ನವದೆಹಲಿ: ಕಳೆದ ವರ್ಷ ಆಗಸ್ಟ್​ನಲ್ಲಿ ಕಮ್ಯೂನಿಕೇಷನ್ ಲಾಕ್​ಡೌನ್ ಆಗಿದ್ದಾಗ ಕಾಶ್ಮೀರದಲ್ಲಿ ಛಾಯಾ ಸಮರ ನಡೆಸಿದ್ದ ಪಾಕಿಸ್ತಾನ ಈಗ ಕರೊನಾ ಲಾಕ್​ಡೌನ್​ ಈ ಸಂದರ್ಭದಲ್ಲಿ ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಸೈಬರ್ ವಾರ್ ನಡೆಸುತ್ತಿರುವುದನ್ನು ಭದ್ರತಾ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.
ಭದ್ರತಾ ಏಜೆನ್ಸಿಗಳು ಪತ್ತೆ ಹಚ್ಚಿದ ಮಾಹಿತಿ ಪ್ರಕಾರ, ಗಲ್ಫ್​ ರಾಷ್ಟ್ರಗಳ ಮೂಲಕ ಪಾಕಿಸ್ತಾನವು ಸೈಬರ್ ವಾರ್​ ನಡೆಸುತ್ತಿದೆ. ಭಾರತದಲ್ಲಿ ಇಸ್ಲಾಮೋಫೋಬಿಯಾದ ಪ್ರೊಪಗಾಂಡ ಮಾಡಿ ಭಾರತ ವಿರೋಧಿ ಭಾವನೆಗಳನ್ನು ಕೆರಳಿಸುವ ಪ್ರಯತ್ನದಲ್ಲಿ ಅದು ತೊಡಗಿದೆ. ಈ ಕುರಿತ ಮಾಹಿತಿಗಳನ್ನು ಸೃಷ್ಟಿಸಿ ಶೇರ್ ಮಾಡ್ತಾ ಇರುವ ಸಾಮಾಜಿಕ ಜಾಲತಾಣಗಳ ಹ್ಯಾಂಡಲ್​ಗಳನ್ನು ವಿಶ್ಲೇಷಣೆಯ ಪ್ರಕಾರ ಹೆಚ್ಚಿನ ಹಣ ಈ ವಿಚಾರಕ್ಕೆ ಹೂಡಿಕೆಯಾಗುತ್ತಿದೆ ಎಂಬ ಅಂಶ ಬೆಳಕಿಗೆ ಬಂದಿದೆ.
ಪ್ರಧಾನಿ ಕಚೇರಿಯಲ್ಲಿ ಈ ಹ್ಯಾಂಡಲ್​ಗಳ ಸಂಪೂರ್ಣ ಮಾಹಿತಿಯೇ ಇದ್ದು, ಅದನ್ನು ನಡೆಸುವವರ ವಿವರವೂ ಲಭ್ಯವಿದೆ. ಇವೆಲ್ಲದರ ಹಿಂದೆ ಪಾಕಿಸ್ತಾನ ಗುಪ್ತಚರ ದಳದ ಕೈವಾಡ ಇರುವುದೂ ಖಚಿತವಾಗಿದೆ. ಸುಳ್ಳು ಸುದ್ದಿ ಹರಡುವ ಬಹುತೇಕ ಅಕೌಂಟ್​ಗಳು ಬಹರೈನ್​, ಕುವೈತ್​, ಒಮಾನ್​, ಕತಾರ್​, ಸೌದಿ ಅರೇಬಿಯಾ, ಯುಎಇಗಳಲ್ಲಿ ಇದೆ. ಈ ಎಲ್ಲ ಟ್ವಿಟರ್​ ಹ್ಯಾಂಡಲ್​ಗಳು ಹಳೆಯವಾದರೂ, ದೃಢೀಕೃತ ಖಾತೆಗಳಲ್ಲ.
ಭಾರತದ ವಿರುದ್ಧ ಈ ರೀತಿಯ ಆಕ್ರಮಣ ಇದೇ ಮೊದಲ ಸಲವೇನಲ್ಲ. ಈ ಹಿಂದೆ ಕಳೆದ ವರ್ಷ ಆಗಸ್ಟ್​ನಲ್ಲಿ ಆರ್ಟಿಕಲ್ 370 ರದ್ದುಗೊಳಿಸಿದ ಸಂದರ್ಭ ಕಮ್ಯೂನಿಕೇಷನ್ ಲಾಕ್​ಡೌನ್ ಮಾಡಿದ ಸಂದರ್ಭದಲ್ಲೂ ಇಂಥದ್ದೇ ದಾಳಿ ನಡೆದಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಭಾರತದ ಇಮೇಜ್ ಹಾಳುಗೆಡವಲು ಪ್ರಯತ್ನ ಅವ್ಯಾಹತವಾಗಿ ನಡೆದಿತ್ತು. ಆದಾಗ್ಯು ಅದು ಸಫಲವಾಗಲಿಲ್ಲ. ಶ್ರೀನಗರದಲ್ಲಿ ಇಂಟರ್​ನೆಟ್ ಬ್ಯಾನ್ ಆಗುವ ಬಹಳಷ್ಟು ಮೊದಲೇ ಸೋಷಿಯಲ್ ಮೀಡಿಯಾ ಮೂಲಕ ಮೊದಲ ದಾಳಿ ನಡೆದಿತ್ತು. ಅದು ಪಾಕಿಸ್ತಾನಿ ಡೀಪ್​ ಸ್ಟೇಟ್​ ಅನುದಾನಿತ ದಾಳಿಯಾಗಿತ್ತು. ಈಗಲೂ ಇದರ ಮೂಲಕ ಈ ದಾಳಿಗೆ ಹಣ ಹೂಡಿಕೆಯಾಗಿದೆ, ಆಗುತ್ತಿದೆ.
ಮಂಗಳವಾರ ಶೇಮ್ ಆನ್ ಮೋದಿ, ಇದಕ್ಕೂ ಒಂದು ದಿನ ಮೊದಲು ಚಾವೋಸ್​ ಇನ್ ಇಂಡಿಯಾ ಇತ್ಯಾದಿ ಹ್ಯಾಷ್ ಟ್ಯಾಗ್ ಮೂಲಕ ಟ್ವೀಟ್​ಗಳು ವಿವಿಧೆಡೆಯಿಂದ ಅಪ್ಲೋಡ್ ಆಗಿದ್ದವು. ವ್ಯವಸ್ಥಿತವಾಗಿ ಈ ಕೃತ್ಯ ನಡೆಯುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತದ ಇಮೇಜ್ ಹಾಳು ಮಾಡುವ ಪ್ರಯತ್ನವನ್ನು ಭದ್ರತಾ ಪಡೆ ಗಮನಿಸಿದೆ. (ಏಜೆನ್ಸೀಸ್)
ಆ 22ರ ಯುವತಿ ಕೆಮ್ಮುತ್ತಲೇ ಇದ್ಳು- ಆಸ್ಪತ್ರೆಗೆ ದಾಖಲಾದರೆ ಕೆಮ್ಮಿನ ಇತಿಹಾಸ ಕೇಳಿ, ಕಾರಣ ನೋಡಿ ಅಲ್ಲಿದ್ದವರಿಗೆಲ್ಲ ಶಾಕ್ !

ಬೆಂಗಳೂರಿನಲ್ಲಿ ಡೋರ್​ ಡೆಲಿವರಿ ಡನ್ಜೋವನ್ನೂ ಬಿಡಲಿಲ್ಲ ಇಬ್ಬರು ಖದೀಮರು!- ಡೆಲಿವರಿ ಬಾಯ್​ಗಳ ಸೋಗಿನಲ್ಲಿ ಇವರು ಮಾಡಿದ್ದೇನು?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:3 × three =
Remember me
