ಲಖನೌ:ಫೈನಾನ್ಸ್​ ಕಂಪನಿ ಏಜೆಂಟ್​ ಓರ್ವ 34 ಪ್ರಯಾಣಿಕರಿದ್ದ ಬಸ್​ ಅನ್ನೇ ಹೈಜಾಕ್​ ಮಾಡಿರುವ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ಬುಧವಾರ ನಡೆದಿದೆ. ತೆಗೆದುಕೊಂಡಿದ್ದ ಸಾಲವನ್ನು ಮರುಪಾವತಿಸದೇ ಮಾಲೀಕ ಮೃತಪಟ್ಟ ಬೆನ್ನಲ್ಲೇ ಈ ಘಟನೆ ನಡೆದಿದೆ.
ಮಲ್ಪುರಾ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ಬೆಳಗ್ಗೆ ಬಸ್​ ಹೈಜಾಕ್​ ಮಾಡಲಾಗಿದೆ. ಬಸ್​ ಹರಿಯಾಣದ ಗುರಂಗಾವ್​ನಿಂದ ಮಧ್ಯ ಪ್ರದೇಶದ ಗ್ವಾಲಿಯರ್​ಗೆ ತೆರಳುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಇಂತಹ ವರ್ತನೆ ಸರಿಯಲ್ಲ: ವಿನಯ್ ಗುರೂಜಿ ನಡೆ ಖಂಡಿಸಿದ ವಿಧಾನ ಪರಿಷತ್ ಸದಸ್ಯ​​!
ಮೂಲಗಳ ಪ್ರಕಾರ ಖಾಸಗಿ ಬಸ್​ ಆಗ್ರಾದ ನ್ಯೂ ಸದರನ್ ಬೈಪಾಸ್​ ಬಳಿಯ ರಾಯಗಢ್​ ಟೋಲ್​ ದಾಟುತ್ತಿದ್ದಂತೆ ಆರೋಪಿ ಏಜೆಂಟ್​ ಬಸ್​ ತಡೆದಿದ್ದಾನೆ. ಬಳಿಕ ಬಸ್​ನ ಕಂಟ್ರೋಲ್​ ಅನ್ನು ತನ್ನ ವಶಕ್ಕೆ ಪಡೆದುಕೊಂಡಿದ್ದಾನೆ. ಈ ವೇಳೆ ಬಸ್ಸಿನಲ್ಲಿದ್ದ ಮೂವರು ಪ್ರಯಾಣಿಕರು ಹಿರಿಯ ಪೊಲೀಸ್​ ವರಿಷ್ಠಾಧಿಕಾರಿ ಬಬ್ಲೂ ಕುಮಾರ್​ ಅವರಿಗೆ ಕರೆ ಮಾಡಿ ಫೈನಾನ್ಸ್​ ಕಂಪನಿಯ ಏಜೆಂಟ್​ಗಳನ್ನು ಬಸ್ಸನ್ನು ಹೈಜಾಕ್​ ಮಾಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಬಬ್ಲೂ ಕುಮಾರ್​, ಗ್ವಾಲಿಯರ್​ ಮೂಲದ ಮೂವರು ಪ್ರಯಾಣಿಕರು ಇಂದು ದೂರು ನೀಡಿದ್ದಾರೆ. ಅವರು ಗುರಂಗಾವ್​ದಿಂದ ಪಟನಾಗೆ ಪ್ರಯಾಣಿಸುತ್ತಿದ್ದ ಬಸ್ಸನ್ನು ಓವರ್​ಟೇಕ್​ ಮಾಡಿ ಫೈನಾನ್ಸ್​ ಕಂಪನಿ ಏಜೆಂಟ್​ಗಳು ಹೈಜಾಕ್​ ಮಾಡಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಸಂಬಂಧ ಪ್ರಕರಣವನ್ನು ದಾಖಲಾಸಿದ್ದೇವೆ. ತನಿಖೆ ನಡೆಸುತ್ತೇವೆಂದು ಟ್ವೀಟ್​ ಮಾಡಿದ್ದಾರೆ.
ಇದನ್ನೂ ಓದಿ:ನಿಮ್ಮ ಕಣ್ಣಿಗೊಂದು ಸವಾಲು: ಈ ಚಿತ್ರದಲ್ಲಿ ಅಡಗಿರುವ ಬೆತ್ತಲೆ ಮಾಡೆಲ್​ ಗುರುತಿಸುವಿರಾ?
ಸದ್ಯ ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದು, ಬಸ್​ ಝಾನ್ಸಿ ತಲುಪಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಫೈನಾನ್ಸ್​ ಕಂಪನಿ ಅಕ್ರಮವಾಗಿ ಬಸ್​ ಅನ್ನು ವಶಪಡಿಸಿಕೊಂಡಿದ್ದಾರೆ. ಚಾಲಕ ಮತ್ತು ಪ್ರಯಾಣಿಕರು ಕ್ಷೇಮವಾಗಿದ್ದಾರೆ. ನಿನ್ನೆಯಷ್ಟೇ ಬಸ್​ ಮಾಲೀಕ ಮೃತಪಟ್ಟರು. ಇದರ ಬೆನ್ನಲ್ಲೇ ಏಜೆಂಟ್​ಗಳು ಈ ರೀತಿಯಾಗಿ ವರ್ತಿಸಿದ್ದಾರೆಂದು ಉತ್ತರ ಪ್ರದೇಶದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವನಿಶ್​ ಅವಸ್ಥಿ ಹೇಳಿದ್ದಾರೆ.(ಏಜೆನ್ಸೀಸ್​)
ಆಗಸದಿಂದ ಸುರಿದ ಚಾಕಲೇಟ್​ ಕಣಗಳು…!

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:eight + 2 =
Remember me
