ರಾಜಕೀಯ ಸವಾಲು ಗಳಿಂದ ಕೂಡಿದ ಜಾಗತಿಕ ಪರಿಸರದ ನಡುವೆ ಭಾರತವು 20 ರ ಗುಂಪಿನ (ಜಿ20) ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದೆ. ನಿಧಾನ ಗತಿಯ ಜಾಗತಿಕ ಬೆಳವಣಿಗೆ ಮತ್ತು ವ್ಯಾಪಾರ, ಅಧಿಕ ಹಣದುಬ್ಬರ, ಆಕ್ರಮಣಕಾರಿ ವಿತ್ತೀಯ ನೀತಿ ಬಿಗಿಗೊಳಿಸುವಿಕೆ ಮತ್ತು ಸಂಬಂಧಿತ ಸನ್ನಿವೇಶಗಳು, ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು, ಸಾಲದ ಬಿಕ್ಕಟ್ಟು, ಹವಾಮಾನ ಬದಲಾವಣೆ ಮತ್ತು ಸಾಂಕ್ರಾಮಿಕ ರೋಗಗಳೊಂದಿಗೆ ಜಿ20ಯು ಸವಾಲಿನ ಸನ್ನಿವೇಶವನ್ನು ಎದುರಿಸುತ್ತಿದೆ.
ಜಾಗತೀಕರಣದ ಹೆಣಿಗೆಯನ್ನು ಎಳೆಯುವ ಕೇಂದ್ರಾಪಗಾಮಿ ಶಕ್ತಿಗಳ ನಡುವೆ, ಜಾಗತಿಕ ನೀತಿ ಸಹಕಾರವನ್ನು ಬೆಳೆಸುವಲ್ಲಿ ಜಿ20 ಪಾತ್ರವು ನಿರ್ಣಾಯಕವಾಗಿದೆ. ಕೊಳ್ಳುವ ಶಕ್ತಿಯ ಸಮಾನತೆ (PPP) ನಿಯಮಗಳಲ್ಲಿ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆ ಮತ್ತು ಮಾರುಕಟ್ಟೆ ವಿನಿಮಯ ದರಗಳ ವಿಷಯದಲ್ಲಿ ಐದನೇ ಅತಿದೊಡ್ಡ ಆರ್ಥಿಕತೆಯಾಗಿ, ಭಾರತವು ಜಿ20 ದೇಶಗಳ ಜಿಡಿಪಿಯ ನಾಮಮಾತ್ರದಲ್ಲಿ 3.6 ಶೇಕಡಾ ಮತ್ತು ಪಿಪಿಪಿ ಪರಿಭಾಷೆಯಲ್ಲಿ 8.2 ಶೇಕಡ ಪಾಲು ಹೊಂದಿದೆ. 2023 ರಲ್ಲಿ ಭಾರತದ ಜಿಡಿಪಿ ಶೇ. 6.1 ಕ್ಕೆ ಬೆಳೆಯುತ್ತದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಅಂದಾಜಿಸಿದೆ. ಇದು ಜಿ20 ರಾಷ್ಟ್ರಗಳಲ್ಲಿ ಅತ್ಯಧಿಕವಾಗಿದೆ. ಭಾರತದ ಜಿ20 ಅಧ್ಯಕ್ಷತೆಯ ಆದ್ಯತೆಗಳು ಏಕತೆ ಮತ್ತು ಪರಸ್ಪರ ಸಂಬಂಧದ ದೃಷ್ಟಿಯನ್ನು ಆವರಿಸುತ್ತವೆ.
ಡಿಜಿಟಲ್ ತಂತ್ರಜ್ಞಾನಗಳಲ್ಲಿನ ನಮ್ಮ ಪ್ರಗತಿ ಮತ್ತು ಫಿನ್​ಟೆಕ್ ಪರಿಸರ ವ್ಯವಸ್ಥೆಯಿಂದ ಪಡೆದ ನಮ್ಮ ಅನುಭವಗಳು ಆರ್ಥಿಕ ಸೇರ್ಪಡೆಯನ್ನು ವಿಸ್ತರಿಸುವಲ್ಲಿ, ಉತ್ಪಾದಕತೆ ಮತ್ತು ಆರ್ಥಿಕ ಏಕೀಕರಣಕ್ಕೆ ತಂತ್ರಜ್ಞಾನವನ್ನು ಸದ್ಬಳಕೆ ಮಾಡಿಕೊಳ್ಳುವಲ್ಲಿ ಮತ್ತು ಹವಾಮಾನ ಬದಲಾವಣೆಯ ಪರಿಣಾಮಗಳನ್ನು ತಗ್ಗಿಸುವಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳು ಸವಾಲುಗಳನ್ನು ಎದುರಿಸುವಲ್ಲಿ ಪರಿಣಾಮಕಾರಿಯಾಗಿವೆ. ಈ ಕ್ಷೇತ್ರಗಳಲ್ಲಿ, ನಮ್ಮ ಪ್ರೆಸಿಡೆನ್ಸಿಯು ಗಣನೀಯ ಕೊಡುಗೆಗಳನ್ನು ನೀಡಬಹುದೆಂದು ನಾವು ನಂಬುತ್ತೇವೆ.
ಭಾರತದ ಜಿ20 ಪ್ರೆಸಿಡೆನ್ಸಿಯ ಮೊದಲ ಹಣಕಾಸು ಟ್ರ್ಯಾಕ್ (FT) ಈವೆಂಟ್- ಹಣಕಾಸು ಮತ್ತು ಸೆಂಟ್ರಲ್ ಬ್ಯಾಂಕ್ ಡೆಪ್ಯೂಟೀಸ್ (FCBD) ಸಭೆ – ಡಿಸೆಂಬರ್ 13-15ರವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ. ಈ ಸಭೆಯಲ್ಲಿ, ಭಾರತದ ಆದ್ಯತೆಗಳು ಅನಾವರಣಗೊಳ್ಳಲಿದೆ. ಎಫ್​ಟಿ ಎಂಟು ಕಾರ್ಯಸೂಚಿ ಹೊಂದಿದೆ. ಅವೆಂದರೆ- ಅಂತಾರಾಷ್ಟ್ರೀಯ ಹಣಕಾಸು ವಾಸ್ತುಶಿಲ್ಪ, ಜಾಗತಿಕ ಆರ್ಥಿಕತೆ, ಮೂಲಸೌಕರ್ಯ ಹೂಡಿಕೆ, ಸುಸ್ಥಿರ ಹಣಕಾಸು, ಅಂತಾರಾಷ್ಟ್ರೀಯ ತೆರಿಗೆ, ಆರೋಗ್ಯ ಮತ್ತು ಹಣಕಾಸು, ಹಣಕಾಸು ವಲಯದ ನಿಯಂತ್ರಕ ಸಮಸ್ಯೆಗಳು ಮತ್ತು ಹಣಕಾಸು ಸೇರ್ಪಡೆ.
ಜಿ20 ರ ಅಧ್ಯಕ್ಷತೆಯನ್ನು ಸ್ವೀಕರಿಸಿದ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹೀಗೆ ಹೇಳಿದರು: ‘ಭಾರತದ ಜಿ20 ಆದ್ಯತೆಗಳನ್ನು ನಮ್ಮ ಜಿ20 ಪಾಲುದಾರರೊಂದಿಗೆ ಸಮಾಲೋಚಿಸಿ ರೂಪಿಸಲಾಗುವುದು, ಆದರೆ ಜಾಗತಿಕ ದಕ್ಷಿಣದಲ್ಲಿನ ನಮ್ಮ ಸಹಪ್ರಯಾಣಿಕರ ಧ್ವನಿಯನ್ನು ಸಾಮಾನ್ಯವಾಗಿ ಯಾರೂ ಆಲಿಸುವುದಿಲ್ಲ. ಭಾರತದ ಪ್ರಮುಖ FT ಆದ್ಯತೆಗಳು ಅವರ ಬದ್ಧತೆಯನ್ನು ಕಾರ್ಯರೂಪಕ್ಕೆ ತರುತ್ತವೆ. ಅವು ಜಾಗತಿಕ ಹಣಕಾಸು ಸುರಕ್ಷತಾ ಜಾಲಗಳನ್ನು ಬಲಪಡಿಸುವುದು, ಜಾಗತಿಕ ಸಾಲದ ದೋಷಗಳನ್ನು ನಿರ್ವಹಿಸುವುದು, ಆಹಾರ ಮತ್ತು ಶಕ್ತಿಯ ಅಭದ್ರತೆಯ ಸ್ಥೂಲ ಆರ್ಥಿಕ ಪರಿಣಾಮಗಳನ್ನು ನಿರ್ಣಯಿಸುವುದು ಮತ್ತು ನಾಳೆಯ ನಗರಗಳಿಗೆ ಹಣಕಾಸು ಒದಗಿಸುವುದು ಸೇರಿವೆ. ಹೆಚ್ಚಿನ ಜಿ20 ದೇಶಗಳು ತಮ್ಮ ನಿವ್ವಳ-ಶೂನ್ಯ ಗುರಿ ದಿನಾಂಕಗಳನ್ನು ಘೊಷಿಸಿರುವುದರಿಂದ ಹವಾಮಾನ ಕ್ರಮಕ್ಕಾಗಿ ಸಮಯೋಚಿತ ಮತ್ತು ಸಾಕಷ್ಟು ಹಣಕಾಸಿನ ಸಂಪನ್ಮೂಲಗಳನ್ನು ಸಜ್ಜುಗೊಳಿಸುವಲ್ಲಿಯೂ ನಾವು ಕೆಲಸ ಮಾಡುತ್ತೇವೆ. ಅಂತಾರಾಷ್ಟ್ರೀಯ ತೆರಿಗೆ, ತೆರಿಗೆ ಸವಾಲುಗಳನ್ನು ಎದುರಿಸುವುದು, ಸಾಮರ್ಥ್ಯ ವೃದ್ಧಿ ಮತ್ತು ತೆರಿಗೆ ಪಾರದರ್ಶಕತೆಯನ್ನು ಹೆಚ್ಚಿಸುವುದು ಸೇರಿದಂತೆ ಜಿ20 ಮಾಡಿದ ಗಮನಾರ್ಹ ಪ್ರಗತಿಯನ್ನು ನಾವು ನಿರ್ವಿುಸುತ್ತೇವೆ. ಸಾಂಕ್ರಾಮಿಕ ರೋಗಗಳಿಗೆ ಸಂಬಂಧಿಸಿದ ಅಪಾಯಗಳು ಮತ್ತು ದುರ್ಬಲತೆಗಳನ್ನು ಗುರುತಿಸಲು ಮತ್ತು ಪರಿಹರಿಸಲು ಮತ್ತು ಹೊಸ ಸಾಂಕ್ರಾಮಿಕ ಬೆದರಿಕೆ ಎದುರಿಸಲು ಸನ್ನದ್ಧತೆಯನ್ನು ಸುಧಾರಿಸಲು ನಾವು ಜಿ20-ಚಾಲಿತ ಹಣಕಾಸು ಮತ್ತು ಆರೋಗ್ಯ ಸಮನ್ವಯವನ್ನು ಅಭಿವೃದ್ಧಿಪಡಿಸುವುದನ್ನು ಮುಂದುವರಿಸುತ್ತೇವೆ.
ಹಣಕಾಸಿನ ವಲಯದ ನಿಯಂತ್ರಣದೊಳಗೆ, ನಾವು ತಾಂತ್ರಿಕ ಬೆಳವಣಿಗೆಗಳು ನೀಡುವ ಅಪಾಯಗಳು ಮತ್ತು ಅವಕಾಶಗಳ ಮೇಲೆ ಕೇಂದ್ರೀಕರಿಸುತ್ತೇವೆ. ಮರುಕಳಿಸುವ ಪ್ರಕ್ಷುಬ್ಧತೆ, ವಿಶಾಲವಾದ ಕ್ರಿಪ್ಟೋ ಮಾರುಕಟ್ಟೆಗಳ ಪತನವು ಆತಂಕಗಳನ್ನು ಹುಟ್ಟುಹಾಕಿದೆ. ಆದ್ದರಿಂದ, ವಿತ್ತೀಯ ನೀತಿ ಮತ್ತು ಸ್ಥೂಲ ಆರ್ಥಿಕ ಕಾಳಜಿಗಳು, ಡೇಟಾ ಗೌಪ್ಯತೆ, ಮಾರುಕಟ್ಟೆ ಸಮಗ್ರತೆ, ಸ್ಪರ್ಧೆಯ ನೀತಿ ಮತ್ತು ವಿವಿಧ ಅಂತಾರಾಷ್ಟ್ರೀಯ ಸಂಸ್ಥೆಗಳ ಕೆಲಸವನ್ನು ಸಂಯೋಜಿಸುವ ಮೂಲಕ ಜಿ20ಯು ಕ್ರಿಪ್ಟೋ ಚರ್ಚೆಯನ್ನು ವಿಸ್ತರಿಸುವುದು ಅವಶ್ಯಕ.
ವೇಗವಾಗಿ ಬೆಳೆಯುತ್ತಿರುವ ಡಿಜಿಟಲ್ ಹಣಕಾಸು ಸೇವೆಗಳು ಮತ್ತು ಥರ್ಡ್ ಪಾರ್ಟಿ ಸೇವೆಗಳ ಮೇಲಿನ ಹೆಚ್ಚಿದ ಅವಲಂಬನೆಯು ಹಣಕಾಸಿನ ವ್ಯವಸ್ಥೆಯ ಕಾರ್ಯಾಚರಣೆ, ದ್ರವ್ಯತೆ ಮತ್ತು ಏಕಾಗ್ರತೆಯನ್ನು ಅಪಾಯಗಳಿಗೆ ಒಡ್ಡುತ್ತದೆ. ಈ ಅಪಾಯಗಳನ್ನು ನಿರ್ವಹಿಸಲು ಅಂತಾರಾಷ್ಟ್ರೀಯ ಸಹಕಾರವನ್ನು ಉತ್ತೇಜಿಸಲು ನಾವು ಪ್ರಯತ್ನಿಸುತ್ತೇವೆ. ಆರ್ಥಿಕತೆಯು ಹೆಚ್ಚು ಡಿಜಿಟೈಸ್ ಆಗುತ್ತಿದ್ದಂತೆ, ಸೈಬರ್ ಅಪಾಯವು ಹಣಕಾಸು ವ್ಯವಸ್ಥೆಗೆ ಅಪಾಯವನ್ನುಂಟುಮಾಡುತ್ತದೆ – ಸರಪಳಿಯಲ್ಲಿ ಎಲ್ಲಿಯಾದರೂ ಸ್ಥಗಿತ ಉಂಟಾದರೆ ಇಡೀ ಹಣಕಾಸು ವ್ಯವಸ್ಥೆಯ ಮೇಲೆ ಪರಿಣಾಮ ಉಂಟುಮಾಡಬಹುದು. ನಮ್ಮ ಅಧ್ಯಕ್ಷತೆಯ ಅವಧಿಯಲ್ಲಿ, ಸೈಬರ್ ಅಪಾಯ ತಗ್ಗಿಸುವಲ್ಲಿ ಜಾಗತಿಕ ಸಹಕಾರವನ್ನು ಹೆಚ್ಚಿಸಲು ಬಯಸುತ್ತೇವೆ.
2030 ರ ವೇಳೆಗೆ ವಲಸಿಗರ ರವಾನೆಗಳ ವಹಿವಾಟಿನ ವೆಚ್ಚವನ್ನು ಶೇಕಡಾ 3 ಕ್ಕಿಂತ ಕಡಿಮೆಗೆ ಕಡಿಮೆ ಮಾಡುವ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು (ಖಈಎ) ಪೂರೈಸಲು, ನಮ್ಮ ವಿಧಾನವು ರಾಷ್ಟ್ರೀಯ ವೇಗದ ಪಾವತಿ ವ್ಯವಸ್ಥೆಗಳ ಪರಸ್ಪರ ಕಾರ್ಯಸಾಧ್ಯತೆಯ ಮೂಲಕ ಹೆಚ್ಚಿನ ವಹಿವಾಟು ವೆಚ್ಚಗಳು ಮತ್ತು ಪಾವತಿಗಳ ಸಮಯವನ್ನು ಕಡಿಮೆ ಮಾಡುತ್ತದೆ. ಆರ್ಥಿಕ ಸೇರ್ಪಡೆಯನ್ನು ಹೆಚ್ಚಿಸಲು ಮತ್ತು ಉತ್ಪಾದಕತೆಯ ಲಾಭಗಳನ್ನು ಬಳಸಿಕೊಳ್ಳಲು ನಾವು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ಬಳಸಿಕೊಳ್ಳುತ್ತೇವೆ.
ಜಾಗತಿಕ ಸಮಸ್ಯೆಗಳಿಗೆ ಜಾಗತಿಕವಾಗಿ ಸಂಘಟಿತ ಪರಿಹಾರಗಳು ಬೇಕು ಎಂಬ ನಿಲುವಿಗೆ ಬದ್ಧವಾಗಿರುವ ಜಿ20, ಈ ಗುರಿ ಸಾಧಿಸುವ ಹೊಸ ಪ್ರಯತ್ನದಲ್ಲಿ ವಿಶ್ವದ ಪ್ರಮುಖ ಆರ್ಥಿಕತೆಗಳನ್ನು ಒಟ್ಟುಗೂಡಿಸುವ ಮೂಲಕ ಜಗತ್ತಿಗೆ ಭರವಸೆಯನ್ನು ನೀಡುತ್ತದೆ. ಅದುವೇ- ಸಮರ್ಥನೀಯ, ಸಮತೋಲಿತ ಮತ್ತು ಅಂತರ್ಗತ ಬೆಳವಣಿಗೆ. ಪ್ರತಿಯೊಂದು ಬಿಕ್ಕಟ್ಟು ಒಂದು ಅವಕಾಶವನ್ನು ನೀಡುತ್ತದೆ. ಆದ್ದರಿಂದ, ಪ್ರಸ್ತುತ ನೀತಿಬಿಕ್ಕಟ್ಟು ಹೊಸ ಸವಾಲುಗಳನ್ನು ಎದುರಿಸಲು, ಜಾಗತಿಕ ಆರ್ಥಿಕತೆಯನ್ನು ಜಿ20 ಆಶಯದಂತೆ ರೂಪಿಸುವ ಪಥದಲ್ಲಿ ಹೆಜ್ಜೆ ಇರಿಸಲು ಜಾಗತಿಕ ನೀತಿ ಸಹಕಾರದ ಪುನಶ್ಚೇತನಕ್ಕೆ ಕಾರಣವಾಗುತ್ತದೆ ಎಂದು ನಾವು ಭಾವಿಸುತ್ತೇವೆ. ಸಮಾನ ಮತ್ತು ಅಂತರ್ಗತ ಮಾನವ ಪ್ರಗತಿಯು ವಸುಧೈವ ಕುಟುಂಬಕಂ – ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯವನ್ನು ಅವಲಂಬಿಸಿದೆ.’
(ಅಜಯ್ ಸೇಠ್ ಅವರು ಕೇಂದ್ರ ಹಣಕಾಸು ಸಚಿವಾಲಯದ ಕಾರ್ಯದರ್ಶಿ ಮತ್ತು ಮೈಕೆಲ್ ಪಾತ್ರಾ ಅವರು ಆರ್​ಬಿಐ ಡೆಪ್ಯುಟಿ ಗವರ್ನರ್)
ಮೇಲಿಂದ ಮೇಲೆ ಸಂಭವಿಸುತ್ತಲೇ ಇದೆ ಹೃದಯಾಘಾತ; ಇಂದು ಮತ್ತೊಂದು ಪ್ರಕರಣ, ವಿಚಾರಣಾಧೀನ ಕೈದಿ ಸಾವು

‘ಸತ್ತವಳು’ 6 ವರ್ಷಗಳ ಬಳಿಕ 2ನೇ ಗಂಡನೊಂದಿಗೆ ಪತ್ತೆ!; ಈಕೆಯ ಕೊಲೆ ಪ್ರಕರಣ ಭೇದಿಸಿದ್ದ ಪೊಲೀಸರಿಗೆ ಸಿಕ್ಕಿತ್ತು ಬಹುಮಾನ!

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:13 + six =
Remember me
