ಶಿಲ್ಲೋಂಗ್​:ಆ ಮಗುವಿಗೆ ಕೇವಲ 8 ತಿಂಗಳು ಪ್ರಾಯ. ಅನಾರೋಗ್ಯಪೀಡಿತವಾಗಿ ಅರಿವು ತಪ್ಪಿದ ಆ ಮಗುವನ್ನು ಉಳಿಸುವುದಕ್ಕಾಗಿ ಅಪ್ಪ-ಅಮ್ಮ ಚಾಲಕನೊಬ್ಬನ ನೆರವಿನೊಂದಿಗೆ 400 ಕಿ.ಮೀ. ದೂರದ ಆಸ್ಪತ್ರೆಗೆ ಧಾವಿಸಿದ್ದರು. ಅವರು ಚಿಕಿತ್ಸೆಗಾಗಿ ಅರುಣಾಚಲ ಪ್ರದೇಶದಿಂದ ಅಸ್ಸಾಂ ದಾರಿಯಾಗಿ ಮೇಘಾಲಯಕ್ಕೆ ಕೆಲವೇ ಗಂಟೆಗಳಲ್ಲಿ ಆಗಮಿಸಿದ್ದರು.
ಅರುಣಾಚಲ ಪ್ರದೇಶದ ತೋಮೊ ರಿಬಾ ಇನ್​​ಸ್ಟಿಟ್ಯೂಟ್ ಆಫ್​ ಹೆಲ್ತ್​ ಆ್ಯಂಡ್ ಮೆಡಿಕಲ್ ಸೈನ್ಸಸ್​ನಿಂದ ಹೆಚ್ಚಿನ ಚಿಕಿತ್ಸೆಗಾಗಿ ಆ ಮಗುವನ್ನು ಮೇಘಾಲಯದ ಇಂದಿರಾಗಾಂಧಿ ರೀಜಿನಲ್​ ಇನ್​ಸ್ಟಿಟ್ಯೂಟ್ ಆಫ್​ ಹೆಲ್ತ್​ ಆ್ಯಂಡ್ ಮೆಡಿಕಲ್ ಸೈನ್ಸಸ್​ ಗೆ ಕೊಂಡೊಯ್ದು ದಾಖಲಿಸುವಂತೆ ಡಾಕ್ಟರ್ ಶಿಫಾರಸು ಮಾಡಿದ್ದರು. ಅದರಂತೆ ಆ ಪಾಲಕರು ಮಗುವನ್ನು ರಸ್ತೆ ದಾರಿಯಾಗಿ ಕರೆದುಕೊಂಡು ಬಂದಿದ್ದರು.
ಇದನ್ನೂ ಓದಿ:VIDEO|ಸೈಂಟಿಫಿಕ್ ಫಿಕ್ಷನ್ ಸಿನಿಮಾದ ನಾಯಕಿ: ಈಕೆ ಜಗತ್ತಿನ ಮೊದಲ ಎಐ ಆರ್ಟಿಸ್ಟ್​!
ಕೂಡಲೇ ಆಸ್ಪತ್ರೆಗೆ ಮಗುವನ್ನು ದಾಖಲಿಸಿದ ವೈದ್ಯರು ಮಗುವನ್ನು ಕೋವಿಡ್ 19 ಟೆಸ್ಟ್​ಗೆ ಒಳಪಡಿಸಿ ಚಿಕಿತ್ಸೆ ಮುಂದುವರಿಸಿದರು. ಟೆಸ್ಟ್ ರಿಪೋರ್ಟ್ ಪಾಸಿಟಿವ್ ಬಂದಿದ್ದು, ಸಂಜೆ ವೇಳೆಗೆ ಮಗು ಮೃತಪಟ್ಟಿದೆ. ಕೂಡಲೇ ಪಾಲಕರನ್ನು ಮತ್ತು ಅವರನ್ನು ಕರೆ ತಂದ ಚಾಲಕನನ್ನೂ ಕೋವಿಡ್​ -19 ಟೆಸ್ಟ್​ಗೆ ಒಳಪಡಿಸಲಾಗಿದ್ದು, ಅವರ ವರದಿ ನೆಗೆಟಿವ್ ಬಂದಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಇದುವರೆಗೆ ಮೇಘಾಲಯದಲ್ಲಿ 89 ಕೋವಿಡ್ 19 ಕೇಸ್​ಗಳು ದೃಢಪಟ್ಟಿವೆ. ಇದರಲ್ಲಿ 44 ಮಂದಿಗೆ ಚಿಕಿತ್ಸೆ ನಡೆಯುತ್ತಿದೆ. 43 ಜನ ಸೋಂಕು ಮುಕ್ತರಾಗಿದ್ದಾರೆ. ಇಬ್ಬರು ಮೃತಪಟ್ಟಿದ್ದಾರೆ. ಸಕ್ರಿಯ ಕೇಸ್​ಗಳ ಪೈಕಿ 22 ಕೇಸ್​ಗಳು ಸ್ಥಳೀಯ ಬಿಎಸ್​ಎಫ್​​ ಕೇಂದ್ರ ಕಚೇರಿಯಲ್ಲಿ ಕಾಣಿಸಿಕೊಂಡಿರುವಂಥದ್ದು. (ಏಜೆನ್ಸೀಸ್)
ಈ ಬ್ಯಾಂಕುಗಳ ಉದ್ಯೋಗಿಗಳ ಸಂಬಳ ದುಪ್ಪಟ್ಟು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + 20 =
Remember me
