ಬೆಂಗಳೂರು:ಚಂದ್ರಯಾನ-3ರ ವಿಚಾರದಲ್ಲಿ ವಿರೂಪಗೊಳಿಸಿದ ಚಾಯ್​ವಾಲಾ ಫೋಟೋ ಪೋಸ್ಟ್ ಮಾಡಿ, ವಿವಾದಕ್ಕೆ ಒಳಗಾಗಿದ್ದ ನಟ ಪ್ರಕಾಶ್ ರಾಜ್​ ನಿರಂತರವಾಗಿ ಟ್ರೋಲ್​ಗೆ ಒಳಗಾಗುತ್ತಲೇ ಇದ್ದಾರೆ. ಮತ್ತೊಂದೆಡೆ ಅವರು ಕೂಡ ಮೋದಿ ಬೆಂಬಲಿಗರ ಕಾಲೆಳೆಯುವುದನ್ನು ಮುಂದುವರಿಸಿದ್ದು, ಮತ್ತೆ ಮತ್ತೆ ಪೋಸ್ಟ್ ಮಾಡಿ ಕೆಣಕುತ್ತಲೂ ಇದ್ದಾರೆ.
ಚಂದ್ರಯಾನ ವಿಚಾರದಲ್ಲಿ ಮಾಡಿದ್ದ ಪೋಸ್ಟ್​ಗೆ ಬಂದ ಆಕ್ಷೇಪ, ಎದುರಿಸಿದ ಟ್ರೋಲ್​ಗೆ ಪ್ರತಿಯಾಗಿ ಪ್ರಕಾಶ್ ರಾಜ್ ಕೂಡ ಒಂದಾದ ಮೇಲೊಂದರಂತೆ ಪೋಸ್ಟ್ ಮಾಡಿದ್ದು, ಮತ್ತೆ ಮತ್ತೆ ಟ್ರೋಲ್​ಗೆ ಒಳಗಾಗಿದ್ದಾರೆ. ಇದೀಗ ಅವರು ಇನ್ನೆರಡು ವಿಚಾರವಾಗಿ ಕೇಂದ್ರ ಸರ್ಕಾರವನ್ನು, ಮೋದಿ, ಮೋದಿ ಬೆಂಬಲಿಗರನ್ನು ಗುರಿಯಾಗಿಸಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ:ಮತ್ತೆ ಸುದ್ದಿಯಲ್ಲಿ ಇಸ್ರೋದವರ ಸಂಬಳ; ಈ ಸಲ ಬೇರೆಯದೇ ರೀತಿಯಲ್ಲಿ…
69ನೇ ರಾಷ್ಟ್ರೀಯ ಚಲನಚಿತ್ರಗಳ ಪ್ರಶಸ್ತಿಯಲ್ಲಿ ಜೈ ಭೀಮ್​ ಸಿನಿಮಾ ಆಯ್ಕೆ ಆಗದಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಪ್ರಕಾಶ್ ರಾಜ್, ‘ಮಹಾತ್ಮನ ಕಗ್ಗೊಲೆಯನ್ನು ಸಮರ್ಥಿಸುವವರು.. ಬಾಬಾ ಸಾಹೇಬರ ಸಂವಿಧಾನವನ್ನು ಕೊಲ್ಲ ಹೊರಟವರು #JaiBhim ಸಂಭ್ರಮಿಸುವರೆ #justasking’ ಎಂದು ಪ್ರಶ್ನೆ ಮಾಡಿದ್ದಾರೆ.
ಮಹಾತ್ಮನ ಕಗ್ಗೊಲೆಯನ್ನು ಸಮರ್ಥಿಸುವವರು.. ಬಾಬಾ ಸಾಹೇಬರ ಸಂವಿಧಾನವನ್ನು ಕೊಲ್ಲ ಹೊರಟವರು#JaiBhim ಸಂಭ್ರಮಿಸುವರೆ#justaskingpic.twitter.com/vBABOGYIJC
— Prakash Raj (@prakashraaj)August 26, 2023

ಇನ್ನು ಚಂದ್ರಯಾನ-3ರ ವಿಚಾರದಲ್ಲಿ ಲ್ಯಾಂಡಿಂಗ್ ವೇಳೆ ಇಸ್ರೋ ಲೈವ್​ನಲ್ಲಿ ಬಂದು ಅಲ್ಲಿನ ವಿಜ್ಞಾನಿಗಳನ್ನು ಉದ್ದೇಶಿಸಿ ಮಾತಾಡಿದ್ದ ಪ್ರಧಾನಿಯನ್ನು ಇನ್ನೊಂದು ಎಕ್ಸ್​ ಪೋಸ್ಟ್​ನಲ್ಲಿ ಟೀಕಿಸಿದ್ದಾರೆ. 2011ರಲ್ಲಿ ಕ್ರಿಕೆಟ್ ವಿಶ್ವಕಪ್​ ಗೆದ್ದಾಗ ಮೋದಿ ಪ್ರಧಾನಿ ಆಗಿದ್ದರೆ ಎಂದು ವ್ಯಕ್ತಿಯೊಬ್ಬರು ಎಡಿಟ್ ಮಾಡಿ ಹಾಕಿದ್ದ ಎಕ್ಸ್​, ರಿಪೋಸ್ಟ್ ಮಾಡಿಕೊಂಡಿರುವ ಪ್ರಕಾಶ್​ ರಾಜ್, ನಕ್ಕು ಕೋಟ್ ಮಾಡಿದ್ದಾರೆ. ಇವು ಈಗ ಪ್ರಕಾಶ್ ರಾಜ್​ ವಿರುದ್ಧ ಮತ್ತಷ್ಟು ಜನ ಮುಗಿಬೀಳುವಂತೆ ಮಾಡಿದ್ದು, ನಟ ಟ್ರೋಲ್​ಗೂ ಒಳಗಾಗುತ್ತಿದ್ದಾರೆ.
😂https://t.co/NubHbvnBvK
— Prakash Raj (@prakashraaj)August 26, 2023

ಫ್ಯಾಕ್ಟ್​ ಚೆಕ್ ಮೂಲಕ ಮತ್ತೆ ಮೋದಿ ಬೆಂಬಲಿಗರ ಕಾಲೆಳೆದ ನಟ ಪ್ರಕಾಶ್ ರಾಜ್

ಒಬ್ಬ ಮಗನಿದ್ರೂ ಮತ್ತೆ ಗಂಡು ಮಗುವಾಗಿಲ್ಲ ಅಂತ ಮಕ್ಕಳ ಸಹಿತ ಬಾವಿಗೆ ಹಾರಿದ್ಲು; ಮೂವರು ಮಕ್ಕಳೂ ಸಾವು, ತಾಯಿ ಬಚಾವ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + 7 =
Remember me
