ಲಖನೌ:ಮದುವೆಯಾಗಿ ನೂರಾರು ಕನಸು ಕಟ್ಟಿಕೊಂಡು ಗಂಡನ ಮನೆ ಹೊಸ್ತಿಲು ತುಳಿದಿದ್ದ ಹೆಣ್ಣು ಮಗಳೊಬ್ಬಳು, ಮೂರೇ ದಿನಗಳಲ್ಲಿ ತನ್ನ ಭಾವಂದಿರಿಂದಲೇ ಗ್ಯಾಂಗ್ ರೇಪ್​ಗೆ ಒಳಗಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಸಂತ್ರಸ್ತೆಯ ಗುಪ್ತಾಂಗಕ್ಕೆ ಕೋಲು ಹಾಕಿ ಅದಕ್ಕೆ ಬೆಂಕಿ ಹಚ್ಚಿರುವ ಆರೋಪವೂ ಕೇಳಿಬಂದಿದೆ.
ಉತ್ತರ ಪ್ರದೇಶದ ಬಾದಾನ್ ಜಿಲ್ಲೆಯಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಹೆಣ್ಣು ಮಗಳನ್ನು ಜರಿಫ್‌ನಗರದ ಉಸ್ಮಾನ್‌ಪುರದ ಯುವಕನಿಗೆ ಜೂನ್ 22ರಂದು ಮದುವೆ ಮಾಡಿಕೊಡಲಾಗಿತ್ತು. ಆಕೆ ನೂರಾರು ಕನಸುಗಳೊಂದಿಗೆ ಗಂಡನ ಮನೆಯ ಹೊಸ್ತಿಲು ತುಳಿದಿದ್ದಳು. ಆದರೆ ಆಕೆ ವರದಕ್ಷಿಣೆ ಹೊತ್ತು ತಂದಿಲ್ಲ ಎನ್ನುವ ಕಾರಣಕ್ಕೆ ಆಕೆಯ ಗಂಡನ ಮನೆಯವರಿಗೆ ಅವಳ ಮೇಲೆ ಕೋಪ ಇತ್ತಂತೆ. ಮದುವೆಯಾಗಿ ಮೂರು ದಿನ ಕಳೆದ ಬಳಿಕೆ ಆಕೆಯ ಭಾವಂದಿರು ಸೇರಿ ಒಟ್ಟು ಆರೇಳು ಮಂದಿ ಆಕೆಯ ಮೇಲೆ ಗ್ಯಾಂಗ್ ರೇಪ್​ ನಡೆಸಿದ್ದಾರೆ. ಇದಕ್ಕೆ ಅತ್ತಿಗೆಯಂದಿರೂ ಸಹಕರಿಸಿದ್ದಾರೆ. ಅದಾದ ಮೇಲೆ ಆಕೆಯ ಗುಪ್ತಾಂಗಕ್ಕೆ ಕೋಲನ್ನು ಹಾಕಿ ಅದಕ್ಕೆ ಬೆಂಕಿ ಹಚ್ಚಿರುವುದಾಗಿ ಆಕೆ ದೂರಿನಲ್ಲಿ ತಿಳಿಸಿದ್ದಾಳೆ.
ಇಷ್ಟಕ್ಕೆ ನಿಲ್ಲದ ಕೃತ್ಯ ಇನ್ನೂ ಮುಂದುವರಿದಿದೆ. ಮಹಿಳೆಗೆ ವಿಷ ಕುಡಿಸುವ ಪ್ರಯತ್ನವನ್ನೂ ಗಂಡನ ಮನೆಯವರು ಮಾಡಿದ್ದಾರೆ. ಈ ವಿಚಾರವನ್ನು ಆಕೆ ತನ್ನ ತಂದೆಗೆ ಹೇಳಿದ್ದು, ಆತ ಪೊಲೀಸರೊಂದಿಗೆ ಆ ಮನೆಗೆ ಹೋಗಿ ಮಗಳನ್ನು ಕರೆತಂದು ಆಸ್ಪತ್ರೆಗೆ ದಾಖಲಿಸಿದ್ದಾನೆ. ಈ ವಿಚಾರದಲ್ಲಿ ಪೊಲೀಸ್ ಪ್ರಕರಣವನ್ನೂ ದಾಖಲಿಸಲಾಗಿದೆ. ಸದ್ಯ ಸಂತ್ರಸ್ತೆಯ ಗಂಡನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)
ಬಾಸ್​ ಮರ್ಮಾಂಗವನ್ನೇ ಕತ್ತರಿಸಿ ಪೊಲೀಸರಿಗೆ ಕರೆ ಮಾಡಿದ ಮಹಿಳೆ! ಕಾರಣ ಕೇಳಿ ಬೆಚ್ಚಿಬಿದ್ದ ಪೊಲೀಸ್​

17 ವರ್ಷದ ವಿದ್ಯಾರ್ಥಿಯೊಂದಿಗೆ ಓಡಿಹೋದ ಶಿಕ್ಷಕಿ! ದಿನಕ್ಕೆ ನಾಲ್ಕು ತಾಸು ಒಟ್ಟಿಗೇ ಕುಳಿತಿರುತ್ತಿದ್ದರು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + 16 =
Remember me
