ನವದೆಹಲಿ:ಆಗ್ನೇಯ ಏಷ್ಯಾ ಮತ್ತು ಯುರೋಪ್ ದೇಶಗಳಲ್ಲಿ ಕೋವಿಡ್ ಪ್ರಕರಣ ಉಲ್ಬಣಗೊಳ್ಳುತ್ತಿರುವ ಬೆನ್ನಲ್ಲೇ ಸೋಂಕು ಪ್ರತಿಬಂಧಕಕ್ಕೆ ಸೂಚಿಸಿರುವ ಐದು ಹಂತದ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನ ಮಾಡುವಂತೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ಸೂಚನೆ ನೀಡಿದೆ.
ಯೂರೋಪ್​ಗಳಲ್ಲಿ ಪರಿಸ್ಥಿತಿ ಗಂಭೀರವಾಗುತ್ತಿದೆ. ಭಾರತದಲ್ಲಿ ಇದಕ್ಕೆ ಅವಕಾಶ ಆಗಬಾರದು. ಪರೀಕ್ಷೆ, ನಿಗಾ, ಚಿಕಿತ್ಸೆ, ಕೋವಿಡ್ ನಿಯಮಗಳು ಅನುಸರಣೆ, ಲಸಿಕೆ ಐದು ಕ್ರಮಗಳು ಸಮರ್ಪಕವಾಗಿದ್ದರೆ, ದೇಶದ ಆರ್ಥಿಕತೆ ಮತ್ತು ಆಯಾ ಪ್ರದೇಶದ ಸಾಮಾಜಿಕ ಚಟುವಟಿಕೆಗಳು ಅಡೆತಡೆ ಇಲ್ಲದೆ ನಡೆಯುತ್ತವೆ ಎಂದು ಕೇಂದ್ರ ಹೇಳಿದೆ.
ಈ ಕುರಿತಂತೆ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದ್ದು, ಟೆಸ್ಟ್ ಸಂಖ್ಯೆ ಹೆಚ್ಚಿಸುವುದು, ಹೊಸ ತಳಿ ಗುರುತಿಸುವಿಕೆಯಲ್ಲಿ ತಡ ಆಗದಿರುವುದು, ಲಸಿಕೆ ಪಡೆದುಕೊಳ್ಳುವಂತೆ ಜನರನ್ನು ಉತ್ತೇಜಿಸುವ ಕಾರ್ಯಗಳು ನಿರಂತರವಾಗಿ ನಡೆಯಬೇಕು ಎಂದು ಸಲಹೆ ನೀಡಿದ್ದಾರೆ.
ಐಸಿಎಂಆರ್ ಮಾರ್ಗದರ್ಶಿಯಂತೆ ಪರೀಕ್ಷೆಗೆ ಸಂಗ್ರಹಿಸಿದ ಮಾದರಿಗಳನ್ನು (ಸ್ಯಾಂಪಲ್) ನಿಯಮಿತವಾಗಿ ಜೀನೋಮ್ ಸಿಕ್ವೆನ್ಸ್ ಮಾಡುವ ಐಎನ್​ಎಸ್​ಸಿಒಜಿಗೆ ಕಳುಹಿಸಿಕೊಡಬೇಕು. ಇದರಿಂದ ಹೊಸ ತಳಿಗಳನ್ನು ಬೇಗನೆ ಗುರುತಿಸಲು ಸಾಧ್ಯ. ಜತೆಗೆ ಸೋಂಕಿತರ ಹಿಸ್ಟರಿ ಗಮನಿಸುವುದು ಮತ್ತು ಅವರ ಸಂಪರ್ಕಕ್ಕೆ ಬಂದವರ ಮೇಲೆ ನಿಗಾ ಇರಿಸುವ ಕಾರ್ಯವು ಆಗಬೇಕು ಇದರಿಂದ ಸೋಂಕು ಸಾಮುದಾಯಿಕವಾಗುವುದನ್ನು ತಡೆಬಹುದು ಎಂದು ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − 8 =
Remember me
