ಅಹಮದಾಬಾದ್​:ದಿನೇದಿನೆ ಹೆಚ್ಚಾಗುತ್ತಿರುವ ಕರೊನಾ ಸೋಂಕು ತಡೆಗಟ್ಟಲು ಅಹಮದಾಬಾದ್​ ನಗರವನ್ನು ಒಂದು ವಾರ ಸಂಪೂರ್ಣ ಲಾಕ್​ಡೌನ್​ ಮಾಡಲು ಗುಜರಾತ್​ ಸರ್ಕಾರ ನಿರ್ಧರಿಸಿದೆ. ಲಾಕ್​ಡೌನ್​ ಅನ್ನು ಪರಿಪೂರ್ಣವಾಗಿ ಅನುಷ್ಠಾನಗೊಳಿಸಲು ಅರೆಮಿಲಿಟರಿ ಪಡೆ ನೆರವು ಪಡೆಯಲಾಗುತ್ತಿದೆ.
ಗುರುವಾರ ಮಧ್ಯರಾತ್ರಿಯಿಂದಲೇ ಸಂಪೂರ್ಣ ಲಾಕ್​ಡೌನ್​ ಜಾರಿಗೆ ಬರುತ್ತಿದೆ. ಇದನ್ನು ಪರಿಪೂರ್ಣವಾಗಿ ಅನುಷ್ಠಾನಗೊಳಿಸಲು ಅರೆಮಿಲಿಟರಿ ಪಡೆಯ 5 ಹೆಚ್ಚುವರಿ ಕಂಪನಿಗಳ ಸಹಾಯ ಪಡೆದುಕೊಳ್ಳಲಾಗುತ್ತಿದೆ. ಈ ಸಿಬ್ಬಂದಿ ಬುಧವಾರ ನಗರವನ್ನು ತಲುಪಿದ್ದು, ಗುರುವಾರ ಬೆಳಗ್ಗೆ ನಗರದಾದ್ಯಂತ ಪಥಸಂಚಲನ ನಡೆಸಿ, ಲಾಕ್​ಡೌನ್​ ಬಗ್ಗೆ ಅರಿವು ಮೂಡಿಸಿದರು.
ಇದನ್ನೂ ಓದಿ:ಮದುವೆಗೆ ಕೂಡಿಟ್ಟ 1 ಲಕ್ಷ ರೂ. ಹಣ ಕೋವಿಡ್​ ನಿಧಿಗೆ ದಾನ
ಬುಧವಾರ ಸಂಜೆವರೆಗೆ ಅಹಮದಾಬಾದ್​ನಲ್ಲಿ 4,425 ಕರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಇವರಲ್ಲಿ ಒಟ್ಟು 273 ಮಂದಿ ಮೃತಪಟ್ಟಿದ್ದು, ಸಾವಿನ ಪ್ರಮಾಣ ಶೇ.6.1 ಇದೆ. ರಾಷ್ಟ್ರೀಯ ಸಾವಿನ ಸರಾಸರಿ ಪ್ರಮಾಣ ಶೇ.3.3 ಇದೆ. ಈ ಹಿನ್ನೆಲೆಯಲ್ಲಿ ನಗರಾದ್ಯಂತ ಒಂದು ವಾರ ಕಟ್ಟುನಿಟ್ಟಾಗಿ ಲಾಕ್​ಡೌನ್​ ಅನುಷ್ಠಾನಗೊಳಿಸಲಾಗುತ್ತಿದ್ದು, ಕೇವಲ ಹಾಲು ಮತ್ತು ಔಷಧ ಖರೀದಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ. ಇದನ್ನು ಖರೀದಿಸಲು ಬರುವವರು ದೈಹಿಕ ಅಂತರ ಕಾಪಾಡಿಕೊಳ್ಳುವುದು ಕಡ್ಡಾಯವಾಗಿದೆ. ಲಾಕ್​ಡೌನ್​ ಉಲ್ಲಂಘಿಸುವವರ ವಿರುದ್ಧ ಅರೆಮಿಲಿಟರಿ ಪಡೆ ಸಿಬ್ಬಂದಿ ಕಠಿಣ ಕ್ರಮ ಕೈಗೊಳ್ಳಲಿದ್ದಾರೆ.
ಖರೀದಿಗೆ ಮುಗಿಬಿದ್ದ ಜನರು:ಗುರುವಾರದಿಂದ ಸಂಪೂರ್ಣ ಲಾಕ್​ಡೌನ್​ ಜಾರಿಗೆ ಬರುತ್ತಿದ್ದು, ಕಟ್ಟುನಿಟ್ಟಿನ ಅನುಷ್ಠಾನಕ್ಕಾಗಿ ಅರೆಮಿಲಿಟರಿಪಡೆ ಸಹಾಯ ಪಡೆಯುತ್ತಿರುವುದು ಗೊತ್ತಾಗಿ ಜನರು ಗುರುವಾರದಂದು ಅಗತ್ಯವಸ್ತುಗಳ ಖರೀದಿಗೆ ಮುಗಿಬಿದ್ದಿದ್ದರು. ಹಲವು ಪ್ರದೇಶಗಳಲ್ಲಿ ಜನರ ನೂಕುನುಗ್ಗಲಿನಿಂದ ಗೊಂದಲದ ವಾತಾವರಣ ಏರ್ಪಟ್ಟಿತ್ತು. ಬೀದಿಬದಿ ತರಕಾರಿ ವ್ಯಾಪಾರದ ಗಾಡಿಗಳು, ದಿನಸಿ ಅಂಗಡಿಗಳ ಮುಂದೆ ಜನರ ಉದ್ದನೆ ಸರತಿಸಾಲು ಕಂಡುಬಂದಿತು.
ಭಾರತೀಯರ ರಕ್ಷಣೆಗೆ ಆಪರೇಷನ್​ ಸಮುದ್ರ ಸೇತು; ಮಾಲ್ಡೀವ್ಸ್​ ತಲುಪಿದ ಜಲಾಶ್ವ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × one =
Remember me
