ನವದೆಹಲಿ:ದೇಶದಲ್ಲಿ ಕರೊನಾ ಲಸಿಕೆ ಅಭಿಯಾನಕ್ಕೆ ಶನಿವಾರ ಬೆಳಗ್ಗೆ 10.30ಕ್ಕೆ ಪ್ರಧಾನಿ ನರೇಂದ್ರ ಮೋದಿ ಆನ್​ಲೈನ್ ಮೂಲಕ ಚಾಲನೆ ನೀಡಲಿದ್ದು, ಮೊದಲ ದಿನ 3 ಲಕ್ಷ ಜನರಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ.
ನಾಳೆ ಆರಂಭವಾಗುವ ಲಸಿಕೆ ಅಭಿಯಾನದಲ್ಲಿ ದೇಶಾದ್ಯಂತ 3,006 ಕೇಂದ್ರಗಳಲ್ಲಿ 3 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುತ್ತದೆ. ಲಸಿಕೆ ನೀಡುವ ಮುನ್ನ ಅನುಸರಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಕೇಂದ್ರ ಸರ್ಕಾರ ಆಯಾ ರಾಜ್ಯ ಸರ್ಕಾರಕ್ಕೆ ಕಳುಹಿಸಿಕೊಟ್ಟಿದೆ.
ಇದನ್ನೂ ಓದಿರಿ:VIDEO| ಕಣ್ಣು ಮಿಟುಕಿಸುವಷ್ಟರಲ್ಲಿ ಕೊಚ್ಚಿ ಹೋದ ಯುವತಿ: ಸೆಲ್ಫಿ ದುರಂತದ ಭಯಾನಕ ವಿಡಿಯೋ ವೈರಲ್​!
ಮಾರ್ಗಸೂಚಿಯಲ್ಲಿರುವಂತೆ 18 ವರ್ಷ ಮೇಲ್ಪಟ್ಟವರಿಗೆ ಮಾತ್ರ ಲಸಿಕೆ ನೀಡಬೇಕು ಮತ್ತು ಗರ್ಭಿಣಿಯರು ಮತ್ತು ಬಾಣಂತಿಯರು ಲಸಿಕೆಯನ್ನು ಸ್ವೀಕರಿಸುವಂತಿಲ್ಲ ಹಾಗೂ ನೀಡುವಂತಿಲ್ಲ.
ಬಹುಮುಖ್ಯವಾಗಿ ಪರಸ್ಪರ ಲಸಿಕೆ ಬದಲಾಯಿಸುವಂತಿಲ್ಲ. ಅಂದರೆ, ಕೋವಾಕ್ಸಿನ್​ ನೀಡಿದರೆ ಎರಡನೇ ಡೋಸ್​ ನೀಡುವಾಗಲೂ ಅದನ್ನೇ ನೀಡಬೇಕು. ಕೋವಿಶೀಲ್ಡ್​ ನೀಡುವಾಗ ಎರಡನೇ ಬಾರಿಯು ಅದನ್ನೇ ಕೊಡಬೇಕು. ಅಲ್ಲದೆ, ಮೊದಲನೇ ಡೋಸ್​ ಮತ್ತು ಎರಡನೇ ಡೋಸ್​ ನಡುವೆ 28 ದಿನಗಳ ಅಂತರವಿರಬೇಕು.
ಲಸಿಕೆ ಹಾಕಿದ ಪ್ರತಿ ವ್ಯಕ್ತಿಯ ಮೇಲೆ 30 ನಿಮಿಷ ನಿಗಾ ಇಡಬೇಕು. ಲಸಿಕೆ ನೀಡುವ ಸ್ಥಳ ವಿಶಾಲವಾಗಿರಬೇಕು ಮತ್ತು ವೇಟಿಂಗ್​ ರೂಮ್​ ಸಹ ಹೊಂದಿರಬೇಕು. ಲಸಿಕೆ ವಿತರಣೆ ತಂಡದಲ್ಲಿ ಕನಿಷ್ಠ 5 ಮಂದಿಯಾದರೂ ಇರಬೇಕು. ಹೈಬಿಪಿ, ಉಸಿರಾಟ ಸಮಸ್ಯೆ ಇರುವವರ ಮೇಲೆ ತೀವ್ರ ನಿಗಾ ಇರಿಸಬೇಕು. ಒಂದು ದಿನಕ್ಕೆ 100 ರಿಂದ 200 ಮಂದಿಗೆ ಮಾತ್ರ ಲಸಿಕೆ ನೀಡಬೇಕು.
ಲಸಿಕೆ ವಿತರಣೆ ವೇಳೆ ಆಧಾರ್​ ಕಾರ್ಡ್​, ವೋಟರ್​ ಐಡಿ, ಡ್ರೈವಿಂಗ್​ ಲೈಸೆನ್ಸ್​ ಹಾಗೂ ಪಾಸ್​ಪೋರ್ಟ್​ ಸೇರಿದಂತೆ ಮುಂತಾದ ಗುರುತಿನ ಚೀಟಿಗಳು ಕಡ್ಡಯಾವಾಗಿರಬೇಕು.
ಇದನ್ನೂ ಓದಿರಿ:ಗಾಳಿಪಟ ಹಿಡಿಯಲು ಹೋದ ಬಾಲಕನನ್ನು ಹಿಂಬಾಲಿಸಿದ ಜವರಾಯ: ಸಂಕ್ರಾಂತಿಯಂದೇ ದುರಂತ ಸಾವು!
ವೈರಸ್ ಸೋಂಕಿಗೆ ಒಳಗಾದ ಜನರಿಗೆ ಕಟ್ಟುನಿಟ್ಟಾದ ಶಿಷ್ಟಾಚಾರ ಸಹ ಇದೆ. ಕರೊನಾ ಸಕ್ರಿಯ ರೋಗ ಲಕ್ಷಣಗಳಿಂದ ಗುಣವಾದ ರೋಗಿಗಳು, ಪ್ಲಾಸ್ಮಾ ಥೆರಪಿ ಪಡೆದುಕೊಂಡವರು ಮತ್ತು ಇತರೆ ಕಾರಣಗಳಿಂದ ಆಸ್ಪತ್ರೆಗೆ ದಾಖಲಾದವರಿಗೆ ಲಸಿಕೆ ನೀಡುವುದನ್ನು 4 ರಿಂದ 8 ವಾರಗಳವರೆಗೆ ಮುಂದೂಡಬೇಕು ಎಂದು ಕೇಂದ್ರ ಸರ್ಕಾರ ಮಾರ್ಗಸೂಚಿಯಲ್ಲಿ ತಿಳಿಸಿದೆ.(ಏಜೆನ್ಸೀಸ್​)
ಮೊದಲ ದಿನ 3 ಲಕ್ಷ ಲಸಿಕೆ; ದೇಶದ ಬೃಹತ್ ಲಸಿಕೆ ಅಭಿಯಾನಕ್ಕೆ ನಾಳೆ ಚಾಲನೆ

ಮುಂಬಡ್ತಿ ಗೋಲ್ಮಾಲ್!; ಅರ್ಹತೆ ಇಲ್ಲದವರಿಗೆ ಹಿಂಬಡ್ತಿ, ನಕಲಿ ಪದವೀಧರರ ವಿರುದ್ಧ ಕೇಸ್..

ರಾಮಸೇತು ಅಧ್ಯಯನಕ್ಕೆ ಸಮ್ಮತಿ; ನೀರಿನ ಆಳದಲ್ಲಿನ ಮಾದರಿ ಸಂಗ್ರಹಿಸಿ ವಿಶ್ಲೇಷಣೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × three =
Remember me
