ಅಹಮದಾಬಾದ್:ಗುಜರಾತ್​ನ ಅಹಮದಾಬಾದ್​ನಲ್ಲಿ ತರಕಾರಿ, ಹಣ್ಣು ಮಾರಾಟಗಾರರು ಹಾಗೂ ಅಂಗಡಿ ವ್ಯಾಪಾರಸ್ಥರಿಗೆ ಕಳೆದ ಮೇ 7 ರಿಂದ 14ರವರೆಗೆ ನಡೆಸಿದ ಬೃಹತ್ ಕರೊನಾ ಪರೀಕ್ಷೆ ಅಭಿಯಾನದ ವರದಿಯಲ್ಲಿ 700 ಜನರಿಗೆ ಸೋಂಕು ದೃಢಪಟ್ಟಿರುವುದು ಬಹಿರಂಗವಾಗಿದೆ. ಇವರೆಲ್ಲರೂ ಈಗಾಗಲೇ ನೂರಾರು ಜನರ ಜತೆಗೆ ವ್ಯವಹಾರ ನಡೆಸಿರುವುದರಿಂದ ಆತಂಕ ಮತ್ತಷ್ಟು ಉಲ್ಬಣವಾಗಿದೆ.
ತರಕಾರಿ, ಹಣ್ಣು ಮಾರಾಟಗಾರರಿಂದ ದೊಡ್ಡ ಪ್ರಮಾಣದಲ್ಲಿ ಜನರಿಗೆ ಸೋಂಕು ಪಸರಿಸುವ ಸಾಧ್ಯತೆ ಇರುವುದರಿಂದ ಇವರನ್ನು ಸೂಪರ್ ಸ್ಪ್ರೆಡರ್ಸ್ ಎಂದು ಕರೆಯಲಾಗಿದೆ. ಇದರಲ್ಲಿ ದಿನಸಿ ಅಂಗಡಿ ವರ್ತಕರು, ಹಾಲು ಮಾರಾಟಗಾರರು, ಪೆಟ್ರೋಲ್ ಬಂಕ್ ಕೆಲಸಗಾರರು, ಕಸ ಶೇಖರಿಸುವವರು ಸೇರಿ ಅನೇಕ ವೃತ್ತಿಯ ಜನರು ಸೇರಿದ್ದಾರೆ. ಇವರ ಕೆಲಸದ ಸ್ವರೂಪದಿಂದಾಗಿ ಇವರು ಹೆಚ್ಚು ಜನರಿಗೆ ಸೋಂಕು ಪಸರಿಸಿರುವ ಸಾಧ್ಯತೆ ಹೆಚ್ಚಿರುತ್ತದೆ.
ಇದನ್ನೂ ಓದಿ:ಒಂದೇ ಅಪಾರ್ಟ್​ಮೆಂಟ್​ನ 25 ಮಂದಿಗೆ ಕರೊನಾ ಸೋಂಕು…ಸ್ಥಳದ ಸುತ್ತಮುತ್ತ ಆತಂಕ
ಅಹಮದಾಬಾದ್ ಅಧಿಕಾರಿಗಳು ಮೇ 7 ರಿಂದ 14ರವರೆಗೆ ಹಾಲು, ಔಷಧ ಮಳಿಗೆಗಳ ವ್ಯಾಪಾರವನ್ನು ಹೊರತುಪಡಿಸಿ ಎಲ್ಲ ರೀತಿಯ ವಹಿವಾಟನ್ನು ಸ್ಥಗಿತಗೊಳಿಸಿ ಬೃಹತ್ ಪ್ರಮಾಣದಲ್ಲಿ ಕರೊನಾ ಪರೀಕ್ಷೆ ನಡೆಸಿದ್ದರು. ಸುಮಾರು 33,500 ಜನರನ್ನು ಸ್ಕ್ರೀನಿಂಗ್ ತಪಾಸಣೆಗೆ ಒಳಪಡಿಸಲಾಗಿದ್ದು, 12,500 ಜನರಿಗೆ ಕರೊನಾ ವೈದ್ಯಕೀಯ ಪರೀಕ್ಷೆ ನಡೆಸಲಾಗಿತ್ತು. ಇದರಲ್ಲಿ 700 ಜನರಿಗೆ ಸೋಂಕು ದೃಢಪಟ್ಟಿದ್ದು, ಅವರನ್ನೆಲ್ಲ ಐಸೋಲೇಷನ್​ಗೆ ಒಳಪಡಿಸಲಾಗಿದೆ ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೀವ್ ಗುಪ್ತಾ ತಿಳಿಸಿದ್ದಾರೆ.
ಇದಕ್ಕೂ ಮುನ್ನ ಏಪ್ರಿಲ್ 20 ರಂದು ನಡೆಸಿದ್ದ ವೈದ್ಯಕೀಯ ಪರೀಕ್ಷೆ ಅಭಿಯಾನದಲ್ಲಿ ಸುಮಾರು 350 ಸೂಪರ್ ಸ್ಪ್ರೆಡರ್​ಗಳಿಗೆ ಸೋಂಕು ತಗುಲಿದ್ದು ಪತ್ತೆಯಾಗಿತ್ತು. ಈ ಹಿನ್ನೆಲೆ ಅಧಿಕ ಪ್ರಮಾಣದಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತಿದ್ದು, ಸೂಪರ್ ಸ್ಪ್ರೆಡರ್​ಗಳಿಂದ ಸೋಂಕು ಇತರ ಜನರಿಗೆ ಪಸರಿಸುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲಾಗುತ್ತಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + three =
Remember me
