ನವದೆಹಲಿ:ಅಲ್ಪಾವಧಿ ಮಿಲಿಟರಿ ನೇಮಕಾತಿ ಯೋಜನೆ ‘ಅಗ್ನಿಪಥ’ ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲವೆಂದಿರುವ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್​ಎಸ್​ಎ) ಅಜಿತ್ ದೋವಲ್, ಹಿಂಸೆಯನ್ನು ಸಹಿಸುವು ದಿಲ್ಲ ಎಂದೂ ಖಡಕ್ಕಾಗಿ ಹೇಳಿದ್ದಾರೆ. ಮಾನವ ಸಂಪನ್ಮೂಲವನ್ನು ಪುನರ್​ಸಂಘಟಿಸುವುದು ಸಶಸ್ತ್ರ ಪಡೆಗಳ ಆಧುನೀಕರಣದತ್ತ ದಿಟ್ಟ ಹೆಜ್ಜೆಯಾಗಿದೆ. ದೇಶಕ್ಕೆ ಯುವ, ಸದೃಢ ಮತ್ತು ಚಾಣಾಕ್ಷ ಸೈನ್ಯದ ಅಗತ್ಯವಿದೆ ಎಂದು ಹೇಳಿದ್ದಾರೆ.
ಸೈನ್ಯದ ಆಧುನೀಕರಣ, ಉನ್ನತೀಕರಣ ಮತ್ತು ಸಕಾಲಿಕೀಕರಣ (ಅಪ್​ಡೇಟ್) ಸರ್ಕಾರದ ಆದ್ಯತೆಯಾಗಿದೆ ಎಂದವರು ವಿವರಿಸಿದ್ದಾರೆ. ಭೂ, ವಾಯು ಮತ್ತು ನೌಕಾ ಪಡೆಗೆ ನಾಲ್ಕು ವರ್ಷ ಅವಧಿಗೆ ‘ಅಗ್ನಿವೀರ’ರನ್ನು ನೇಮಕ ಮಾಡಿಕೊಳ್ಳುವ ಯೋಜನೆಯನ್ನು ಸರ್ಕಾರ ಪ್ರಕಟಿಸಿದ ಒಂದು ವಾರದ ನಂತರವೂ ದೇಶದಾದ್ಯಂತ ಪ್ರತಿಭಟನೆಗಳು ಮುಂದುವರಿದಿದ್ದು ಯೋಜನೆಯನ್ನು ಯಾವ ಕಾರಣಕ್ಕೂ ಕೈ ಬಿಡುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಅಗ್ನಿಪಥ ಯೋಜನೆಯಲ್ಲಿ ನಿಗದಿ ಮಾಡಿರುವ 4 ವರ್ಷದ ಅವಧಿ ಅತ್ಯಂತ ಕಿರಿದಾಯಿತು. ಮಾನವ ಸಂಪನ್ಮೂಲದ ತರಬೇತಿಗೆ ನಾಲ್ಕು ವರ್ಷ ಸಾಲುವುದಿಲ್ಲ.
|ವಿ.ಪಿ. ಮಲಿಕ್ಭೂಸೇನೆಯ ಮಾಜಿ ಮುಖ್ಯಸ್ಥ
ಪ್ರಧಾನಿ ಜತೆ ಸೇನಾ ಮುಖ್ಯಸ್ಥರ ಸಭೆ:ಮೂರೂ ಸೇನಾ ಪಡೆಗಳ ಮುಖ್ಯಸ್ಥರು ಪ್ರಧಾನಿ ನರೇಂದ್ರ ಮೋದಿಯನ್ನು ಮಂಗಳವಾರ ಪ್ರತ್ಯೇಕವಾಗಿ ಭೇಟಿಯಾಗಿ ಯೋಜನೆ ಬಗ್ಗೆ ರ್ಚಚಿ ನಡೆಸಿದರು. ಇದಕ್ಕೂ ಮುನ್ನ ಸುದ್ದಿಗೋಷ್ಠಿ ನಡೆಸಿದ ಸೇನೆಯ ಹಿರಿಯ ಅಧಿಕಾರಿಗಳು ಅಗ್ನಿಪಥ ಯೋಜನೆಯಡಿ ನೇಮಕಾತಿ ಪ್ರಕ್ರಿಯೆ ನಿಲ್ಲುವುದಿಲ್ಲ ಹಾಗೂ ಮಿಲಿಟರಿಯಲ್ಲಿ ಈಗಿರುವ ರೆಜಿಮೆಂಟ್ ವ್ಯವಸ್ಥೆ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದ್ದರು. ಯೋಧರಾಗುವ ಬಯಕೆ ಹೊಂದಿರುವ ಯುವಕರು ಬಹಳ ಕಡೆ ತಮ್ಮ ದೈಹಿಕ ಚಟುವಟಿಕೆಗಳಿಗೆ ಮರಳಿದ್ದಾರೆ ಎಂದು ಮಿಲಿಟರಿ ವ್ಯವಹಾರಗಳ ಇಲಾಖೆಯ ಅಪರ ಕಾರ್ಯದರ್ಶಿ ಲೆಫ್ಟಿನೆಂಟ್ ಜನರಲ್ ಅನಿಲ್ ಪುರಿ ಹೇಳಿದ್ದಾರೆ.
ಸುಪ್ರೀಂಗೆ ಕೇವಿಯಟ್:ಅಗ್ನಿಪಥ ಯೋಜನೆ ವಿರುದ್ಧ ಇದುವರೆಗೆ ಸುಪ್ರೀಂಕೋರ್ಟ್​ಗೆ ಮೂರು ಅರ್ಜಿಗಳ ಸಲ್ಲಿಕೆಯಾಗಿದ್ದು ಈ ಸಂಬಂಧ ನಿರ್ಧಾರ ಕೈಗೊಳ್ಳುವ ಮುನ್ನ ತನ್ನ ಅಭಿಪ್ರಾಯವನ್ನು ಆಲಿಸಬೇಕೆಂದು ಕೇಂದ್ರ ಸರ್ಕಾರ ಕೇವಿಯಟ್ ಸಲ್ಲಿಸಿದೆ. ವಕೀಲರಾದ ಹರ್ಷ ಅಜಯ್ ಸಿಂಗ್, ಎಂ.ಎಲ್. ಶರ್ಮಾ ಮತ್ತು ವಿಶಾಲ್ ತಿವಾರಿ ಯೋಜನೆ ವಿರುದ್ಧ ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದಾರೆ.
ಹರಿಯಾಣದಲ್ಲಿ ಮೀಸಲು:ನಾಲ್ಕು ವರ್ಷ ಸೇವಾವಧಿ ನಂತರ ಮಿಲಿಟರಿಯಿಂದ ಹೊರ ಬರುವ ಅಗ್ನಿವೀರರಿಗೆ ರಾಜ್ಯ ಸರ್ಕಾರದಲ್ಲಿ ಉದ್ಯೋಗ ನೀಡುವುದಾಗಿ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಮಂಗಳವಾರ ಪ್ರಕಟಿಸಿದ್ದಾರೆ. ದೇಶದ ಬೇರೆ ಭಾಗಗಳಂತೆ ಹರಿಯಾಣದಲ್ಲಿ ಕೂಡ ಯೋಜನೆ ವಿರುದ್ಧ ತೀವ್ರ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಖಟ್ಟರ್ ಈ ಆಶ್ವಾಸನೆ ನೀಡಿದ್ದಾರೆ.
ಟೆಲಿಗ್ರಾಂ ಆ್ಯಪ್ ಕೂಡ ಈಗ ಡಬಲ್ ಇಂಜಿನ್​!; ಎಲ್ಲ ದುಪ್ಪಟ್ಟು, ಏನದು ಹೊಸ ಅಪ್​ಡೇಟ್ಸ್​?

ದೀರ್ಘ ಕಾಲ ಗೈರಾಗಿದ್ದ ತಂದೆ ಕೆಲಸದಿಂದ ವಜಾ, ‘ಅಪ್ಪನಿಗೆ ಕೆಲ್ಸ ಕೊಡಿ’ ಎಂಬ ಪುತ್ರಿಯ ಕೋರಿಕೆಗೆ ಮರುಗಿ ಉದ್ಯೋಗ ಕೊಟ್ಟ ಅಧಿಕಾರಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:11 + 17 =
Remember me
