ನವದೆಹಲಿ:ಆಗಾಗ ಏನಾದರೊಂದು ವಿಷಯವಾಗಿ ಸುದ್ದಿಯಾಗುತ್ತಲೇ ಇರುವ ಬಾಲಿವುಡ್ ಬೆಡಗಿ ಪ್ರಿಯಾಂಕಾ ಚೋಪ್ರಾ, ಇದೀಗ ‘ಧರ್ಮ’ದ ಮಾತಿಗೆ ಟ್ರೋಲ್​ ಆಗಿದ್ದಾರೆ. ತಂದೆಯ ವಿಚಾರವಾಗಿ ಮಾತನಾಡಿ ಟ್ವಿಟ್ಟಿಗರಿಂದ ಕಾಲೆಳೆತಕ್ಕೂ ಒಳಗಾಗಿದ್ದಾರೆ. ಓಪ್ರಾ ವಿನ್​ಫ್ರೆ ಅವರ ಟಾಕ್​ ಶೋ ‘ಸೂಪರ್ ಸೌಲ್’​ನಲ್ಲಿ ಸಂದರ್ಶನ ನೀಡಿದ್ದ ನಟಿ ಪ್ರಿಯಾಂಕಾ ಚೋಪ್ರಾ ಅಲ್ಲಿ ಬಹಳಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಆ ಪೈಕಿ ಅವರ ಧರ್ಮದ ಮಾತು ಎಡವಟ್ಟಿಗೆ ಮೂಲವಾಗಿದೆ. ಧರ್ಮಗಳ ವಿಚಾರವಾಗಿ ಮಾತನಾಡಲು ಹೋಗಿ ಪ್ರಿಯಾಂಕಾ ವಿವಾದಕ್ಕೆ ಒಳಗಾಗಿದ್ದಾರೆ.
ತಮ್ಮ ಮೇಲೆ ಮೂರೂ ಧರ್ಮಗಳು ಪ್ರಭಾವ ಬೀರಿವೆ ಎಂಬುದಾಗಿ ಹೇಳಿದ ಪ್ರಿಯಾಂಕಾ, ಆ ಬಗ್ಗೆ ಒಂದಷ್ಟು ವಿವರಣೆಯನ್ನೂ ಕೊಟ್ಟಿದ್ದಾರೆ. ಹಿಂದೂ, ಕ್ರೈಸ್ತ, ಇಸ್ಲಾಂ ಮೂರೂ ಧರ್ಮಗಳ ಬಗ್ಗೆ ನನಗೆ ಅರಿವಿದೆ ಹಾಗೂ ಅವುಗಳಿಂದ ಪ್ರಭಾವಿತಳಾಗಿದ್ದೇನೆ. ನಾನು ಹಿಂದೂ ಕುಟುಂಬದಲ್ಲಿ ಬೆಳೆದಿರುವುದರಿಂದ ಹಿಂದುತ್ವದ ಬಗ್ಗೆ ಗೊತ್ತು. ಇನ್ನು ಕಾನ್ವೆಂಟ್​ನಲ್ಲಿ ಓದಿರುವುದರಿಂದ ಕ್ರೈಸ್ತ ಧರ್ಮದ ಅರಿವೂ ಇದೆ. ಅಲ್ಲದೆ ನನ್ನ ತಂದೆ ಮಸೀದಿಯಲ್ಲಿ ಹಾಡುತ್ತಿದ್ದುದರಿಂದ ಇಸ್ಲಾಂ ಧರ್ಮದ ಬಗ್ಗೆಯೂ ತಿಳಿದಿದೆ ಎಂದಿದ್ದಾರೆ.
ಇದನ್ನೂ ಓದಿ:10 ಲಕ್ಷ ಜನರಿಗೆ ಒಟ್ಟು 1,500 ಕೋಟಿ ರೂ. ಮೋಸ; ಬೆಂಗಳೂರಿನ ಕಂಪನಿಯ 24 ಜನರನ್ನು ಬಂಧಿಸಿದ ಸೈಬರಾಬಾದ್ ಪೊಲೀಸರು
ಆದರೆ ಪ್ರಿಯಾಂಕಾ ಹೀಗೆ ಹೇಳುತ್ತಿದ್ದಂತೆ ಟ್ವಿಟರ್​ನಲ್ಲಿ ಹಲವರು ಅವರ ಕಾಲೆಳೆದಿದ್ದಾರೆ. ಒಬ್ಬರು ನನ್ನ ತಂದೆ ಕ್ರಿಸ್​ಮಸ್​ ಟ್ರೀಯಿಂದ ಅಲಂಕಾರ ಮಾಡುತ್ತಿದ್ದರು, ಹಾಗಾಗಿ ನನಗೆ ಕ್ರಿಶ್ಚಿಯಾನಿಟಿ ಬಗ್ಗೆ ಗೊತ್ತು ಎಂದು ವ್ಯಂಗ್ಯವಾಡಿದ್ದಾರೆ. ಇನ್ನು ಕೆಲವರು ಪ್ರಿಯಾಂಕಾ ತಮ್ಮ ಫ್ಯಾನ್ಸ್ ಸಂಖ್ಯೆ ಹೆಚ್ಚಿಸಿಕೊಳ್ಳಲು ಹೀಗೆ ಎಲ್ಲ ಧರ್ಮದ ವಿಷಯವಾಗಿ ಮಾತನಾಡಿದ್ದಾರೆ ಎಂದಿದ್ದಾರೆ. ಇಸ್ಲಾಂ ಧರ್ಮದ ಕುರಿತು ಪ್ರಾಥಮಿಕ ವಿಷಯವೂ ತಿಳಿಯದೆ ಮುಸ್ಲಿಂ ಅಭಿಮಾನಿಗಳನ್ನು ಗಳಿಸಲು ಹೋದಾಗ ಹೀಗೆ ಎಡವಟ್ಟಾಗುತ್ತದೆ ಎಂದೂ ಕೆಲವರು ಟೀಕಿಸಿದ್ದಾರೆ.
ಡ್ಯಾನ್ಸ್​ ಒಂದರ ಚಿತ್ರೀಕರಣದಲ್ಲಿ ನನಗೆ ನನ್ನ ‘ಪ್ಯಾಂಟಿ’ ತೋರಿಸುವಂತೆ ಕೇಳಿಕೊಂಡಿದ್ದ ನಿರ್ದೇಶಕ: ಪ್ರಿಯಾಂಕಾ ಚೋಪ್ರಾ ಆರೋಪ

ಎಲ್ಲೆಲ್ಲೋ ಹೋಗಿ ಬಟ್ಟೆ ಬಿಚ್​ತಿರೋರಿಗೆ ದಾನ ಮಾಡ್ತೇನೆ- ಇನ್ನೂ 19 ಸಿಡಿ ಇವೆಯಂತೆ…ಜೋಕೆ!

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:5 × two =
Remember me
