ಅಮರಾವತಿ:ಆಡಳಿತರೂಢ ವೈಎಸ್​ಆರ್​ ಕಾಂಗ್ರೆಸ್​ ವಿರುದ್ಧ ತಮ್ಮ ವಾಗ್ದಾಳಿಯನ್ನು ಮುಂದುವರೆಸಿರುವ ಟಿಡಿಪಿ ನಾಯಕ ನಾರಾ ಲೋಕೇಶ್​, ಸಿಎಂ ಜಗನ್​ ಮೋಹನ್​ ರೆಡ್ಡಿ ಅವರನ್ನು ರಾವಣನಿಗೆ ಹೋಲಿಸಿ ಸೈಕೋ ಎಂದು ಕರೆದಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬರೆದುಕೊಂಡಿರುವ ನಾರಾ ಲೋಕೇಶ್​, ಜನರು ಪೇಪರ್​ಗಳನ್ನು ಸುಡುವ ಮೂಲಕ ಆಡಳಿತರೂಢ ಸರ್ಕಾರದ ವಿರುದ್ಧ ಆಕ್ರೋಶವನ್ನು ಹೊರಹಾಕಬೇಕು ಎಂದು ಕರೆ ನೀಡಿದ್ದಾರೆ.
దేశం చేస్తోంది రావ‌ణాసుర ద‌హ‌నం-మ‌నం చేద్దాం జ‌గ‌నాసుర ద‌హ‌నం. అరాచ‌క, విధ్వంస‌క పాల‌న సాగిస్తున్న సైకో జ‌గ‌నాసురుడి పీడ పోవాల‌ని నిన‌దిద్దాం. అక్టోబ‌ర్ 23 విజ‌య‌ద‌శ‌మి ప‌ర్వ‌దినం సంద‌ర్భంగా రాత్రి 7 గంట‌ల నుంచి 7.05 నిమిషాల మ‌ధ్య‌లో వీధుల్లోకి వ‌చ్చి “సైకో పోవాలి“ అని రాసి…pic.twitter.com/eP21amu15z
ಇದನ್ನೂ ಓದಿ:ಮಧ್ಯಪ್ರದೇಶ ಚುನಾವಣೆ| ಮತ್ತಷ್ಟು ಭುಗಿಲೆದ್ದ ಭಿನ್ನಾಭಿಪ್ರಾಯ; ಕಾಂಗ್ರೆಸ್​ ವಿರುದ್ಧ ಪಿಡಿಎ ಅಸ್ತ್ರ ಉಪಯೋಗಿಸಿದ ಎಸ್​ಪಿ
ದಸರಾ ಪ್ರಯುಕ್ತ ಇಡೀ ದೇಶವು ರಾವಣನನ್ನು ಸುಡುತ್ತಿದೆ. ಅದೇ ರೀತಿ ನಾವು ವಿಧ್ವಂಸಕ ಆಡಳಿತ ನಡೆಸುತ್ತಿರುವ ಮನೋರೋಗಿ ಜಗನ್ನಾಸುರನನ್ನು ಸುಟ್ಟು ರಾಜ್ಯದಲ್ಲಿ ಸೃಷ್ಟಿಯಾಗಿರುವ ಅರಾಜಕತೆಯನ್ನು ನಿಲ್ಲಿಸೋಣ. ವಿಜಯದಶಮಿಯಂದು ಪ್ರತಿಯೊಬ್ಬರು ಬೀದಿಗಿಳಿದು “ಸೈಕೋ ಪೋವಾಲಿ” ಎಂದು ಬರೆದಿರುವ ಪೇಪರ್​ಗಳನ್ನು ಸುಟ್ಟು ಹಾಕಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿ. ಚಂದ್ರಬಾಬು ನಾಯ್ಡು ಬಾಬು ಅವರು ಆದಷ್ಟು ಬೇಗ ಹೊರಬರಲಿ ಎಂದು ಈ ದಸರಾವನ್ನು ಆಚರಿಸೋಣ ಎಂದು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬರೆದುಕೊಂಡಿದ್ದಾರೆ.
ಮುಂದಿನ ವರ್ಷ ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಟಿಡಿಪಿ ಹಾಗೂ ಜನಸೇನಾ ಪಕ್ಷವು ಜಂಟಿಯಾಗಿ ಸ್ಪರ್ಧಿಸಲಿದ್ದು, 175 ವಿಧಾನಸಭಾ ಕ್ಷೇತ್ರಗಳ ಪೈಕಿ 160 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 10 =
Remember me
