ಭೋಪಾಲ್​:ಕರೊನಾ ದೇಶದ ಜನರಲ್ಲಿ ಭಯ ಹುಟ್ಟಿಸಿದೆ. ಸೋಂಕು ಹರಡಿ ಕೆಲವೇ ದಿನಗಳಲ್ಲಿ ಜನರು ಪ್ರಾಣ ಬಿಡುತ್ತಿರುವ ಉದಾಹರಣೆಗಳು ಹೆಚ್ಚಾಗುತ್ತಿವೆ. ಇದೇ ರೀತಿ ಒಂದೇ ಕುಟುಂಬದ ಮೂವರು ಸದಸ್ಯರು ಕರೊನಾಕ್ಕೆ ಒಂದು ತಿಂಗಳ ಅವಧಿಯಲ್ಲಿ ಬಲಿಯಾಗಿದ್ದಾರೆ. ಅದನ್ನು ಕಂಡ ಮನೆಯ ಸೊಸೆ ಆಘಾತ ತಾಳಲಾರದೆಯೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ದೇವಾಸ್​ ನಗರದಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಬಾಲಕಿಶನ್​ ಅವರ ಪತ್ನಿ ಚಂದ್ರಕಲಾ (75) ಅವರು ಏಪ್ರಿಲ್​ 14ರಂದು ಕರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಅದಾದ ನಂತರ ಅವರ ಮಕ್ಕಳಾದ ಸಂಜಯ್​ (51) ಹಾಗೂ ಸ್ವಪ್ನೇಶ್​ (48) ಇಬ್ಬರೂ ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆ. ಮನೆಯಲ್ಲಿ ಒಬ್ಬರಾದ ಮೇಲೆ ಒಬ್ಬರು ಸಾಯುತ್ತಿರುವುದನ್ನು ಕಂಡು ಶಾಕ್​ಗೆ ಒಳಗಾದ ಕಿರಿಯ ಸೊಸೆ ರೇಖಾ (45) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಇದೀಗ ಬಾಲಕಿಶನ್​ ಅವರ ಮನೆ ಸಂಪೂರ್ಣವಾಗಿ ಸ್ಮಶಾನ ಮೌನಕ್ಕೊಳಗಾಗಿದೆ. ಮನೆಯ ಒಡೆಯ ಬಾಲಕಿಶನ್​, ಮೊದಲನೇ ಸೊಸೆ ಮತ್ತು ಮೊಮ್ಮಕ್ಕಳು ಮಾತ್ರ ಕುಟುಂಬದಲ್ಲಿ ಉಳಿದಿದ್ದಾರೆ.
ದೇಶದಲ್ಲಿ ಕರೊನಾ ಸೋಂಕು ಅತಿ ವೇಗದಲ್ಲಿ ಹರಡಲಾರಂಭಿಸಿದೆ. ಆದರೆ ಜನರು ಭಯ ಪಡಬೇಕಾಗಿಲ್ಲ, ಸೂಕ್ತ ಮುನ್ನೆಚ್ಚರಿಕೆ ಮತ್ತು ಚಿಕಿತ್ಸೆ ಪಡೆದು ಸೋಂಕಿನಿಂದ ದೂರಾಗಬಹುದು ಎಂದು ಸರ್ಕಾರ ಹಾಗೂ ವೈದ್ಯಕೀಯ ಇಲಾಖೆ ಸೂಚಿಸುತ್ತಿದೆ. (ಏಜೆನ್ಸೀಸ್​)
22 ಲಕ್ಷ ರೂಪಾಯಿ ಮೌಲ್ಯದ ಕಾರನ್ನು ಮಾರಿ 160 ಜನರಿಗೆ ಆಕ್ಸಿಜನ್​ ಹಂಚಿದ ಆಕ್ಸಿಜನ್​ ಮ್ಯಾನ್​!

ದುಬಾರಿ ಕಾರಿನ ಒಡೆಯನಾದ ಮಾಡರ್ನ್​​ ರೈತ ಶಶಿ! ಕಾರಿನ ಬೆಲೆ ಕೇಳಿದರೆ ಹುಬ್ಬೇರಿಸೋದು ಗ್ಯಾರಂಟಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 1 =
Remember me
