|ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ
ಭಾರತದ ತವಾಂಗ್ ಪ್ರದೇಶದಲ್ಲಿ ಚೀನಾ ತಗಾದೆ ತೆಗೆದ ಕೆಲವೇ ದಿನಗಳ ಬಳಿಕ ಭಾರತ ತನ್ನ ಅತ್ಯಂತ ಶಕ್ತಿಶಾಲಿ ಅಗ್ನಿ-5 ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಪರೀಕ್ಷೆಗೊಳಪಡಿಸಿತು. ಸ್ಟ್ರಾಟೆಜಿಕ್ ಫೋರ್ಸಸ್ ಕಮಾಂಡ್ (ಎಸ್ಎಫ್‌ಸಿ) ಮೂಲಕ ನಿರ್ವಹಿಸಲ್ಪಟ್ಟ ಈ ಕ್ಷಿಪಣಿಯನ್ನು ಒಡಿಶಾ ಕರಾವಳಿ ತೀರದ ಎಪಿಜೆ ಅಬ್ದುಲ್ ಕಲಾಂ ದ್ವೀಪದಿಂದ ಯಶಸ್ವಿಯಾಗಿ ಪರೀಕ್ಷೆಗೊಳಪಡಿಸಲಾಯಿತು.
ಅಗ್ನಿ-5 ಒಂದು ನ್ಯೂಕ್ಲಿಯರ್ ಸಾಮರ್ಥ್ಯ ಹೊಂದಿರುವ ಬ್ಯಾಲಿಸ್ಟಿಕ್ ಕ್ಷಿಪಣಿಯಾಗಿದ್ದು, ಮೂರು ಹಂತಗಳ ಘನ ಇಂಧನ ಇಂಜಿನ್ ಹೊಂದಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಓ) ಅಭಿವೃದ್ಧಿ ಪಡಿಸಿರುವ ಈ ಕ್ಷಿಪಣಿ 5,500 ಕಿಲೋಮೀಟರ್ ವ್ಯಾಪ್ತಿ ಹೊಂದಿದೆ. ಈ ವ್ಯಾಪ್ತಿಯ ಪರಿಣಾಮವಾಗಿ, ಭಾರತಕ್ಕೆ ಇಡಿಯ ಏಷ್ಯಾವನ್ನು ವ್ಯಾಪಿಸಲು ಸಾಧ್ಯವಾಗುತ್ತದೆ. ಅದರೊಡನೆ, ಈ ವ್ಯಾಪ್ತಿಯ ಪರಿಣಾಮವಾಗಿ ಭಾರತ ಚೀನಾದ ಮುಖ್ಯ ಭೂಭಾಗಗಳ ಮೇಲೂ ದಾಳಿ ನಡೆಸಬಲ್ಲ ಸಾಮರ್ಥ್ಯ ಗಳಿಸಿಕೊಂಡಿದೆ. ಈಗ ಭಾರತದ ರಕ್ಷಣಾ ನೀತಿ ಬದಲಾಗುತ್ತ ಬಂದಿದ್ದು, ಭಾರತಕ್ಕೆ ಪಾಕಿಸ್ತಾನದ ಕುರಿತು ಸ್ಪಷ್ಟವಾಗಿ ಅರಿವಿದೆ. ಆದರೆ ಭಾರತ ಪ್ರಸ್ತುತ ಚೀನಾ ವಿರುದ್ಧದ ಯುದ್ಧಕ್ಕೆ ಅಗತ್ಯ ಕಡಿವಾಣಗಳನ್ನು ಹಾಕಿಕೊಳ್ಳುತ್ತಿದೆ. ಅಗ್ನಿ-5 ಕ್ಷಿಪಣಿಯ ಪರೀಕ್ಷೆ ಅಂತಹ ಸಾಧ್ಯತೆಗೆ ಒಂದು ಉದಾಹರಣೆಯಾಗಿದೆ.
ಇತ್ತೀಚಿನ ಪರೀಕ್ಷಾ ಪ್ರಯೋಗ ಕೇವಲ ಕ್ಷಿಪಣಿಯ ಸಾಮರ್ಥ್ಯವನ್ನು ಮಾತ್ರ ಸಾಬೀತುಪಡಿಸಿದ್ದಲ್ಲ. ಅದರೊಡನೆ, 1.5 ಟನ್ ಪೇಲೋಡನ್ನು ಹೊತ್ತು, ಮ್ಯಾಕ್ 24 (ಗಂಟೆಗೆ 29,401 ಕಿಲೋಮೀಟರ್ ಹಾರಾಟ ಸಾಮರ್ಥ್ಯ) ವೇಗದಲ್ಲಿ 5,500 ಕಿಲೋಮೀಟರ್ ಹಾರಾಟ ನಡೆಸಬಲ್ಲದು ಎಂಬುದನ್ನೂ ತೋರಿಸಿದೆ. ಭಾರತ ಚೀನಾಗೆ ಚಿಂತೆ ಮೂಡಿಸುವ ಉದ್ದೇಶದಿಂದಲೇ ತನ್ನ ಕ್ಷಿಪಣಿ ಸಾಮರ್ಥ್ಯಗಳನ್ನು ಹೆಚ್ಚಾಗಿ ತೋರಿಸುತ್ತಿಲ್ಲ ಎಂಬ ಮಾತುಗಳೂ ಕೇಳಿ ಬಂದಿವೆ. ಹಾಗೆಂದು ಭಾರತ ತನ್ನ ಯುರೋಪಿನ ಸಹಯೋಗಿಗಳಿಂದ ಇದನ್ನು ಮುಚ್ಚಿಡಲು ಪ್ರಯತ್ನಿಸುತ್ತಿಲ್ಲ. ತಜ್ಞರ ಅಭಿಪ್ರಾಯದ ಪ್ರಕಾರ, ಒಂದು ವೇಳೆ ಅಗತ್ಯ ಬಿದ್ದರೆ, ಕಡಿಮೆ ಪೇಲೋಡ್ ಜೊತೆಗೆ ಕ್ಷಿಪಣಿ ಇನ್ನಷ್ಟು ದೂರಕ್ಕೆ ಸಾಗಲು ಸಾಧ್ಯವಾಗುತ್ತದೆ.
ಹಲವು ಕಾರಣಗಳಿಂದಾಗಿ ಇತ್ತೀಚಿನ ಪರೀಕ್ಷೆ ಮಹತ್ವ ಪಡೆದುಕೊಂಡಿದೆ. ಮೊದಲನೆಯದಾಗಿ, ಈ ಹಿಂದೆ ನಡೆದ ಪರೀಕ್ಷೆಗಳು ಓಪನ್ ಕಾನ್ಫಿಗರೇಷನ್ ಪರೀಕ್ಷೆಗಳಾದರೆ, ಇತ್ತೀಚಿನ ಪರೀಕ್ಷಾ ಪ್ರಯೋಗ ಮೊಬೈಲ್ ಕಾನ್ಫಿಗರೇಷನ್ ಜೊತೆಗೆ ಕ್ಯಾನಿಸ್ಟರ್​​ನಿಂದ ನಡೆಸಲಾಯಿತು. ಇದು ಕ್ಷಿಪಣಿಯ ಉಡ್ಡಯನ ಇನ್ನಷ್ಟು ಕ್ಷಿಪ್ರವಾಗಿ ನಡೆಯುವಂತೆ ಮಾಡುತ್ತದೆ. ಅಗ್ನಿ-5 ಕ್ಷಿಪಣಿಯನ್ನು ಟ್ರಕ್ ಮೂಲಕ ಕಾರ್ಯತಂತ್ರದ ಪ್ರದೇಶಗಳಿಗೆ ಒಯ್ಯಬಹುದು.

ಅಗ್ನಿ-5 ಅಗತ್ಯತೆಗಳಿಗೆ ಅನುಗುಣವಾಗಿ ವಿವಿಧ ರೀತಿಯ ಸಿಡಿತಲೆಗಳನ್ನು ಕೊಂಡೊಯ್ಯಬಲ್ಲದು. ಈ ಸಿಡಿತಲೆಗಳು ಮಲ್ಟಿಪಲ್ ಇಂಡಿಪೆಂಡೆಂಟ್ ರಿಎಂಟ್ರಿ ವೆಹಿಕಲ್ಸ್ (ಎಂಐಆರ್‌ವಿ), ಬ್ಲಾಸ್ಟ್ ಪೆನಟ್ರೇಷನ್, ಫ್ರಾಗ್ಮಂಟೇಷನ್, ಶುದ್ಧ ಕೈನೆಟಿಕ್ ಅಥವಾ ಬೂಸ್ಟೆಡ್ ಪೆನೆಟ್ರೇಷನ್ ಮಾದರಿಯವಾಗಿರಬಹುದು.
ಮೂಲತಃ ಅಗ್ನಿ-5 ಕ್ಷಿಪಣಿಯ ರಾತ್ರಿ ಸಮಯದ ಪರೀಕ್ಷಾ ಪ್ರಯೋಗ ಅದರ ನಿಖರತೆಯನ್ನು ತಿಳಿಯುವ ಉದ್ದೇಶದಿಂದ ನಡೆಸಲಾಯಿತು. ಅಗ್ನಿ-5 ಕ್ಷಿಪಣಿ ಈಗ ಮೂರು ಮೀಟರ್‌ಗಳ ಸರ್ಕ್ಯುಲರ್ ಎರರ್ ಪ್ರೊಬ್ಯಾಬಿಲಿಟಿ (ಸಿಇಪಿ) ಹೊಂದಿರುವ ಸಾಧ್ಯತೆಗಳಿವೆ ಎನ್ನಲಾಗಿದೆ. ಮೂರು ಮೀಟರ್‌ಗಳ ಸಿಇಪಿ ಎಂದರೆ, ಒಂದೇ ಗುರಿಯೆಡೆಗೆ ಪ್ರಯೋಗಿಸಲಾದ ಕ್ಷಿಪಣಿಗಳಲ್ಲಿ 50% ಕ್ಷಿಪಣಿಗಳು ಗುರಿಯ 3 ಮೀಟರ್ ವ್ಯಾಪ್ತಿಯಲ್ಲೇ ಇರುತ್ತವೆ.
ಬ್ಯಾಲಿಸ್ಟಿಕ್ ಕ್ಷಿಪಣಿಗಳ ಮಿಲಿಟರಿ ವಿಜ್ಞಾನದ ಪ್ರಕಾರ, ಸಿಇಪಿ ಎನ್ನುವುದು ಕ್ಷಿಪಣಿಯ ನಿಖರತೆಯನ್ನು ಅಳೆಯಲು ಬಳಕೆಯಾಗುತ್ತದೆ. ಮೂರು ಮೀಟರ್‌ಗಿಂತಲೂ ಕಡಿಮೆ ಸಿಇಪಿ ಹೊಂದಿರುವ ಅಗ್ನಿ 5 ಅತ್ಯಂತ ನಿಖರ ಕ್ಷಿಪಣಿಯಾಗಿದೆ.
ರಾತ್ರಿ ಸಮಯದ ಪರೀಕ್ಷಾ ಪ್ರಯೋಗಗಳು ಕ್ಷಿಪಣಿಯ ಸ್ವಾವಲಂಬನೆ, ನಂಬಿಕಾರ್ಹತೆ ಹಾಗೂ ಹಗಲು ರಾತ್ರಿ ಎನ್ನದೆ, ಎಲ್ಲ ಹವಾಮಾನದಲ್ಲೂ ಸಾಗುವ ಸಾಮರ್ಥ್ಯವನ್ನು ಸಾಬೀತುಪಡಿಸಲು ನಡೆಸಲಾಗಿದೆ. ಕ್ಷಿಪಣಿ ಉಡಾವಣೆಗೊಂಡ ಬಳಿಕ ಅದು ಎಲ್ಲೂ ಜಾಮ್ ಆಗದಂತೆ, ಅಗತ್ಯ ಬಿದ್ದಲ್ಲಿ ಅದನ್ನು ಅಂತಿಮ ಹಂತದಲ್ಲಿ ಗುರಿಯೆಡೆಗೆ ಕಳುಹಿಸಲು ಈ ಕಾರ್ಯಾಚರಣೆಯಲ್ಲಿ ಓರ್ವ ಪೈಲಟ್ ಸಹ ಇರುತ್ತಾನೆ. ಒಂದು ವೇಳೆ ಶತ್ರುಗಳು ಕ್ಷಿಪಣಿಯ ಮಾಹಿತಿ ನಾಶಪಡಿಸಲು ಪ್ರಯತ್ನಿಸಿದರೂ ಅದು ತನ್ನ ನಿರ್ವಹಣಾ ಕೇಂದ್ರದ ಸಂಪರ್ಕ ಕಳೆದುಕೊಳ್ಳಬಹುದೇ ಹೊರತು ತನ್ನ ಗುರಿಯೆಡೆಗೆ ಯಶಸ್ವಿಯಾಗಿ ದಾಳಿ ನಡೆಸುತ್ತದೆ.
ಅಗ್ನಿ-5 ಕ್ಷಿಪಣಿಯ ಆಧುನಿಕ ಸಂಪರ್ಕ ವ್ಯವಸ್ಥೆ ಭಾರತವನ್ನು ರಕ್ಷಣಾ ವಲಯದಲ್ಲೂ 5ಜಿಗೆ ಸಿದ್ಧವಾಗುವಂತೆ ಮಾಡಿದೆ. ಇಲ್ಲಿ ಉಡಾವಣಾ ನಿಯಂತ್ರಣ, ಭೂ ಕೇಂದ್ರ, ಪೈಲಟ್ ಹಾಗೂ ಕ್ಷಿಪಣಿಗಳು ಒಂದರಿಂದ ಒಂದು ದೂರದಲ್ಲಿದ್ದರೂ ಯಾವುದೇ ಸಮಸ್ಯೆ ಎದುರಾಗದಂತೆ ಕಾರ್ಯಾಚರಿಸುತ್ತದೆ.
ಕಳೆದ ಒಂದು ವರ್ಷದಲ್ಲಿ ಹಠಾತ್ ಹೃದಯಾಘಾತ, ಅನಾರೋಗ್ಯ ಶೇ. 20 ಹೆಚ್ಚಳ: ಬಾಧಿತರಲ್ಲಿ ಲಸಿಕೆ ಪಡೆದವರ ಪ್ರಮಾಣವೆಷ್ಟು?

‘ಸತ್ತವಳು’ 6 ವರ್ಷಗಳ ಬಳಿಕ 2ನೇ ಗಂಡನೊಂದಿಗೆ ಪತ್ತೆ!; ಈಕೆಯ ಕೊಲೆ ಪ್ರಕರಣ ಭೇದಿಸಿದ್ದ ಪೊಲೀಸರಿಗೆ ಸಿಕ್ಕಿತ್ತು ಬಹುಮಾನ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 2 =
Remember me
