ಅಲಪ್ಪುಳ:ನಕಲಿ ನೋಟು ಪ್ರಕರಣದಲ್ಲಿ ಬಂಧನವಾಗಿ ಅಮಾನತಾಗಿರುವ ಕೇರಳದ ಮಹಿಳಾ ಕೃಷಿ ಅಧಿಕಾರಿಯ ಅವ್ಯವಹಾರ ಬಗೆದಷ್ಟು ಬಯಲಾಗುತ್ತಿದೆ. ನಕಲಿ ನೋಟಿನ ಬಹುದೊಡ್ಡ ಜಾಲದಲ್ಲಿ ಅಧಿಕಾರಿ ಶಾಮೀಲಾಗಿರುವ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇವೆ ಎಂದು ತನಿಖಾ ತಂಡ ತಿಳಿಸಿದೆ.
ಎಂ. ಜಿಶ್ಮೋಲ್​ ಬಂಧಿತ ಕೃಷಿ ಅಧಿಕಾರಿ. ಇವರು ಅಲಪ್ಪುಳದ ಎಡತುವಾದಲ್ಲಿ ಸೇವೆ ಸಲ್ಲಿಸುತ್ತಿದ್ದರು. ನಕಲಿ ನೋಟು ಪ್ರಕರಣದಲ್ಲಿ ಮಾ.08ರಂದು ಬಂಧಿಸಲಾಗಿದೆ. ಇದರ ಬೆನ್ನಲ್ಲೇ ಸೇವೆಯಿಂದ ಅಮಾನತು ಮಾಡಲಾಗಿದೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಇತರರಿಗಾಗಿ ಶೋಧ ಕಾರ್ಯಾಚಣೆ ನಡೆಸಲಾಗುತ್ತಿದೆ.
ಇದನ್ನೂ ಓದಿ:ಡೇ ಕೇರ್‌ನಲ್ಲಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ
ಜಿಶ್ಮೋಲ್​ ಅವರಿಂದ ಪಡೆದ ನೋಟನ್ನು ವ್ಯಕ್ತಿಯೊಬ್ಬ ಬ್ಯಾಂಕ್​ಗೆ ನೀಡಿದಾಗ ಈ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಜಿಶ್ಮೋಲ್​ ಅವರಿಗೆ ಪರಿಚಿತನಾಗಿರುವ ಮೀನುಗಾರಿಕಾ ಸಾಧನಗಳನ್ನು ಮಾರಾಟ ಮಾಡುವ ವ್ಯಕ್ತಿಯೊಬ್ಬ 500 ರೂ. ಮುಖಬೆಲೆಯ 7 ನಕಲಿ ನೋಟುಗಳನ್ನು ಬ್ಯಾಂಕ್​ಗೆ ತಂದಿದ್ದ. ಈ ವೇಳೆ ಸಿಕ್ಕಿಬಿದ್ದಾಗ ಜಿಶ್ಮೋಲ್​ ಅವರು ನೋಟುಗಳನ್ನು ಕೊಟ್ಟಿದ್ದಾಗಿ ಹೇಳಿದ್ದ. ಬಳಿಕ ಜಿಶ್ಮೋಲ್​ ಅವರನ್ನು ಕೇರಳ ಪೊಲೀಸರು ವಿಚಾರಣೆ ನಡೆಸಿದರು.
ಆದರೆ, ಸಾಕಷ್ಟು ಸಮಯದವರೆಗೆ ವಿಚಾರಣೆ ನಡೆಸಿದರೂ ಜಿಶ್ಮೋಲ್​ ಮಾತ್ರ ನಕಲಿ ನೋಟಿನ ಮೂಲ ಯಾವುದು ಎಂದು ಬಹಿರಂಗಪಡಿಸಲಿಲ್ಲ. ಹೀಗಾಗಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಆಕೆಯ ಮನೆಯ ಮೇಲೂ ಪೊಲೀಸರು ದಾಳಿ ನಡೆಸಿದ್ದು, ಅನುಮಾನ ಬರುವಂತಹ ಯಾವುದೇ ವಸ್ತು ಸಿಕ್ಕಿಲ್ಲ ಎಂದು ತಿಳಿದುಬಂದಿದೆ.
ಬೇರೆ ಯಾರೋ ಜಿಶ್ಮೋಲ್​ ಅವರಿಗೆ ನಕಲಿ ನೋಟುಗಳನ್ನು ನೀಡಿ ಬಲೆಗೆ ಬೀಳಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಜಿಶ್ಮೋಲ್​ ಅವರೇ ಈ ಅವ್ಯವಹಾರದಲ್ಲಿ ಭಾಗಿಯಾಗಿರುವ ಬಗ್ಗೆ ತನಿಖಾ ತಂಡಕ್ಕೆ ಮಾಹಿತಿ ಲಭ್ಯವಾಗಿದೆ. ಕೈತುಂಬ ಸಂಬಳವಿದ್ರೂ ಅಕ್ರಮದಲ್ಲಿ ಭಾಗಿಯಾಗಿದ್ದ ಅಧಿಕಾರಿಯ ಮುಖವಾಡ ಇದೀಗ ಕಳಚಿಬಿದ್ದಿದೆ.
ಇದನ್ನೂ ಓದಿ:ಲೈಸೆನ್ಸ್​ ಇಲ್ಲದೇ ಕೋರ್ಟ್​ನಲ್ಲಿ ವಾದ ಮಾಡಿದ್ದಕ್ಕೆ ರೋಬೋಟ್ ಮೇಲೆ ಕೇಸ್​!​
ಜಿಶ್ಮೋಲ್​ ಅವರು ಅಲಪ್ಪುಳದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಅವರು ಮಾಡೆಲಿಂಗ್​ನಲ್ಲೂ ಸಕ್ರಿಯರಾಗಿದ್ದು, ಅನೇಕ ಫ್ಯಾಶನ್​ ಶೋಗಳನ್ನು ಭಾಗವಹಿಸಿದ್ದಾರೆ. ಕೃಷಿ ವಿಭಾಗದಲ್ಲಿ ಬಿಎಸ್ಸಿ ಪದವಿ ಪಡೆದಿರುವ ಜಿಶ್ಮೋಲ್​ ಈ ಹಿಂದೆ ಗಗನಸಖಿಯಾಗಿ ಸೇವೆ ಸಲ್ಲಿಸಿದ್ದಾರೆ. 2009ರಲ್ಲಿ ಸ್ಪೈಸಸ್​​ ಬೋರ್ಡ್​ನ ಫೀಲ್ಡ್​ ಆಫೀಸರ್​ ಆಗಿದ್ದರು. ಇದಾದ ನಂತರ ಅವರು ಮುವಾಟ್ಟುಪುಳದಲ್ಲಿ VHSE ಬೋಧಕರಾದರು. 2013ರಲ್ಲಿ ಕೃಷಿ ಅಧಿಕಾರಿಯಾಗಿ ಸೇವೆಗೆ ಸೇರಿದರು.(ಏಜೆನ್ಸೀಸ್​)
ಕೈತುಂಬಾ ಸಂಬಳವಿದ್ರೂ ಮಾಡಬಾರದನ್ನು ಮಾಡಿ ಸಿಕ್ಕಿಬಿದ್ದ ಗ್ಲಾಮರಸ್​ ಕೃಷಿ ಅಧಿಕಾರಿ! ಏನ್​ ಕೇಳಿದ್ರು ಬಾಯ್ಬಿಡ್ತಿಲ್ಲ…

KGF​​ ಬಗ್ಗೆ ಟಾಲಿವುಡ್​ ನಿರ್ದೇಶಕನ ವಿವಾದಾತ್ಮಕ ಹೇಳಿಕೆ ಬೆನ್ನಲ್ಲೇ ಪ್ರಶಾಂತ್​ ನೀಲ್​ ಹಳೇ ವಿಡಿಯೋ ವೈರಲ್​!

ದಕ್ಷಿಣ ಭಾರತ ಸಿನಿಮಾರಂಗದಿಂದ ಗೋವಾ ಬ್ಯೂಟಿ ಇಲಿಯಾನಾ ಡಿ ಕ್ರೂಸ್ ಬ್ಯಾನ್​! ಕಾರಣ ಹೀಗಿದೆ….

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + 5 =
Remember me
