ಲಖನೌ:ಪ್ರಿಯಕರನಿಗಾಗಿ ಭಾರತದ ಗಡಿಯನ್ನು ಅಕ್ರಮವಾಗಿ ಪ್ರವೇಶಿಸಿರುವ ಪಾಕಿಸ್ತಾನದ ಪ್ರಜೆ ಸೀಮಾ ಹೈದರ್​ ರಕ್ಷಾ ಬಂಧನದ ಅಂಗವಾಗಿ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್​ ಷಾ, ರಕ್ಷಣಾ ಸಚಿವ ರಾಜ್​ನಾಥ್​ ಸಿಂಗ್​ ಸೇರಿದಂತೆ ದೇಶದ ಪ್ರಮುಖ ನಾಯಕರಿಗೆ ರಾಖಿಯನ್ನು ಕಳಿಸಿಕೊಟ್ಟಿರುವುದಾಗಿ ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ ಸೀಮಾ ಹೈದರ್​ ರಕ್ಷಾ ಬಂಧನದ ಪ್ರಯುಕ್ತ ದೇಶದ ಪ್ರಮುಖ ನಾಯಕರಿಗೆ ರಾಖಿಯನ್ನು ಕಳುಹಿಸಿಕೊಟ್ಟಿರುವುದಾಗಿ ಹೇಳುತ್ತಿರುವುದು ಕಂಡು ಬರುತ್ತದೆ. ಆಗಸ್ಟ್​ 30ರಂದು ದೇಶಾದ್ಯಂತ ರಕ್ಷಾ ಬಂಧನವನ್ನು ಆಚರಿಸಲಾಗುತ್ತದೆ.
Seema Haider, who came to India from Pakistan sent Rakhi to PM Modi, Amit Shah, CM Yogi 🤣#SeemaHaider#SeemaSachin#AFGvPAK#BabarAzam#ViratKohli𓃵#AsiaCup2023#accidentpic.twitter.com/ksxw0x5gk3
ಇದನ್ನೂ ಓದಿ:ಹಳೆಯ ವಾಹನಗಳಿಗೆ ಹೊಸ ನಂಬರ್​ ಪ್ಲೇಟ್​ ಕಡ್ಡಾಯಗೊಳಿಸಿ ಸಾರಿಗೆ ಇಲಾಖೆ ಆದೇಶ
ದೇಶದ ಜವಾಬ್ದಾರಿ ಹೊತ್ತಿರುವ ನನ್ನ ಸಹೋದರರಿಗೆ ರಕ್ಷಾ ಬಂಧನದ ದಿನದಂದೇ ಈ ರಾಖಿಗಳು ತಲುಪಲೆಂದು ಮುಂಚಿತವಾಗಿಯೇ ಕಳುಹಿಸುತ್ತಿದ್ದೇನೆ. ಜೈಶ್ರೀರಾಮ್​, ಜೈ ಹಿಂದ್​, ಹಿಂದೂಸ್ತಾನ್​ ಜಿಂದಾಬಾದ್​ ಎಂದು ಹೇಳುತ್ತಿರುವುದು ಕಂಡು ಬರುತ್ತದೆ. ಮತ್ತೊಂದು ವಿಡಿಯೋದಲ್ಲಿ ಸೀಮಾ ತನ್ನ ಮಕ್ಕಳೊಂದಿಗೆ ರಾಖಿ ಸಿದ್ದಪಡಿಸುತ್ತಿರುವುದು ಎಲ್ಲೆಡೆ ವೈರಲ್​ ಆಗಿದೆ.
ದೇಶದ ಪ್ರಮುಖ ನಾಯಕರಾದ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್​ ಷಾ, ರಕ್ಷಣಾ ಸಚಿವ ರಾಜನಾಥ್​ ಸಿಂಗ್​, ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​, ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್​ ಭಾಗವತ್​ ಸೇರಿದಂತೆ ಹಲವರಿಗೆ ರಕ್ಷಾ ಬಂಧನದ ಪ್ರಯುಕ್ತ ಸೀಮಾ ರಾಖಿ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + fifteen =
Remember me
