ಗೋರೆಗಾಂವ್​(ಮಹಾರಾಷ್ಟ್ರ):ಬಾಲಿವುಡ್​ ನಟ ಸುಶಾಂತ್ ಸಿಂಗ್ ಬಳಿಕ ಎಂ.ಎಸ್​.ದೋನಿ ಚಿತ್ರದ ಮತ್ತೋರ್ವ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದಾರೆ.
ಮುಂಬೈನ ಗೋರೆಗಾಂವ್​ನಲ್ಲಿರುವ ಅಪಾರ್ಟ್​ಮೆಂಟ್​ನಲ್ಲಿ ಯುವನಟ ಸಂದೀಪ್‌ ನಹಾರ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿಗೂ ಮುನ್ನ ಫೇಸ್​ಬುಕ್​ ಅಕೌಂಟ್​ನಲ್ಲಿ ವಿಡಿಯೋ ಶೇರ್ ಮಾಡಿರುವ ಸಂದೀಪ್​, ವೈಯಕ್ತಿಕ ಕಾರಣಗಳಿಂದಾಗಿ ಈ ನಿರ್ಧಾರ ತೆಗೆದುಕೊಳ್ಳುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
ರಜಪೂತ್ ಜತೆ ಎಂಎಸ್ ಧೋನಿ; ದಿ ಅನ್​ಟೋಲ್ಡ್ ಸ್ಟೋರಿ ಹಾಗೂ ಅಕ್ಷಯ್​ ಕುಮಾರ್​ ಅವರೊಂದಿಗೆ ಕೇಸರಿ ಚಿತ್ರದಲ್ಲಿ ಸಂದೀಪ್ ನಹಾರ್​ ನಟಿಸಿದ್ದರು. ಎಂಎಸ್ ಧೋನಿ ಬಯೋಪಿಕ್​ ಚಿತ್ರದಲ್ಲಿ ಸುಶಾಂತ್​ ಸಿಂಗ್​ ರಜಪೂತ್​ ಅವರು ದೋನಿ ಪಾತ್ರ ನಿರ್ವಹಿಸಿದ್ದರು. ಸಂದೀಪ್ ನಹಾರ್​ ಅವರು ದೋನಿ ಗೆಳೆಯನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಸುಶಾಂತ್ ಸಿಂಗ್​ ಅಗಲಿಕೆಯ ನೋವು ಅಭಿಮಾನಿಗಳ ಮನದಲ್ಲಿ ಇನ್ನೂ ಮಾಸಿಲ್ಲ. ಇದೀಗ ಮತ್ತೋರ್ವ ನಟ ಆತ್ಮಹತ್ಯೆ ಮಾಡಿಕೊಂಡಿರುವುದು ದುರಂತ. ಸಾಲ ಹಾಗೂ ಕಿರುಕುಳದ ಬಗ್ಗೆ ಡೆತ್​ನೋಟ್​ನಲ್ಲಿ ಸಂದೀಪ್ ಪ್ರಸ್ತಾಪ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಸಾವಿಗೂ ಮುನ್ನ ಮಾನಸಿಕ ಸಮಸ್ಯೆಯ ಬಗ್ಗೆ ಹೇಳಿಕೊಂಡಿರೋ ಸಂದೀಪ್, ತನ್ನ ಸಾವಿಗೆ ಲತ್ನಿ ಕಾರಣವಲ್ಲ ಅಂತ ಹೇಳಿದ್ದಾರೆ.
ಬೇಡ ಬೇಡ ಅಂದ್ರೂ ಸಾವಿನ ಮನೆಯ ಕದ ತಟ್ಟಿದ 15ರ ಬಾಲಕ! ಕಳೆದ ವಾರವೇ ಪೊಲೀಸರು ಎಚ್ಚರಿಸಿದ್ದರು

ಶಾಸಕರ ಆಪ್ತ ಮತ್ತು ಇಡಿ ನೌಕರ ಬಂಧನ! ಕೋಟ್ಯಂತರ ಹಣ ಲಪಟಾಯಿಸಲು ನಡೆದಿತ್ತು ಭಾರಿ ಸಂಚು

ತಹಸೀಲ್ದಾರ್​ ಕಚೇರಿ ಬಳಿ ಹಾವಿನ ಜತೆ ಆಟವಾಡುತ್ತಿದ್ದ ವೃದ್ಧ ಕ್ಷಣಾರ್ಧದಲ್ಲೇ ಪ್ರಾಣಬಿಟ್ಟ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 3 =
Remember me
