ಚಂಡೀಗಢ:ನಿಯಂತ್ರಣಕ್ಕೆ ಸಿಗದ ಹಣದುಬ್ಬರದಿಂದಾಗಿ ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರುತ್ತಿರುವ ನಡುವೆಯೇ, ಕೇಂದ್ರ ಸರ್ಕಾರವೂ ಜನಸಾಮಾನ್ಯರ ಮೇಲೆ ತೆರಿಗೆ ಹೆಚ್ಚಳದ ಹೊರೆಯನ್ನು ಹೇರಿದೆ.
ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಮಂಡಳಿಯ 47ನೇ ಸಭೆ ಹಲವು ವಸ್ತು ಹಾಗೂ ಸೇವೆಗಳ ಮೇಲಿನ ತೆರಿಗೆಯನ್ನು ಬದಲಾವಣೆ ಮಾಡಿ ನಿರ್ಧಾರ ಕೈಗೊಂಡಿದೆ. ಪ್ರಿ-ಪ್ಯಾಕ್ ಮತ್ತು ಪ್ರಿ-ಪ್ಯಾಕ್ ಲೇಬಲ್ ಹಾಕಿರುವ ಆಹಾರ ಪದಾರ್ಥಗಳ ಮೇಲೆ ತೆರಿಗೆ ವಿಧಿಸಲಾಗಿದ್ದರೆ, ಕೆಲ ವಸ್ತುಗಳ ಕರ ಕಡಿಮೆ ಮಾಡಲಾಗಿದೆ. ಈ ಬದಲಾವಣೆಗಳು ಜುಲೈ 18ರಿಂದ ಜಾರಿಗೆ ಬರಲಿವೆ.
ಕೆಲವು ವಸ್ತು ಮತ್ತು ಸೇವೆಗಳ ತೆರಿಗೆ ಹೆಚ್ಚಳ ಮತ್ತು ತೆರಿಗೆ ವಿನಾಯಿತಿಯನ್ನು ರದ್ದು ಮಾಡುವುದಕ್ಕೆ ಎರಡು ಸಮಿತಿಗಳು ಸಲ್ಲಿಸಿದ್ದ ಮಧ್ಯಂತರ ವರದಿಗೆ ಸಭೆ ಸಮ್ಮತಿ ಸೂಚಿಸಿದೆ. ಕ್ಯಾಸಿನೊ, ಆನ್​ಲೈನ್ ಗೇಮ್ ಲಾಟರಿ, ಕುದುರೆ ರೇಸ್​ಗಳ ಮೇಲೆ ಶೇ.28ರಷ್ಟು ತೆರಿಗೆ ವಿಧಿಸಬೇಕು ಎಂಬ ಶಿಫಾರಸನ್ನು ಮರುಪರಿಶೀಲನೆ ನಡೆಸಿ ಜುಲೈ 15ಕ್ಕೆ ಹೊಸ ವರದಿ ಸಲ್ಲಿಸುವಂತೆ ಸಚಿವರ ಗುಂಪಿನ ಸಮಿತಿಗೆ ಸೂಚಿಸಿದೆ. ಹಾಗೆಯೇ ಜಿಎಸ್​ಟಿ ಸ್ಲ್ಯಾಬ್ ಪರಿಷ್ಕರಣೆ ಕುರಿತು ಮೂರು ತಿಂಗಳಲ್ಲಿ ವರದಿ ಸಲ್ಲಿಸಲು ತಿಳಿಸಿದೆ. ಗುರುವಾರಕ್ಕೆ ಕೊನೆಗೊಳ್ಳಲಿರುವ (ಜು.30) ರಾಜ್ಯಗಳಿಗೆ ನೀಡುವ ಪರಿಹಾರವನ್ನು ಮುಂದುವರಿಸಬೇಕು ಎಂಬ ಮನವಿಯ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. 12ಕ್ಕೂ ಹೆಚ್ಚು ರಾಜ್ಯಗಳು ಜಿಎಸ್​ಟಿ ಪರಿಹಾರ ಮುಂದುವರಿಸಲು ಒತ್ತಾಯಿಸಿವೆ.
ಆಯ್ಕೆಗೆ ಅವಕಾಶ:ರಸ್ತೆ ಸಾರಿಗೆ ಸೇವಾದಾತರಿಗೆ ಐಟಿಸಿ ಹೊರತಾಗಿ ಶೇ.5, ಐಟಿಸಿಸಹಿತವಾಗಿ ಶೇ.12ರಷ್ಟು ತೆರಿಗೆ ವಿಧಿಸುವ ಆಯ್ಕೆ ನೀಡಲಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷೆಯಲ್ಲಿ ಮಂಗಳವಾರ ಮತ್ತು ಬುಧವಾರ ನಡೆದ ಈ ಸಭೆಯಲ್ಲಿ ರಾಜ್ಯಗಳ ಹಣಕಾಸು ಮಂತ್ರಿಗಳು ಹಾಗೂ ರಾಜ್ಯಗಳಿಂದ ನಿಯೋಜಿತರಾಗಿದ್ದ ಪ್ರತಿನಿಧಿಗಳು ಭಾಗಿಯಾಗಿದ್ದರು. ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಮೇಘಾಲಯ ಸಿಎಂ ಕಾನ್ರಾಡ್ ಸಂಗ್ಮಾ ನೇತೃತ್ವದ ಸಮಿತಿಗಳು ತೆರಿಗೆ ಪರಿಷ್ಕರಣೆ ಕುರಿತು ಮಧ್ಯಂತರ ವರದಿಯನ್ನು ಮಂಡಿಸಿದ್ದವು.
ಐಜಿಎಸ್​ಟಿಯಿಂದ ವಿನಾಯಿತಿ:ಕ್ರಿಮಿ-ಕೀಟಗಳಿಂದ ಹರಡುವ ಸಾಂಕ್ರಾಮಿಕ ರೋಗಗಳ ತಡೆಯ ರಾಷ್ಟ್ರೀಯ ಕಾರ್ಯಕ್ರಮಕ್ಕೆ ವಿದೇಶದಿಂದ ಪೂರೈಕೆಯಾಗುವ ಮಾತ್ರೆಗಳು, ಖಾಸಗಿ ಸಂಸ್ಥೆಗಳು ಆಮದು ಮಾಡಿಕೊಳ್ಳುವಂತಹ ಮತ್ತು ರಕ್ಷಣಾ ಪಡೆಗಳ ಬಳಕೆಗೆ ನೀಡುವಂತಹ ಉಪಕರಣಗಳನ್ನು ಐಜಿಎಸ್​ಟಿಯಿಂದ ಹೊರಗಿಡಲಾಗಿದೆ. ಪ್ಯಾಕ್ ಮಾಡದ, ಲೇಬಲ್ ಇಲ್ಲದ ಆಹಾರ ಪದಾರ್ಥಗಳಿಗೆ ತೆರಿಗೆ ಇಲ್ಲ.
ರಾಜ್ಯಗಳಿಗೆ ಆಗುವ ನಷ್ಟವನ್ನು ತುಂಬಿಕೊಡಲು ನೀಡಲಾಗುತ್ತಿದ್ದ ಪರಿಹಾರದ ಅವಧಿ ಜೂ.30ಕ್ಕೆ ಕೊನೆಗೊಂಡಿದೆ. ಇದನ್ನು ಮತೆôದು ವರ್ಷ ಅಥವಾ ಕೆಲವು ಕಾಲ ಮುಂದುವರಿಸುವಂತೆ ಹಲವು ರಾಜ್ಯಗಳು ಮನವಿ ಮಾಡಿದ್ದವು. ಆದರೆ, ರಾಜ್ಯಗಳು ವರಮಾನದ ಮೂಲ ಕಂಡುಕೊಳ್ಳಬೇಕೆ ಹೊರತು ಕೇಂದ್ರದ ಮೇಲೆಯೇ ಅವಲಂಬನೆ ಆಗಬಾರದು.
|ನಿರ್ಮಲಾ ಸೀತಾರಾಮನ್ಜಿಎಸ್​ಟಿ ಮಂಡಳಿ ಅಧ್ಯಕ್ಷೆ
ಪ್ರಧಾನಿ ಮೋದಿಯವರ ‘ಗಬ್ಬರ್ ಸಿಂಗ್ ಟ್ಯಾಕ್ಸ್’ ಈಗ ಪ್ರಿ-ಪ್ಯಾಕ್ ಆಹಾರ ಪದಾರ್ಥಗಳ ಮೇಲೆ ತೆರಿಗೆ ಹೇರಿರುವ ಮೂಲಕ ‘ಗೃಹಸ್ತಿ ಸರ್ವನಾಶ ಟ್ಯಾಕ್ಸ್’ ಆಗಿದೆ. ಜನರ ಆದಾಯ ಕಸಿಯುವ, ಉದ್ಯೋಗ ಕಸಿಯುವ ಮತ್ತು ಹಣದುಬ್ಬರ ಹೆಚ್ಚಿಸುವ ಕ್ರಮ ಇದಾಗಿದೆ.
|ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ
ಸಣ್ಣ ಉದ್ದಿಮೆಗಳಿಗೆ ನಿರಾಳ:ವಾರ್ಷಿಕವಾಗಿ 40 ಲಕ್ಷ ರೂಪಾಯಿ ವಹಿವಾಟು ನಡೆಸುವ ಉದ್ದಿಮೆ, ಸರಕು, ಸೇವೆ ಕಲ್ಪಿಸುವ ಹಾಗೂ ಆನ್​ಲೈನ್ ಮೂಲಕ ಸರಕು ಮಾರಾಟ ಮಾಡುವ 20 ಲಕ್ಷ ರೂಪಾಯಿಯೊಳಗಿನ ಕಂಪನಿಗಳಿಗೆ ಜಿಎಸ್​ಟಿ ಕಡ್ಡಾಯ ನೋಂದಣಿಯಿಂದ ವಿನಾಯಿತಿ ನೀಡಲಾಗಿದೆ. ಚಿನ್ನಾಭರಣ, ಹರಳುಗಳ ಸಾಗಣೆಯ ಇ-ವೇ ಬಿಲ್​ಗಳ ಬಗ್ಗೆ ರಾಜ್ಯ ಸರ್ಕಾರಗಳು ತೆರಿಗೆ ನಿರ್ಧಾರ ಮಾಡಲಿ ಎಂದು ಜಿಎಸ್​ಟಿ ಮಂಡಳಿ ಸಲಹೆ ನೀಡಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + 8 =
Remember me
