ನವದೆಹಲಿ:ಭಾರತದೊಂದಿಗಿನ ಹಿಂಸಾತ್ಮಕ ಸಂಘರ್ಷದ ಬಳಿಕ ಚೀನಾ ಭಾರಿ ಕುತಂತ್ರವನ್ನೇ ನಡೆಸಿದೆ. ಲಡಾಖ್​ಗೆ ಹರಿಯುವ ಗಾಲ್ವಾನ್​ ನದಿ ದಿಕ್ಕನ್ನೇ ಬದಲಿಸುತ್ತಿದೆ.
ಗಾಲ್ವಾನ್​ ಕಣಿವೆ ಪ್ರದೇಶದ ಚಿತ್ರಣವನ್ನೇ ಬದಲಿಸಲು ಚೀನಾ ಭಾರಿ ಕಾಮಗಾರಿ ಕೈಗೆತ್ತಿಕೊಂಡಿದೆ. ಭಾರತ- ಚೀನಾ ಸಂಘರ್ಷ​ಕ್ಕೂ ಮುನ್ನ ಈ ಪ್ರದೇಶದಲ್ಲಿ ಭಾರಿ ಯಂತ್ರೋಪಕರಣಗಳೇ ಇರಲಿಲ್ಲ. ಈಗ ಅವುಗಳು ಸಂಚಾರ ನಡೆಸುತ್ತಿರುವುದು ಸ್ಪಷ್ಟವಾಗಿ ಉಪಗ್ರಹ ಚಿತ್ರಗಳಲ್ಲಿ ಕಂಡುಬಂದಿದೆ.
ಇದನ್ನೂ ಓದಿ;ಭಾರತದ ವಿರುದ್ಧ ಚೀನಾ ಸೈಬರ್​ ದಾಳಿ; ಬ್ಯಾಂಕಿಂಗ್​ ವ್ಯವಸ್ಥೆ, ಎಟಿಎಂಗಳೇ ಗುರಿ
ಕೆಲವೆಡೆ, ನದಿಯ ಪಾತ್ರವನ್ನು ಇನ್ನಷ್ಟು ಅಗಲ ಮಾಡಲಾಗುತ್ತಿದೆ. ಇನ್ನು ಕೆಲವೆಡೆ ನದಿ ದಾಟಲು ಸಂಪರ್ಕ ಕಲ್ಪಿಸಲಾಗುತ್ತಿದೆ. ಎಲ್ಲಕ್ಕಿಂತ ಮುಖ್ಯವಾಗಿ ಲಡಾಖ್​ನತ್ತ ನೀರು ಹರಿಯದಂತೆ ಬೃಹತ್​ ಬಂಡೆಗಳನ್ನು ನದಿಗೆ ಅಡ್ಡಲಾಗಿ ಹಾಕಿರುವುದು ಪ್ಲಾನೆಟ್​ ಲ್ಯಾಬ್ಸ್​ ಬಿಡುಗಡೆ ಮಾಡಿರುವ ಉಪಗ್ರಹ ಚಿತ್ರಗಳಲ್ಲಿ ಗೊತ್ತಾಗುತ್ತಿದೆ.
ಈ ಪ್ರದೇಶದಲ್ಲಿ ಸಂಘರ್ಷಕ್ಕೂ ಮುನ್ನ ಇಂಥ ಚಟುವಟಿಕೆಗಳು ನಡದೇ ಇರಲಿಲ್ಲ ಎನ್ನುವುದು ಕೂಡ ಹಿಂದಿನ ಚಿತ್ರಗಳಲ್ಲಿ ಸ್ಪಷ್ಟವಾಗಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.
ಚಿತ್ರಗಳನ್ನು ನೋಡಿದರೆ, ಗಾಲ್ವಾನ್​ ಪ್ರದೇಶದಲ್ಲಿ ರಸ್ತೆ ಕಾಮಗಾರಿ ನಡೆಸಲಾಗುತ್ತಿರುವುದು ಗೊತ್ತಾಗುತ್ತದೆ. ಅಂದರೆ, ಅಲ್ಲಿ ನದಿಗೆ ಅಡ್ಡಲಾಗಿ ಡ್ಯಾಂ ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ;ಭಾರತ- ಚೀನಾ ಸಂಘರ್ಷದ ವಿಡಿಯೋ; ಗಾಯಾಳು ಯೋಧನ ರಕ್ಷಣೆಗೆ ನಿಂತ ಜತೆಗಾರರು
ಈ ಪ್ರದೇಶದಲ್ಲಿ ನೂರಾರು ವಾಹನಗಳು ಸಂಚರಿಸುತ್ತಿವೆ. ಅದರಲ್ಲೂ ಮುಖ್ಯವಾಗಿ ಚೀನಾ ಕಡೆಯಲ್ಲಿ ಇವುಗಳ ಸಂಚಾರ ಹೆಚ್ಚಾಗಿದೆ. ಭಾರತದ ಕಡೆಯಲ್ಲಿ 30-40 ವಾಹನಗಳೀದ್ದರೆ, ಚೀನಾ ಕಡೆಯಲ್ಲಿ ವಾಹನಗಳ ಸಂಖ್ಯೆ ನೂರಕ್ಕೂ ಹೆಚ್ಚಾಗಿದೆ ಎಂದು ಉಪಗ್ರಹ ಚಿತ್ರಗಳನ್ನು ವಿಶ್ಲೇಷಿಸಿರುವ ಅಂತಾರಾಷ್ಟ್ರೀಯ ಅಧ್ಯಯನ ಸಂಸ್ಥೆಯ ನಿರ್ದೇಶಕ ಜೆಫ್ರಿ ಲೂಯಿಸ್​ ಹೇಳಿದ್ದಾರೆ.
ಸಂದೇಶವೇನು ಇಲ್ಲ, ನಾವು ಉತ್ತರ ಕೊಡೋಕೆ ಸಜ್ಜಾಗಿದ್ದೇವೆ; ಚೀನಾಗೆ ವಾಯುಸೇನೆ ಎಚ್ಚರಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − thirteen =
Remember me
