ಜೈಪುರ:ರಾಜಸ್ಥಾನದಲ್ಲಿ ಬಂಡಾಯವೆದ್ದಿದ್ದ ಕಾಂಗ್ರೆಸ್​ ಶಾಸಕರು ಪಕ್ಷಕ್ಕೆ ಮರಳಿದ್ದಾರೆ. ನಾಳೆಯಿಂದ ವಿಧಾನಸಭೆ ಕಲಾಪವೂ ಪ್ರಾರಂಭವಾಗಲಿದ್ದು, ಈ ಮಧ್ಯೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್​ ಅವರು ವಿಶ್ವಾಸಮತ ಯಾಚನೆಗೂ ಮುಂದಾಗಿದ್ದಾರೆ.ಇದೀಗ ಇನ್ನೊಂದು ಮಹತ್ವದ ಬೆಳವಣಿಗೆ ನಡೆದಿದ್ದು, ಮಾಜಿ ಉಪಮುಖ್ಯಮಂತ್ರಿ ಸಚಿನ್​ ಪೈಲಟ್​ ಅವರು ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್​ರನ್ನು ಅವರ ನಿವಾಸದಲ್ಲಿ ಭೇಟಿಯಾಗಿದ್ದಾರೆ.
ಸಚಿನ್​ ಪೈಲಟ್​ ಹಾಗೂ ಅವರ ಬೆಂಬಲಿಗರಾದ 18 ಕಾಂಗ್ರೆಸ್​ ಶಾಸಕರು ಅಶೋಕ್ ಗೆಹ್ಲೋಟ್​ ವಿರುದ್ಧ ಜುಲೈನಲ್ಲಿ ಬಂಡಾಯ ಎದ್ದಿದ್ದರು. ಇದರಿಂದಾಗಿ ಸಚಿನ್​ ಪೈಲಟ್ ಅವರನ್ನು ಡಿಸಿಎಂ ಸ್ಥಾನ ಮತ್ತು ಪ್ರದೇಶ ಕಾಂಗ್ರೆಸ್​ ಸಮಿತಿ ಅಧ್ಯಕ್ಷನ ಸ್ಥಾನದಿಂದ ವಜಾ ಮಾಡಲಾಗಿತ್ತು.ಇದನ್ನೂ ಓದಿ:ನಾಲ್ಕನೇ ದೀರ್ಘಾವಧಿಯ ಪ್ರಧಾನಿ ನಮೋ: ನಾಳೆ ಏಳನೇ ಬಾರಿ ಕೆಂಪುಕೋಟೆಯಿಂದ ಭಾಷಣ
ಇಂದು ಪೈಲಟ್​ ಹಾಗೂ ಗೆಹ್ಲೋಟ್​ ಇಬ್ಬರೂ ಭೇಟಿಯಾಗಿದ್ದಾರೆ. ಇಬ್ಬರೂ ನಗುತ್ತ, ಶೇಕ್​ ಹ್ಯಾಂಡ್ ಮಾಡಿದ್ದಾರೆ. ಈ ವೇಳೆ ಕೆ.ಸಿ.ವೇಣುಗೋಪಾಲ್​, ಅವಿನಾಶ್​ ಪಾಂಡೆ, ರಣದೀಪ್​ ಸುರ್ಜೇವಾಲಾ, ಅಜಯ್​ ಮೇಕನ್​, ಗೋವಿಂದ್ ಸಿಂಗ್​ ದೋತ್ಸಾರಾ ಇದ್ದರು.
ಸಚಿನ್​ ಪೈಲಟ್​ ಪಕ್ಷದಿಂದ ಬಂಡಾಯ ಎದ್ದ ಬಳಿಕ ಅಶೋಕ್​ ಗೆಹ್ಲೋಟ್​ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಅವರೊಬ್ಬ ಯೂಸ್​ಲೆಸ್​ ಎಂದು ಹೇಳಿದ್ದರು. (ಏಜೆನ್ಸೀಸ್​)
ರಾಜಸ್ಥಾನ ರಾಜಕೀಯದಲ್ಲಿ ರೋಚಕ ಟ್ವಿಸ್ಟ್​!: ಅವಿಶ್ವಾಸ ಗೊತ್ತುವಳಿಗೆ ಬಿಜೆಪಿ ಸಿದ್ಧತೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − fourteen =
Remember me
