ಅಹಮದಾಬಾದ್​:ದೇಶದಲ್ಲಿಯೇ ಅತಿ ಹೆಚ್ಚು ಸೋಂಕಿತ ಪ್ರಕರಣಗಳು ವರದಿಯಾಗುತ್ತಿರುವುದು ಮಹಾರಾಷ್ಟ್ರದಿಂದ. ಆದರೆ, ಸಾವಿನ ಪ್ರಮಾಣ ಹೆಚ್ಚಾಗಿರುವುದು ಮಾತ್ರ ಅಹಮದಾಬಾದ್​ನಲ್ಲಿ. ಇದು ಸ್ಥಳೀಯಾಡಳಿಕ್ಕೆ ತೀವ್ರ ಕಳವಳ ಉಂಟುಮಾಡಿದೆ.
ಆರಂಭದಲ್ಲಿ ಗುಜರಾತ್​ನಲ್ಲಿ ಕೋವಿಡ್​ ಪೀಡಿತರ ಸಂಖ್ಯೆ ಕಡಿಮೆಯಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಅಲ್ಲಿ ಸೋಂಕಿತರ ಸಂಖ್ಯೆ ರಾಕೆಟ್​ ವೇಗದಲ್ಲಿ ಏರುತ್ತಿದೆ. ದೇಶದಲ್ಲಿ ಒಟ್ಟು ಸೋಂಕಿತರು 29,435 ಆಗಿದ್ದು, ಇವರಲ್ಲಿ ಮೃತಪಟ್ಟವರ ಸಂಖ್ಯೆ 934. ಸಾವಿನ ಶೇಕಡಾವರು ಪ್ರಮಾಣ ಗಮನಿಸಿದಲ್ಲಿ ಶೇ.3.1 ಆಗುತ್ತದೆ. ಅದೇ ಅಹಮದಾಬಾದ್​ನಲ್ಲಿ 2,167 ಜನರು ಸೋಂಕಿಗೆ ಒಳಗಾಗಿದ್ದು, ಇಲ್ಲಿ ಮೃತಪಟ್ಟವರ ಸಂಖ್ಯೆ 102. ರಾಷ್ಟ್ರೀಯ ಸರಾಸರಿಗೆ ಹೋಲಿಸಿದಲ್ಲಿ ಇದರ ಪ್ರಮಾಣ ಶೇ.4.71 ಆಗಿದೆ. ಆತಂಕದ ವಿಚಾರವೆಂದರೆ ಮುಂಬೈಗಿಂತಲೂ ಇಲ್ಲಿ ಸಾವಿನ ಸರಾಸರಿ ಹೆಚ್ಚಾಗಿದೆ.
ಮುಂಬೈನ 5,407 ಪ್ರಕರಣಗಳಲ್ಲಿ 204 ಜನರು ಮೃತಪಟ್ಟಿದ್ದಾರೆ. ಇದು ಶೇ.3.77 ಆಗಿದೆ. ಅದೇ ದೆಹಲಿಯಲ್ಲಿ ಮೃತಪಟ್ಟವರು 102 ಜನ. ಇದು ಶೇ.1.85 ಆಗಿದೆ. ಗುಜರಾತ್​ನಲ್ಲಿ ಮೃತಪಟ್ಟವರಲ್ಲಿ ಅಹಮದಾಬಾದ್​ನವರ ಪ್ರಮಾಣವೇ ಶೇ.67.5 ಆಗಿದೆ. ಗುಜರಾತ್​ನಲ್ಲಿ 3,548 ಸೋಂಕಿತರಿದ್ದು, ಇವರಲ್ಲಿ 162 ಜನರು ಮೃತಪಟ್ಟಿದ್ದಾರೆ.
ಮಹಾರಾಷ್ಟ್ರದಲ್ಲಿ ಸಾವಿನ ಪ್ರಮಾಣ ಶೇ.4.24, ರಾಜಸ್ಥಾನ- ಶೇ.2.05, ಉತ್ತರಪ್ರದೇಶ-ಶೇ.1.51, ತಮಿಳುನಾಡಿನಲ್ಲಿ ಶೇ.1.24 ಆಗಿದೆ. ಅಲ್ಲದೇ. ಈ ಎಲ್ಲ ರಾಜ್ಯಗಳಲ್ಲೂ ಸೋಂಕಿತರ ಪ್ರಮಾಣ 1,500ಕ್ಕಿಂತಲೂ ಹೆಚ್ಚಾಗಿದೆ.
ಇಷ್ಟಕ್ಕೂ ಮೃತರಲ್ಲಿ ಹಿರಿಯರೇ ಹೆಚ್ಚಾಗಿರುವುದರಿಂದ ಅವರನ್ನು ಅತ್ಯಂತ ಕಾಳಜಿಯಿಂದ ನೋಡಿಕೊಳ್ಳಬೇಕೆಂದು ಅಹಮದಾಬಾದ್​ ಪಾಲಿಕೆ ನಾಗರಿಕರಲ್ಲಿ ಮನವಿ ಮಾಡಿದೆ. ಕಿರಿಯರಲ್ಲಿ ಚೇತರಿಕೆ ಪ್ರಮಾಣ ಹೆಚ್ಚಾಗಿದೆ. ಆದರೆ, ಹಿರಿಯರಿಗೆ ಕಷ್ಟಸಾಧ್ಯವಾಗುತ್ತಿದೆ. ಹೀಗಾಗಿ ಅವರು ಸೋಂಕಿಗೆ ಒಳಗಾದಂತೆ ನೋಡಿಕೊಳ್ಳುವುದು ಎಲ್ಲರ ಜವಾಬ್ದಾರಿಯಾಗಿದೆ ಎಂಬ ಅರಿವನ್ನು ಎಲ್ಲರಲ್ಲೂ ಮೂಡಿಸುತ್ತಿದೆ.
ಮನೆಯಲ್ಲಿಯೇ ಇರಬೇಕಾಗಿದೆ ಮುಂಬೈ ಪೊಲೀಸರು, ಆತಂಕ ಮೂಡಿಸಿದೆ ಸಿಬ್ಬಂದಿಯಲ್ಲೇ ಹೆಚ್ಚುತ್ತಿರುವ ಸೋಂಕು

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:2 × four =
Remember me
