ನವದೆಹಲಿ:ಸಸ್ಯಹಾರಿಯಾಗಿರುವ ಆಗ್ರಾದ ವ್ಯಕ್ತಿಯೊಬ್ಬರಿಗೆ ಮಾಂಸಾಹಾರ ಬಡಿಸಿದ್ದ ಐಷಾರಾಮಿ ಹೋಟೆಲ್‌ನಿಂದ 1 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ. ಅಲ್ಲದೆ ಹೋಟೆಲ್ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಹೇಳಿದ್ದಾರೆ.
ನಡೆದಿದ್ದೇನು?:ಅರ್ಪಿತ್‌ ಗುಪ್ತಾ ಎಂಬ ವ್ಯಕ್ತಿ ಫತೇಹ್‌ಬಾದ್ ರಸ್ತೆಯಲ್ಲಿರುವ ಐಷಾರಾಮಿ ಹೊಟೇಲೊಂದಕ್ಕೆ ಹೋಗಿದ್ದಾರೆ. ವೆಜ್‌ ರೋಲ್‌ ಕೇಳಿದ್ದಾರೆ. ಹೊಟೇಲ್ ಸರ್ವರ್ ವೆಜ್ ರೋಲ್ ಬದಲಿಗೆ ಚಿಕನ್ ರೋಲ್ ಕೊಟ್ಟಿರುವುದಾಗಿ ಅಲ್ಲಿನ ಸಿಬ್ಬಂದಿಯನ್ನು ವಿಚಾರಿಸಿದಾಗ ಗೊತ್ತಾಗಿದೆ. ಸಸ್ಯಹಾರಿಯಾದ ಗುಪ್ತಾ ಅವರಿಗೆ ಹೊಟೇಲ್‌ನಲ್ಲಿ ತಾವು ತಿಂದದ್ದು ಚಿಕನ್‌ ರೋಲ್ ಎಂದು ಗೊತ್ತಾದಾಗ ವಾಂತಿ ಮಾಡಿಕೊಂಡಿದ್ದಷ್ಟೇ ಅಲ್ಲ, ಆಸ್ಪತ್ರೆಗೆ ಕೂಡ ಅವರು ದಾಖಲಾಗಬೇಕಾಯಿತು ಎಂದೂ ಎಂದು ಗುಪ್ತಾ ಪರ ವಕೀಲರಾಗಿರುವ ನರೋತ್ತಮ ಸಿಂಗ್ ಪ್ರತಿಪಾದಿಸಿದ್ದಾರೆ.
ಹೊಟೇಲ್ ತನ್ನ ತಪ್ಪನ್ನು ಮರೆಮಾಚುವ ಸಲುವಾಗಿ ಊಟದ ಬಿಲ್ ಸಹ ನೀಡಲಿಲ್ಲ. ಈ ಕುರಿತಾದ ಸತ್ಯಾಸತ್ಯತೆಗೆ ನಮ್ಮ ಕಕ್ಷಿದಾರರು ಇಡೀ ಘಟನೆಯನ್ನು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ಹೊಟೇಲ್ ಸಿಬ್ಬಂದಿ ಸರಳವಾಗಿ ಕ್ಷಮೆಯಾಚಿಸುವುದು ಸಾಕಾಗುವುದಿಲ್ಲ. ಸಸ್ಯಾಹಾರಿ ವ್ಯಕ್ತಿಯೊಬ್ಬರ ಧಾರ್ಮಿಕ ಭಾವನೆಯನ್ನು ಘಾಸಿಗೊಳಿಸಿದ್ದಕ್ಕಾಗಿ ಹೊಟೇಲ್ ಆಡಳಿತದ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಳ್ಳಬೇಕು. ಪರಿಹಾರವಾಗಿ ಸಂತ್ರಸ್ತ ಗುಪ್ತಾ ಅವರಿಗೆ 1 ಕೋಟಿ ಕೊಡಬೇಕು ಎಂದು ವಕೀಲ ನರೋತ್ತಮ್ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ:ಪಿಂಚಣಿ ಪಡೆಯಲು ಸುಡು ಬಿಸಿಲಿನಲ್ಲಿ ನಡೆದ ವೃದ್ಧೆ; ಸಮಸ್ಯೆಗೆ ಕಾರಣ ತಿಳಿಸಿ ಪರಿಹಾರ ನೀಡಿದ ಬ್ಯಾಂಕ್​ಅರ್ಪಿತ್ ಗುಪ್ತಾ ಈಗ ಹೋಟೆಲ್ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಹೇಳಿದ್ದಾರೆ. ಹೋಟೆಲ್ ಆಡಳಿತ ಮಂಡಳಿಗೆ ನೋಟಿಸ್‌ ನೀಡಿ 1 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ. ವ್ಯಕ್ತಿಯ ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾದರೆ ಮೂರರಿಂದ ಹತ್ತು ವರ್ಷಗಳ ವರೆಗೆ ಜೈಲು ಶಿಕ್ಷೆ ವಿಧಿಸುವ ಅವಕಾಶವಿದೆ.
ಶುಲ್ಕ ಪಾವತಿಸದ ಸೆಲೆಬ್ರಿಟಿಗಳ ಬ್ಲೂಟಿಕ್ ರದ್ದು ಮಾಡುತ್ತಿದೆ ಟ್ವಿಟರ್!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:twenty − 19 =
Remember me
