ನವದೆಹಲಿ:ರಾಷ್ಟ್ರ ರಾಜಧಾನಿ ದೆಹಲಿಯಲ್ಲಿರುವ ಶಾಲೆಗಳ ಅವ್ಯವಸ್ಥೆ ಕುರಿತಾದ ವಿಡಿಯೋ ಬಿಡುಗಡೆ ಮಾಡಿ ಆಮ್​ ಆದ್ಮಿ ಪಕ್ಷಕ್ಕೆ ತಿರುಗೇಟು ನೀಡಿದ್ದ ಬಿಜೆಪಿ, ಇದೀಗ ದೆಹಲಿಯ ಮೊಹಲ್ಲಾ ಕ್ಲಿನಿಕ್​ ಯೋಜನೆ ಅವ್ಯವಸ್ಥೆ ಸಾರುವ ಮತ್ತೊಂದು ಸ್ಟಿಂಗ್​ ವಿಡಿಯೋ ಬಿಡುಗಡೆ ಮಾಡಿ ಸಿಎಂ ಅರವಿಂದ್​ ಕೇಜ್ರಿವಾಲ್​ ಸರ್ಕಾರದ ಆಡಳಿತವನ್ನು ಅಣುಕಿಸಿದ್ದಾರೆ.
ಫೆ. 8ರಂದು ನಡೆಯುವ ದೆಹಲಿ ಚುನಾವಣೆಗೆ ಕೇಜ್ರಿವಾಲ್​ ವಿರುದ್ಧ ಬಿಜೆಪಿ ತೊಡೆ ತಟ್ಟಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ ಅವರು ಗುರುವಾರ ಟ್ವೀಟ್​ ಮೂಲಕ ವಿಡಿಯೋವನ್ನು ಬಿಡುಗಡೆ ಮಾಡಿದ್ದು, ದೆಹಲಿಯಲ್ಲಿ ಆಪ್ ಶುರು ಮಾಡಿರುವ ಮೊಹಲ್ಲಾ ಕ್ಲಿನಿಕ್​ ಔಷಧ ಮತ್ತು ಮೂಲಭೂತ ಸೌಕರ್ಯ ಸೇರಿದಂತೆ ಸಾಕಷ್ಟು ಕೊರತೆ ಎದುರಿಸುತ್ತಿದೆ ಎಂದು ವಾದಿಸಿದ್ದಾರೆ.
ಕೇಜ್ರಿವಾಲ್​ ಅವರೇ ಪ್ರತಿವರ್ಷ ನೀವು 1,000 ಮೊಹಲ್ಲಾ ಕ್ಲಿನಿಕ್ಸ್​ಗಳನ್ನು ತೆರೆಯುವುದಾಗಿ ಭರವಸೆ ನೀಡಿದ್ದಿರಿ. ನೀವು ತೆರೆದಿರುವ ಬೆರಳೆಣಿಕೆಯ ಕ್ಲಿನಿಕ್​​ಗಳು ಸಾಮಾನ್ಯ ಸೌಕರ್ಯಗಳು ಇಲ್ಲದೆ ಕೊತೆಯನ್ನು ಎದುರಿಸುತ್ತಿವೆ ಎಂದಿದ್ದಾರೆ.
ಇದಾದ ಕೆಲವೇ ಸಮಯದಲ್ಲೂ ಗೃಹಸಚಿವ ಅಮಿತ್​ ಷಾ, ರೀಟ್ವೀಟ್​ ಮಾಡಿ ಶಾಲಾ ಅವ್ಯವಸ್ಥೆ ಬಳಿಕ ಇದೀಗ ಕೇಜ್ರಿವಾಲ್​ ಅವರ ಆರೋಗ್ಯ ಕ್ರಾಂತಿಯನ್ನು ಬಹಿರಂಗಪಡಿಸಲಾಗಿದೆ. ಸ್ವಾರ್ಥ ರಾಜಕಾರಣದಿಂದಾಗಿ ದೆಹಲಿ ಬಡ ಕ್ಲಿನಿಕ್​ಗಳನ್ನು ಪಡೆದುಕೊಂಡಿವೆ. ಪ್ರಧಾನಿ ಮೋದಿ ಅವರ ಆಯುಷ್ಮಾನ್​ ಯೋಜನೆಯಿಂದ ದೆಹಲಿ ಜನರನ್ನು ದೂರವಿಟ್ಟಿದ್ದೀರಾ ಇದಕ್ಕೆ ನಿಮಗೆ ತಕ್ಕ ಉತ್ತರ ಸಿಗಲಿದೆ ಎಂದು ಷಾ ಕಿಡಿಕಾರಿದ್ದಾರೆ.
ಈ ಹಿಂದೆ ಶಾಲಾ ಅವ್ಯವಸ್ಥೆ ಬಗ್ಗೆ ಬಿಜೆಪಿ ಟ್ವೀಟ್​ ಬಗ್ಗೆ ಕಿಡಿಕಾರಿದ್ದ ಬಿಜೆಪಿ 48 ಗಂಟೆಗಳ ಕಾಲ ಬಿಜೆಪಿ ಚುನಾವಣಾ ಪ್ರಚಾರವನ್ನು ಬ್ಯಾನ್​ ಮಾಡುವಂತೆ ಚುನಾವಣಾ ಆಯೋಗವನ್ನು ಆಗ್ರಹಿಸಿತ್ತು. ಬಿಜೆಪಿ ನಕಲಿ ವಿಡಿಯೋಗಳನ್ನು ಹರಿಬಿಡುತ್ತಿದೆ ಎಂದು ಆರೋಪಿಸಿತ್ತು.(ಏಜೆನ್ಸೀಸ್​)
केजरीवाल जी, आपने हर साल 1000 मोहल्ला क्लीनिक खोलने का वादा किया।1000 क्लीनिक खोलना तो दूर, जो कुछ खुले भी, उनमें न दवाएं हैं, न सुविधाएं।'आप' की ओछी राजनीति ने दिल्ली के गरीबों को सालाना 5 लाख रुपये तक मुफ्त इलाज देने वाली मोदी जी की 'आयुष्मान भारत योजना' से भी वंचित रखा।pic.twitter.com/X4YgSIBXvS— Jagat Prakash Nadda (@JPNadda)January 30, 2020
केजरीवाल जी, आपने हर साल 1000 मोहल्ला क्लीनिक खोलने का वादा किया।1000 क्लीनिक खोलना तो दूर, जो कुछ खुले भी, उनमें न दवाएं हैं, न सुविधाएं।'आप' की ओछी राजनीति ने दिल्ली के गरीबों को सालाना 5 लाख रुपये तक मुफ्त इलाज देने वाली मोदी जी की 'आयुष्मान भारत योजना' से भी वंचित रखा।pic.twitter.com/X4YgSIBXvS
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 7 =
Remember me
