ಬೆಂಗಳೂರು:ಇಂದು ಮಧ್ಯಾಹ್ನದ ಸುಮಾರಿಗೆ ಹೊರಬಿದ್ದ ಆಘಾತಕಾರಿ ಸುದ್ದಿ ಎಂದರೆ ಮಾಜಿ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರ ಮೊಮ್ಮಗಳು ಡಾ.ಸೌಂದರ್ಯ ಅವರ ಆತ್ಮಹತ್ಯೆಯದ್ದು. ಇದು ಬರೀ ಅವರ ಕುಟುಂಬ, ಆಪ್ತವರ್ಗ ಮಾತ್ರವಲ್ಲದೆ ಬಹಳಷ್ಟು ಸಾರ್ವಜನಿಕರ ಹೃದಯವನ್ನೂ ಕಲುಕಿದೆ.
ಕ್ರೆಸೆಂಟ್ ರಸ್ತೆಯ ಅಪಾರ್ಟ್​ಮೆಂಟ್​​ನಲ್ಲಿ ವಾಸವಿದ್ದ ಡಾ.ನೀರಜ್​ ಅವರ ಪತ್ನಿ ಡಾ.ಸೌಂದರ್ಯ, ತಮ್ಮ 9 ತಿಂಗಳ ಮಗುವನ್ನು ಇನ್ನೊಂದು ಕೊಠಡಿಯಲ್ಲಿ ಬಿಟ್ಟು ತಾವು ವೇಲ್​ ಮೂಲಕ ನೇಣು ಹಾಕಿಕೊಂಡು ಸಾವಿಗೆ ಶರಣಾಗಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಬದುಕಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ.
ಆತ್ಮಹತ್ಯೆಗೆ ನಿಖರ ಕಾರಣ ಏನು ಎಂಬ ಕುರಿತು ಖಚಿತ ಮಾಹಿತಿ ಬಹಿರಂಗಗೊಂಡಿಲ್ಲ. ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅದರ ವರದಿ ಇನ್ನಷ್ಟೇ ಬರಬೇಕಿದೆ. ಜತೆಗೆ ನಾಳೆ ಪೊಲೀಸರು ಸ್ಥಳ ಮಹಜರು ನಡೆಸಲಿದ್ದಾರೆ. ಈ ಎಲ್ಲದರ ನಡುವೆ ಅವರ ಸಾವಿನ ಕುರಿತು ತೀವ್ರ ಬೇಸರ, ಶೋಕ ವ್ಯಕ್ತವಾಗಿದೆ.
ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಎಚ್​.ಡಿ. ಕುಮಾರಸ್ವಾಮಿ, ಸಿದ್ದರಾಮಯ್ಯ, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮುಂತಾದವರು ಯಡಿಯೂರಪ್ಪ ಅವರಿಗೆ ಕರೆ ಮಾಡಿ ಸಂತಾಪ ಸೂಚಿಸಿ, ಸಾಂತ್ವನ ಕೂಡ ಹೇಳಿದ್ದಾರೆ.
ಇನ್ನೊಂದೆಡೆ ಇತರ ರಾಜಕಾರಣಿಗಳು, ಸಾರ್ವಜನಿಕರು, ಜನಸಾಮಾನ್ಯರು ಕೂಡ ಈ ಸಾವಿಗೆ ತೀವ್ರ ಮರುಕ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲದೆ ಅವರೆಲ್ಲ ತಮ್ಮ ಸಂತಾಪವನ್ನು ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. ಹೀಗೆ ದೊಡ್ಡಮಟ್ಟದಲ್ಲಿ ನೆಟ್ಟಿಗರು ಡಾ.ಸೌಂದರ್ಯ ಸಾವಿಗೆ ಹಾಗೂ ಅದರ ನೋವಿನಲ್ಲಿರುವ ಬಿಎಸ್​ವೈ ಕುರಿತು ಮರುಕ ವ್ಯಕ್ತಪಡಿಸಿ ಸಂತಾಪ ಸೂಚಿಸಿದ್ದರು. ಪರಿಣಾಮವಾಗಿ ಟ್ವಿಟರ್​ನಲ್ಲಿ ಬಹಳಷ್ಟು ಕಾಲ #BSYediyurappa #Soundarya ಎಂಬೆರಡು ಹ್ಯಾಷ್​ಟ್ಯಾಗ್​ಗಳು ಇಂಡಿಯಾ ಟ್ರೆಂಡಿಂಗ್​ನಲ್ಲಿದ್ದವು. ಆ ಮೂಲಕ ಈ ಸಾವು ಅದೆಷ್ಟು ಮಂದಿಯ ಮನಸಿಗೆ ಬೇಸರ ಉಂಟುಮಾಡಿದೆ ಎಂಬುದು ಒಂದುಮಟ್ಟಿಗೆ ಅನಾವರಣಗೊಂಡಿದೆ.
ಬಿಎಸ್​ವೈ ಮೊಮ್ಮಗಳ ಆತ್ಮಹತ್ಯೆ: ನಾಳೆ ಹೈಗ್ರೌಂಡ್ಸ್ ಪೊಲೀಸರಿಂದ ಸ್ಥಳ ಮಹಜರು
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:nineteen + 5 =
Remember me
