ನವದೆಹಲಿ:ಹೊಸ ಕೃಷಿ ಕಾನೂನು ವಿರೋಧಿಸಿ ರೈತ ಪ್ರತಿಭಟನೆ ತೀವ್ರಗೊಂಡಿರುವ ಬೆನ್ನಿಗೆ ಅವರಿಗೆ ಕೃಷಿ ಸುಧಾರಣೆಯ ವಿಚಾರಗಳನ್ನು ಮನವರಿಕೆ ಮಾಡಿಕೊಡುವ ಪ್ರಯತ್ನವನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಮಾಡಿದರು. ಅವರು ಫೆಡರೇಷನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ (ಎಫ್​ಐಸಿಸಿಐ)ನ 93ನೇ ವಾರ್ಷಿಕ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡುತ್ತ ಕೃಷಿಯ ವಿಚಾರ ಉಲ್ಲೇಖಿಸಿದರು.
ಕೃಷಿಕರಿಗೆ ಅವಕಾಶಗಳನ್ನು ಮತ್ತು ಹೊಸ ಮಾರುಕಟ್ಟೆಗಳನ್ನು ತರುವುದಕ್ಕೆ ಕೃಷಿ ಸುಧಾರಣೆ ಅವಶ್ಯವಾಗಿದೆ. ಟೆಕ್ನಾಲಜಿಯಂದ ಕೃಷಿ ಕ್ಷೇತ್ರಕ್ಕೆ ಲಾಭವೇ ಆಗಲಿದೆ. ಇದು ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಹೂಡಿಕೆಯನ್ನು ತರಲಿದ್ದು ರೈತರಿಗೆ ಹೆಚ್ಚಿನ ಅವಕಾಶಗಳನ್ನು ತೆರೆದುಕೊಡುವಂಥದ್ದಾಗಿದೆ. ವಿಶೇಷವಾಗಿ ಸಣ್ಣ ರೈತರಿಗೆ ಹೆಚ್ಚಿನ ಪ್ರಯೋಜನವಾಗಲಿದೆ.
ಇದನ್ನೂ ಓದಿ:ಮತದಾರರಿಗೆ ಡಿಜಿಟಲ್ ವೋಟರ್ ಐಡಿ: ಪ್ರಸ್ತಾವನೆ ಪರಿಶೀಲಿಸುತ್ತಿದೆ ಚುನಾವಣಾ ಆಯೋಗ
ಭಾರತದಲ್ಲಿ ಕೃಷಿಕರು ಇಂದು ತಮ್ಮ ಕೃಷಿ ಉತ್ಪನ್ನಗಳನ್ನು ಸ್ಥಳೀಯ ಮತ್ತು ಹೊರಗಿನ ಮಾರುಕಟ್ಟೆಗಳಲ್ಲಿ ಅದೇ ರೀತಿ ಡಿಜಿಟಲ್ ವೇದಿಕೆಗಳಲ್ಲೂ ಮಾರಾಟ ಮಾಡುವ ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾರೆ. ಈ ಎಲ್ಲ ಯೋಜನೆಗಳನ್ನು, ಸುಧಾರಣಾ ಕ್ರಮಗಳನ್ನು ಸರ್ಕಾರ ತೆಗೆದುಕೊಳ್ಳುತ್ತಿರುವುದೇ ಕೃಷಿಕರ ಆದಾಯವನ್ನು ಹೆಚ್ಚಿಸುವುದಕ್ಕಾಗಿ ಮತ್ತು ಅವರನ್ನು ಎಲ್ಲ ರೀತಿಯಲ್ಲೂ ಅಭಿವೃದ್ಧಿ ಹೊಂದುವಂತೆ ಮಾಡುವುದಕ್ಕಾಗಿ ಎಂದು ಪ್ರಧಾನಿ ವಿವರಿಸಿದರು. (ಏಜೆನ್ಸೀಸ್)
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮಫೇಸ್​ಬುಕ್​ ಪುಟಲೈಕ್ ಮಾಡಿ ಮತ್ತು ಫಾಲೋ ಮಾಡಿ..
ಕೃಷಿ ಕಾಯ್ದೆಯ ಅಪನಂಬಿಕೆಗಳನ್ನು ತೆಗೆದುಹಾಕಲು ಮುಂದಾದ ಬಿಜೆಪಿ! ದೇಶಾದ್ಯಂತ 700 ಸುದ್ದಿಗೋಷ್ಠಿ

Sign in to your account
Please enter an answer in digits:two × four =
Remember me
