾರಿ ದೃಶ್ಯ ನಮಗೆ ಹೆಮ್ಮೆ ತರುವಂಥದ್ದು. ಇನ್ನೆರಡು ರೆಜಿಮೆಂಟ್​​ಗೆ ಬೇಕಾದಷ್ಟು ಅರ್ಜುನ್ ಮಾರ್ಕ್​ 1ಎ ಟ್ಯಾಂಕ್​ಗಳನ್ನು ​ಖರೀದಿಸುವುದಕ್ಕೆ ಸೇನೆಯಿಂದ ಆರ್ಡರ್​ ಲಭಿಸುವ ನಿರೀಕ್ಷೆಯಲ್ಲಿದ್ದೇವೆ ನಾವು ಎಂದು ಹೇಳಿದ್ದಾರೆ.
ಇದನ್ನೂ ಓದಿ:ಓದುವ ಬೆಳಕು ಅಭಿಯಾನಕ್ಕೆ ಚಾಲನೆ ಸಿಇಒ ಚಾಲನೆ
ಅರ್ಜುನ್​ ಮಾರ್ಕ್ 1ಎ ಟ್ಯಾಂಕ್​ನಲ್ಲಿ 72 ಹೊಸ ಫೀಚರ್​ಗಳನ್ನು ಸೇರಿಸಲಾಗಿದೆ. ಹಳೆಯದರಲ್ಲಿ ಇಲ್ಲದೇ ಇರುವ ಆ್ಯಂಟಿ ಟ್ಯಾಂಕ್ ಮೈನ್ಸ್ ಕೂಡ ಅಳವಡಿಸಲಾಗಿದೆ. ಇದು ಸ್ವತಃ ಮೈನ್ಸ್ ಅನ್ನು ಪತ್ತೆ ಹಚ್ಚಿ ಹೊರತೆಗೆಯಬಲ್ಲದು. 12.7 ಇಂಚು ಏರ್​ ಡಿಫೆನ್ಸ್ ಗನ್ ಅನ್ನು ಯೋಧರು ಟ್ಯಾಂಕ್ ಒಳಗಿದ್ದುಕೊಂಡೇ ರಿಮೋಟ್ ಕಂಟ್ರೋಲ್ ಮೂಲಕ ಬಳಸಬಹುದಾಗಿದೆ. ಇಂತಹ ಇನ್ನಷ್ಟು ವಿಶೇಷಗಳು ಈ ಟ್ಯಾಂಕ್​ನಲ್ಲಿವೆ ಎಂದು ಬಾಲಗುರು ತಿಳಿಸಿದ್ದಾರೆ.
ಇದನ್ನೂ ಓದಿ:ಟಿಫನ್ ಬಾಕ್ಸ್​ನಲ್ಲೇನಿರಬಹುದು ಗೆಸ್ ಮಾಡಿ!
ಸೇನೆ ಈಗಾಗಲೇ ಜೈಸಲ್ಮೇರ್​ನ ಮರುಭೂಮಿ ವ್ಯಾಪ್ತಿಯಲ್ಲಿ ಪಾಕಿಸ್ತಾನದ ಗಡಿಯುದ್ದಕ್ಕೂ 124 ಅರ್ಜುನ್ ಟ್ಯಾಂಕ್​ಗಳನ್ನು ನಿಯೋಜಿಸಿದೆ. ಇನ್ನೂ 118 ಅರ್ಜುನ್​ ಮಾರ್ಕ್​ 1 ಎ ಟ್ಯಾಂಕ್​ಗಳಿಗೆ ಆದೇಶ ಸಿಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. (ಏಜೆನ್ಸೀಸ್)
ಮುಹೂರ್ತ ಟ್ರೇಡಿಂಗ್​ನಲ್ಲಿ ಸಾರ್ವಕಾಲಿಕ ಎತ್ತರಕ್ಕೇರಿದ ಸೆನ್ಸೆಕ್ಸ್, ನಿಫ್ಟಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + eighteen =
Remember me
