ಭೋಪಾಲ್​:ಶಾಸಕರ ರಾಜೀನಾಮೆಯಿಂದಾಗಿ ಸಂಕಷ್ಟದಲ್ಲಿರುವ ಮಧ್ಯಪ್ರದೇಶ ಕಾಂಗ್ರೆಸ್​ ಸರ್ಕಾರಕ್ಕೆ ರಾಜ್ಯಪಾಲ ಲಾಲ್​ಜಿ ಟಂಡನ್​ ಅವರು ಮತ್ತೊಂದು ಶಾಕ್​​ ನೀಡಿದ್ದು, ನಾಳೆಯೇ ಬಹುಮತ ಸಾಬೀತಿಗೆ ಗಡುವು ನೀಡಿರುವುದರಿಂದ ಸಿಎಂ ಕಮಲ್​ನಾಥ್​ ಸರ್ಕಾರ ಪತನಕ್ಕೆ ಕೌಂಟ್​ಡೌನ್​ ಶುರುವಾಗಿದೆ.​
ಸಿಎಂ ಕಮಲ್​ನಾಥ್​ ಇಂದು ಸಚಿವ ಸಂಪುಟ ಸಭೆ ಕರೆದಿರುವುದರಿಂದ ಕುದುರೆ ವ್ಯಾಪಾರ ಭೀತಿಯಿಂದ ಜೈಪುರದ ರೆಸಾರ್ಟ್​ನಲ್ಲಿದ್ದ ತಮ್ಮ ಶಾಸಕರನ್ನು ಮರಳಿಗೆ ರಾಜ್ಯಕ್ಕೆ ಕರೆತರುತ್ತಿದ್ದಾರೆ.
ಶನಿವಾರವಷ್ಟೇ ಲಾಲ್​ಜಿ ಟಂಡನ್​ ಅವರು ಸೋಮವಾರ ವಿಶ್ವಾಸಮತ ಯಾಚನೆ ನಡೆಸುವಂತೆ ಸ್ಪೀಕರ್​ ನರ್ಮದಾ ಪ್ರಸಾದ್​ ಅವರಿಗೆ ಸೂಚನೆ ನೀಡಿದ್ದರು. ಆರು ಬಂಡಾಯ ಶಾಸಕರ ರಾಜೀನಾಮೆಯನ್ನು ಸ್ಪೀಕರ್​ ಅಂಗೀಕರಿಸಿದ ಬೆನ್ನಲ್ಲೇ ರಾಜ್ಯಪಾಲರು ಬಹುಮತ ಸಾಬೀತಿಗೆ ಸೂಚಿಸಿದ್ದಾರೆ.
ಆರು ಶಾಸಕರ ರಾಜೀನಾಮೆಯಿಂದಾಗಿ ಮಧ್ಯಪ್ರದೇಶ ವಿಧಾನಸಭಾ ಬಲ 113ಕ್ಕೆ ಕುಸಿದಿದೆ. ಬಹುಮತ ತಲುಪಲು ಕಾಂಗ್ರೆಸ್​ಗೆ ಇನ್ನೂ ಇಬ್ಬರು ಶಾಸಕರ ಬೆಂಬಲ ಬೇಕಾಗಿದೆ. ಹೀಗಾಗಿ ನಾಳಿನ ವಿಶ್ವಾಸಮತ ಯಾಚನೆಯಲ್ಲಿ ಕಮಲ್​ನಾಥ್​ ಸರ್ಕಾರದ ಭವಿಷ್ಯ ನಿರ್ಧಾರವಾಗಲಿದೆ.
ಕಳೆದ ವಾರ 22 ಕಾಂಗ್ರೆಸ್​ ಶಾಸಕರು ರಾಜೀನಾಮೆ ನೀಡಿದ್ದಾರೆ. ಇದರಲ್ಲಿ 6 ಶಾಸಕರನ್ನು ಸಿಎಂ ಕಮಲ್​ನಾಥ್​ ಮನವಿಯಂತೆ ರಾಜ್ಯಪಾಲರು ವಜಾಗೊಳಿಸಿದ್ದಾರೆ. ಕಾಂಗ್ರೆಸ್​ ತೊರೆದು ಬಿಜೆಪಿ ಸೇರಿರುವ ಜೋತಿರಾದಿತ್ಯ ಸಿಂಧಿಯಾ ಬಣದ ಕಾಂಗ್ರೆಸ್​ ಶಾಸಕರ ನಡೆಯಿಂದಾಗಿ ಕಮಲ್​ ಸರ್ಕಾರಕ್ಕೆ ಸಂಕಷ್ಟ ಎದುರಾಗಿದೆ. ರಾಜೀನಾಮೆ ನೀಡಿರುವ ಶಾಸಕರನ್ನು ಬೆಂಗಳೂರಿನಲ್ಲಿ ಬಲವಂತವಾಗಿ ಬಂಧಿಸಿಡಲಾಗಿದೆ ಎಂದು ಕಾಂಗ್ರೆಸ್​ ಆರೋಪಿಸಿದೆ.
ಸದ್ಯ ಕಾಂಗ್ರೆಸ್​ ತನ್ನ 108 ಶಾಸಕರೊಂದಿಗೆ ಇತರೆ 7 ಶಾಸಕರ ಬೆಂಬಲವನ್ನು ಹೊಂದಿದೆ. ಒಂದು ವೇಳೆ ಎಲ್ಲ ಶಾಸಕರ ರಾಜೀನಾಮೆ ಅಂಗೀಕಾರವಾದರೆ, ವಿಧಾನಸಭಾ ಬಹುಮತ ಸಂಖ್ಯೆ 104ರ ಸಂಖ್ಯೆಗಿಂತಲೂ ಕಾಂಗ್ರೆಸ್​ ಬಲ ಕುಸಿಯಲಿದೆ. ಬಿಜೆಪಿ 107 ಶಾಸಕರನ್ನು ಹೊಂದಿದ್ದು, ಸರ್ಕಾರವನ್ನು ರಚಿಸಬಹುದಾಗಿದೆ.(ಏಜೆನ್ಸೀಸ್​)
ಕಾಂಗ್ರೆಸ್​ಗೆ ಶಾಕ್​ ಮೇಲೆ ಶಾಕ್​: ಮಧ್ಯಪ್ರದೇಶ ಬೆನ್ನಲ್ಲೇ ಗುಜರಾತಿನ ಇಬ್ಬರು ಶಾಸಕರಿಂದ ರಾಜೀನಾಮೆ

ವಿಶ್ವಾಸಮತಕ್ಕೆ ಅವಕಾಶ ಕೋರಿದ ಕಮಲ್​ನಾಥ್: 6 ಸಚಿವರನ್ನು ವಜಾ ಮಾಡಿದ ರಾಜ್ಯಪಾಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + seven =
Remember me
