ನವದೆಹಲಿ:ಕೃಷಿಗೆ ಸಂಬಂಧಿಸಿದ ಸುಧಾರಣಾ ಕ್ರಮಗಳಿಂದ ರೈತರ ಆದಾಯ ಹೆಚ್ಚಳವಾಗಿದೆ. ಸೆಪ್ಟೆಂಬರ್​ನಲ್ಲಿ ಜಾರಿಗೆ ಬಂದ ಮೂರು ಕೃಷಿ ಕಾಯ್ದೆಗಳು ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ಕ್ಷೇತ್ರದ ಮಧ್ಯೆ ಇದ್ದ ಅಡೆತಡೆಯನ್ನು ನಿವಾರಿಸಿದ್ದು, ಬೇಸಾಯಗಾರರಿಗೆ ಹೊಸ ಮಾರುಕಟ್ಟೆ ಕಲ್ಪಿಸಿವೆ. ಜತೆಗೆ ಆಧುನಿಕ ತಂತ್ರಜ್ಞಾನದ ನೆರವನ್ನು ನೀಡಿ, ಹೆಚ್ಚಿನ ಹೂಡಿಕೆ ಒದಗಿಸಿಕೊಡಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಉದ್ದಿಮೆಗಳ ಮಧ್ಯೆ ಅನಗತ್ಯವಾಗಿ ಗೋಡೆಗಳಿದ್ದರೆ ಯಾವ ಉದ್ಯಮವೂ ಬೆಳವಣಿಗೆ ಕಾಣುವುದಿಲ್ಲ. ಒಂದು ವಲಯದಲ್ಲಾಗುವ ಪ್ರಗತಿ ಆ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ. ಅದು ಮುಖ್ಯಕ್ಷೇತ್ರಕ್ಕೆ ಸಂಬಂಧಿಸಿದ ಉಪಕ್ಷೇತ್ರದಲ್ಲಿ ಪರಿವರ್ತನೆಗೆ ಕಾರಣವಾಗುತ್ತದೆ. ಹೊಸ ಕಾಯ್ದೆಯು ಕೃಷಿ ಮೂಲ ಸೌಕರ್ಯ, ಆಹಾರ ಸಂಸ್ಕರಣೆ, ಗೋದಾಮು, ಶೈತ್ಯಾಗಾರ ವಲಯಗಳಲ್ಲಿ ಇದ್ದ ಗೋಡೆಯನ್ನು ತೆಗೆದು ಹಾಕುವುದರ ಜತೆಗೆ ಇವುಗಳ ಮಧ್ಯೆ ಸೇತುವೆಯಾಗಿ ಪರಸ್ಪರ ಬೆಂಬಲ ಒದಗಿಸಿದೆ ಎಂದು ಮೋದಿ ತಿಳಿಸಿದ್ದಾರೆ. ಶನಿವಾರ ನಡೆದ ಭಾರತೀಯ ವಾಣಿಜ್ಯೋದ್ಯಮ ಸಂಘದ (ಫಿಕ್ಕಿ) 93ನೇ ವಾರ್ಷಿಕ ಸಮ್ಮೇಳನದ ವರ್ಚುವಲ್ ಭಾಷಣದಲ್ಲಿ ಅವರು ಮಾತನಾಡಿದರು.
ಈ ಶತಮಾನದಲ್ಲಿ ಪ್ರಗತಿ ಗಾಳಿಯು ಗ್ರಾಮೀಣ ಭಾಗ ಮತ್ತು ಸಣ್ಣ ಪಟ್ಟಣಗಳಿಂದ ಬೀಸುತ್ತದೆ. ಹೀಗಾಗಿ ವಾಣಿಜ್ಯೋದ್ಯಮಗಳು ಇಂಥ ಪ್ರದೇಶದಲ್ಲಿ ಹೂಡಿಕೆ ಮಾಡಬೇಕು. ಆದರೆ, ಖಾಸಗಿ ಸಂಸ್ಥೆಗಳು ಕೃಷಿ ವಲಯವನ್ನು ಅಷ್ಟಾಗಿ ಕೇಂದ್ರೀಕರಿಸದಿರುವುದು ವಿಷಾದನೀಯ ಎಂದರು. ಕರೊನಾ ಕಾರಣ ಕಠಿಣವಾಗಿದ್ದ ಆರ್ಥಿಕತೆಯು ನಿರೀಕ್ಷೆಗಿಂತ ವೇಗವಾಗಿ ಬೆಳವಣಿಗೆ ಕಾಣುತ್ತಿದೆ. ಸಂಕಷ್ಟದ ಸಮಯದಲ್ಲೂ ವಿದೇಶಿ ಹೂಡಿಕೆ ಗಣನೀಯ ಪ್ರಮಾಣದಲ್ಲಿ ಹರಿದುಬಂದಿದೆ ಎಂದರು.
ಕೃಷಿ ಉತ್ಪನ್ನವನ್ನು ಎಪಿಎಂಸಿ ಅಥವಾ ಹೊರಗಡೆ ಎಲ್ಲಿ ಲಾಭದಾಯಕವೋ ಅಲ್ಲಿ ಮಾರಾಟ ಮಾಡಬಹುದು. ಇದರಿಂದ ಕೃಷಿಕರ ಆದಾಯ ಹೆಚ್ಚಳವಾಗುತ್ತದೆ. ಹೊಸ ಕಾಯ್ದೆಗಳು ರೈತರ ಬದುಕನ್ನು ಹಸನು ಮಾಡುತ್ತವೆ.
|ನರೇಂದ್ರ ಮೋದಿಪ್ರಧಾನಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + fourteen =
Remember me
