ಬುಡೌನ್:ಚುನಾವಣೆಯಲ್ಲಿ ಬಾಜಿ ಕಟ್ಟುವುದು ಭಾರತದಲ್ಲಿ ಕಾನೂನುಬಾಹಿರ. ಆದರೆ, ತಮ್ಮ ಅಭ್ಯರ್ಥಿ ಗೆಲ್ಲುತ್ತಾರೆ ಇಲ್ಲಿಬ್ಬರು 2 ಲಕ್ಷ ರೂಪಾಯಿಯ ಬೆಟ್ಟಿಂಗ್​ ಕಟ್ಟಿದ್ದಾರೆ. ಈ ಬೆಟ್ಟಿಂಗ್​ ಹಣದ ವಿವರಗಳ ಕುರಿತು ಬಾಂಡ್​ ಪೇಪರ್​ನಲ್ಲಿ ಒಪ್ಪಂದ ಮಾಡಿಕೊಂಡಿದ್ದಾರೆ. ಇದಕ್ಕೆ, ಸಾಕ್ಷಿದಾರರಿಂದಲೂ ಸಹಿ ಮಾಡಿಸಿದ್ದಾರೆ. ಅಚ್ಚರಿಯ ಸಂಗತಿ ಎಂದರೆ, ಈ ಬೆಟ್ಟಿಂಗ್​ ವ್ಯವಹಾರ ನಡೆದಿರುವುದು ಇಬ್ಬರು ವಕೀಲರ ನಡುವೆ.
ಲೋಕಸಭೆ ಚುನಾವಣೆ ನಿರ್ಣಾಯಕ ಹಂತಕ್ಕೆ ಬಂದಿದ್ದು, ಮಂಗಳವಾರ 3ನೇ ಹಂತದ ಮತದಾನ ನಡೆಯಲಿದೆ. ಈ ಸಂದರ್ಭದಲ್ಲಿ ಉತ್ತರ ಪ್ರದೇಶದ ಇಬ್ಬರು ವಕೀಲರು ತಮ್ಮ ನೆಚ್ಚಿನ ಪಕ್ಷಗಳ ಅಭ್ಯರ್ಥಿಗಳ ಮೇಲೆ 2 ಲಕ್ಷ ರೂಪಾಯಿಯ ಬಾಜಿ ಕಟ್ಟಿದ್ದಾರೆ.
ಉತ್ತರ ಪ್ರದೇಶದ ಬದೌನ್ ಜಿಲ್ಲೆಯಲ್ಲಿ ವಕೀಲ ಸತ್ಯೇಂದ್ರ ಪಾಲ್ ಮತ್ತು ವಕೀಲ ದಿವಾಕರ್ ವರ್ಮಾ ನಡುವೆ ಈ ಬೆಟ್ಟಿಂಗ್ ನಡೆದಿದೆ.
ಸತ್ಯೇಂದ್ರ ಪಾಲ್ ಅವರು ಸಮಾಜವಾದಿ ಪಕ್ಷದ ಆದಿತ್ಯ ಯಾದವ್‌ ಅವರು ಗೆಲ್ಲುತ್ತಾರೆ ಎಂದು ಬೆಟ್ಟಿಂಗ್ ಕಟ್ಟಿದ್ದರೆ, ದಿವಾಕರ್ ವರ್ಮಾ ಅವರು ಬಿಜೆಪಿಯ ದಿಗ್ವಿಜಯ್ ಸಿಂಗ್ ಶಾಕ್ಯಾ ಅವರ ಗೆಲುವಿನ ಪರವಾಗಿ ಬಾಜಿ ಕಟ್ಟಿದ್ದಾರೆ.
ಈ ಬೆಟ್ಟಿಂಗ್​ನಲ್ಲಿ ಸೋತವರು ಇನ್ನೊಬ್ಬ ವಕೀಲರಿಗೆ ರೂ. 2 ಲಕ್ಷ ನೀಡುವುದಾಗಿ ಅಫಿಡವಿಟ್‌ ಮಾಡಲಾಗಿದೆ. ಅಲ್ಲದೆ, ನಾಲ್ವರು ಸಾಕ್ಷಿಗಳ ಸಹಿಯೊಂದಿಗೆ ಒಪ್ಪಂದವನ್ನು ದಾಖಲಿಸಲಾಗಿದೆ.
ಉತ್ತರ ಪ್ರದೇಶದ 10 ಲೋಕಸಭಾ ಸ್ಥಾನಗಳಿಗೆ ಮೂರನೇ ಹಂತದಲ್ಲಿ ಮೇ 7 ರಂದು ಚುನಾವಣೆ ನಡೆಯಲಿದೆ, ಈ ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿಯು ರಾಷ್ಟ್ರೀಯ ಲೋಕದಳದೊಂದಿಗೆ ಕೈಜೋಡಿಸಿದರೆ, ಸಮಾಜವಾದಿ ಪಕ್ಷವು ಚುನಾವಣೆಗಾಗಿ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿದೆ. ಬಹುಜನ ಸಮಾಜ ಪಕ್ಷ ಏಕಾಂಗಿಯಾಗಿ ಸ್ಪರ್ಧಿಸುತ್ತಿದೆ.
ನೀನೆಲ್ಲೂ ಹೋಗಬಾರದು.. ಬಟ್ಟೆ ಬದಲಾಯಿಸು… ಸೆಟ್​ನಲ್ಲಿ ನಡೆದ ಕಿರುಕುಳ ಘಟನೆಯನ್ನು ಬಹಿರಂಗಗೊಳಿಸಿದ ನಟಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 4 =
Remember me
