ಉತ್ತರಪ್ರದೇಶ: ಮಕ್ಕಳಿಗೆ ರಕ್ಷಣೆ ನೀಡಬೇಕಿದ್ದ ಸರ್ಕಾರಿ ಅಧಿಕಾರಿಗಳೇ ಮಕ್ಕಳ ಜತೆ ಕ್ರೂರವಾಗಿ ನಡೆದುಕೊಂಡಿದ್ದಾರೆ. ಉತ್ತರ ಪ್ರದೇಶದಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ, ಬಾಲಾಪರಾಧಿಗೃಹ ದಲ್ಲಿದ್ದ ಮಕ್ಕಳಿಗೆ ಅಧಿಕಾರಿಗಳು ಹಿಗ್ಗಾ ಮುಗ್ಗಾ ಥಳಿಸಿದ್ದಾರೆ.
ಚಿಕ್ಕ ಮಕ್ಕಳನ್ನು ನಿರ್ದಯವಾಗಿ ಥಳಿಸಿದ್ದಾರೆ. ಈ ಘಟನೆ ಆಗ್ರಾದಲ್ಲಿ ನಡೆದಿದೆ, ಮಹಿಳಾ ಅಧೀಕ್ಷಕರು ಮಕ್ಕಳಿಗೆ ಥಳಿಸುವ ದೃಶ್ಯಗಳು ಬಾಲಾಪರಾಧಿ ಗೃಹದ ಸಿಸಿಟಿವಿಯಲ್ಲಿ ದಾಖಲಾಗಿದೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ಕೋಣೆಯೊಂದರಲ್ಲಿ 6 ಮಕ್ಕಳು ಹಾಸಿಗೆ ಮೇಲೆ ಮಲಗಿದ್ದಾರೆ. ಅಲ್ಲಿಗೆ ಬಂದ ಮೇಲ್ವಿಚಾರಕರು ಹಾಗೂ ಇತರೆ ನೌಕರರು ಮಕ್ಕಳ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾರೆ. ಮಕ್ಕಳಿಗೆ ಚಪ್ಪಲಿಯಿಂದ ಥಳಿಸಿ, ಪದೇ ಪದೇ ಕಪಾಳಮೋಕ್ಷ ಮಾಡಿದ್ದಾರೆ, ಉಳಿದ ಮಕ್ಕಳನ್ನೂ ನಿಂದಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
In#Agra's govt run children shelterhome (Pachkuiyaan), Poonam Lal, the center superintendent was caught slapping a girl with slippers. Earlier she was booked for abetment to suicide in#Prayagrajdistrict in 2021 after a 15-yr-old girl allegedly killed her self in shelter homepic.twitter.com/JE5V56jR7l
ಮಕ್ಕಳು ತಿಳಿದೇ ಯಾವುದೋ ಸಂದರ್ಭದಲ್ಲಿ ತಪ್ಪು ಮಾಡಿರುತ್ತಾರೆ, ಆದರೆ ಅದು ತಪ್ಪು ಎಂದು ಅವರಿಗೆ ಮನವರಿಕೆ ಮಾಡಿ, ಒಳ್ಳೆಯ ನಡತೆಯನ್ನು ಕಲಿಸಬೇಕಿದ್ದ ಅಧಿಕಾರಿಗಳೇ ಇಂಥಾ ತಪ್ಪು ಮಾಡಿದ್ದಾರೆ.
ಕ್ರೂರವಾಗಿ ವರ್ತಿಸಿದ ಅಧಿಕಾರಿ ಪೂನಂ ಪಾಲ್ ಅವರನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ. ಕೆಲವು ದಿನಗಳ ಹಿಂದೆ ಆ ಮನೆಯಲ್ಲಿ ಬಾಲಕನೊಬ್ಬ ಆತ್ಮಹತ್ಯೆಗೆ ಯತ್ನಿಸಿದ್ದ, ಅಲ್ಲಿ ಮಕ್ಕಳನ್ನು ಕ್ರೂರವಾಗಿ ನಡೆಸಿಕೊಂಡಿರುವುದು ಅಧಿಕಾರಿಗಳ ತನಿಖೆಯಿಂದ ತಿಳಿದುಬಂದಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 7 =
Remember me
