ಚೆನ್ನೈ:ತಮಿಳುನಾಡಿನ ಸರ್ಕಾರಿ ಶಾಲೆಯ ವಿದ್ಯಾರ್ಥಿಯೊಬ್ಬ ತನ್ನ ಪ್ರತಿಭೆಯ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ. 9ನೇ ತರಗತಿಯಲ್ಲೇ ವಿಶ್ವದ ಅತಿದೊಡ್ಡ ಕಂಪನಿಯಾದ ಅಮೆಜಾನ್​ ಜತೆ ಒಪ್ಪಂದ ಮಾಡಿಕೊಂಡಿದ್ದು, ಈ ವಯಸ್ಸಿನಲ್ಲೇ ತಿಂಗಳಿಗೆ 2 ಲಕ್ಷ ರೂಪಾಯಿ ಸಂಪಾದನೆ ಮಾಡುತ್ತಿದ್ದಾರೆ. ಇದನ್ನು ಕೇಳಿದರೆ ನಿಮಗೆ ಅಚ್ಚರಿಯಾಗಬಹುದು. ಈ ಕುರಿತಾದ ಒಂದು ಇಂಟೆರೆಸ್ಟಿಂಗ್​ ಮಾಹಿತಿ ಇಲ್ಲಿದೆ.
ಪ್ರತಿಭಾವಂತ ಹುಡುಗನ ಹೆಸರು ಸೈಲೇಶ್​. ಈತ ವಿರುದುನಗರ ಜಿಲ್ಲೆಯ ಇಳಂತಿಕುಲಂ ಏರಿಯಾದ ನಲ್ಲಪೆರುಮಾಳ್​ ಮತ್ತು ಮುತುಲಕ್ಷ್ಮೀ ದಂಪತಿಯ ಪುತ್ರ. ಇವರು ಕುಟುಂಬ 8 ವರ್ಷಗಳ ಹಿಂದೆಯೇ ಚೆನ್ನೈಗೆ ವಲಸೆ ಬಂದು ನೆಲೆಸಿದೆ. ಸದ್ಯ ಚೆನ್ನೈನ ಮೀಂಜೋರ್​ನಲ್ಲಿ ಕುಟುಂಬ ವಾಸವಿದೆ.
ನಲ್ಲಪೆರುಮಾಳ್ ಅವರು ತಮ್ಮದೇಯಾದ ಐರನ್​ ಬಿಸಿನೆಸ್​ ಮಾಡುತ್ತಿದ್ದಾರೆ. ಮುತ್ತುಲಕ್ಷ್ಮೀ ತಮ್ಮ ಪತಿಗೆ ನೆರವಾಗಿದ್ದಾರೆ. ಈ ದಂಪತಿಯ ಹಿರಿಯ ಪುತ್ರನಾಗಿರುವ ಸೈಲೇಶ್​ಗೆ ಮೊಬೈಲ್​ ಫೋನ್​ಗಳ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದಾನೆ. ಆತ ಯಾವಾಗಲೂ ಮೊಬೈಲ್​ನಲ್ಲಿಯೇ ಮುಳುಗಿರುತ್ತಾನೆ. ಆದರೆ, ಈತ ಮೊಬೈಲ್​ ಅನ್ನು ಯಾವುದೇ ಕಾರಣಕ್ಕೂ ಕೆಟ್ಟ ಉದ್ದೇಶಕ್ಕೆ ಬಳಸದೇ ಕಲಿಕೆಯ ದೃಷ್ಟಿಯಲ್ಲಿ ಉಪಯೋಗಿಸಿದರ ಫಲ ಇಂದು ಆತನ ಕೈಹಿಡಿದಿದೆ.
ಇದನ್ನೂ ಓದಿ:225 ಹೊಸ ವಾರ್ಡ್ ರಚಿಸಿ ಅಧಿಸೂಚನೆ: 2011ರ ಜನಗಣತಿ ಆಧಾರ, ಆಕ್ಷೇಪ ಸಲ್ಲಿಸಲು 15 ದಿನ ಕಾಲಾವಕಾಶ

ಮೊಬೈಲ್ ಫೋನ್ ಬಳಕೆಯ ವ್ಯವಹಾರದ ಬಗ್ಗೆ ಚೆನ್ನಾಗಿ ತಿಳಿದುಕೊಂಡಿರುವ ಸೈಲೇಶ್ ಇದೀಗ 3 ಆ್ಯಪ್​ಗಳನ್ನು ಅಭಿವೃದ್ಧಿಪಡಿಸಿದ್ದಾನೆ. ಎರಡು ಕಂಪನಿ ಈಗಾಗಲೇ ಈತನ ಎರಡು ಗೇಮ್​ ಸಂಬಂಧಿತ ಆ್ಯಪ್​ಗಳಲ್ಲಿ ಹಣ ಪಾವತಿ ಮಾಡಿವೆ. ಇದೀಗ ವಿಶ್ವದ ಅತಿದೊಡ್ಡ ಕಂಪನಿ ಅಮೇಜಾನ್​ ಸೈಲೇಶ್​ನನ್ನು ಸಂಪರ್ಕಿಸಿದೆ ಎಂದು ತಿಳಿದುಬಂದಿದೆ. ಪ್ರಸ್ತುತ ಸೈಲೇಶ್​ ಅಮೇಜಾನ್​ ಕಂಪನಿಗಾಗಿ ಆ್ಯಪ್​ ಅಭಿವೃದ್ಧಿಪಡಿಸುವ ಕೆಲಸದಲ್ಲಿ ಬಿಜಿಯಾಗಿದ್ದಾನೆಂದು ತಿಳಿದುಬಂದಿದೆ.
ಆರಂಭದಲ್ಲಿ ಮೊಬೈಲ್​ ಫೋನ್​ ಅನ್ನು ಗೇಮಿಂಗ್​ಗಾಗಿ ಬಳಸುತ್ತಿದ್ದ ಸೈಲೇಶ್​, ನಂತರದಲ್ಲಿ ಟೆಕ್ನಾಲಜಿ ಮೇಲೆ ಹೆಚ್ಚು ಆಸಕ್ತಿ ಬೆಳೆಸಿಕೊಂಡನು. ಬಳಿಕ ಆ ಕ್ಷೇತ್ರದ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಆರಂಭಿಸಿದನು. ಕೇವಲ ಆ್ಯಪ್ ರಚಿಸುವ ಯೋಚನೆ ಇದ್ದರೆ ಆ್ಯಪ್ ತಯಾರಿಸುವುದಿಲ್ಲ, ಅದಕ್ಕೆ ಸರಿಯಾದ ಮಾರ್ಗದರ್ಶನದ ಅಗತ್ಯವಿದೆ ಎನ್ನುತ್ತಾರೆ ಸೈಲೇಶ್. ನನ್ನ ಕಂಪ್ಯೂಟರ್ ಶಿಕ್ಷಕರು ಮತ್ತು ಸ್ನೇಹಿತರು ಬೆಂಬಲ ನೀಡಿದರು ಎಂದು ಅವರು ಹೇಳುತ್ತಾನೆ.(ಏಜೆನ್ಸೀಸ್​)
ಮೆಜೆಸ್ಟಿಕ್ ರೈಲು ನಿಲ್ದಾಣದಲ್ಲಿ ಉದ್ಯಾನ್ ಎಕ್ಸ್‌ಪ್ರೆಸ್​ನ ಇಂಜಿನ್​, ಬೋಗಿಗಳಲ್ಲಿ ಬೆಂಕಿ: ತಪ್ಪಿದ ಭಾರೀ ದುರಂತ

ಇತ್ತೀಚೆಗೆ ಟ್ರೆಂಡ್​ ಆಗಿರುವ ಬಿಯರ್​ ಟ್ಯಾನಿಂಗ್​ ಅಂದ್ರೇನು? ಇದು ಎಷ್ಟು ಡೇಂಜರ್? ಇಲ್ಲಿದೆ ಮಾಹಿತಿ…

ಮುಂಬರುವ ಮಧ್ಯಪ್ರದೇಶ ಚುನಾವಣೆಗೂ ಕರ್ನಾಟಕದ ಸೂತ್ರ: ಈಗಾಗಲೇ ಗ್ಯಾರಂಟಿ ಘೋಷಣೆ ಮಾಡಿರುವ ಪ್ರಿಯಾಂಕಾ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − 1 =
Remember me
