ನವದೆಹಲಿ:ಕೃತಕ ಬುದ್ಧಿಮತ್ತೆ (AI- ಆರ್ಟಿಫಿಶಿಯಲ್​ ಇಂಟೆಲಿಜೆನ್ಸ್​) ಸಾಧನ​ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಖ್ಯಾತಿ ಪಡೆದುಕೊಂಡಿದ್ದು, ಹಲವಾರು ಕಲಾವಿದರು ಇದನ್ನು ಬಳಸುತ್ತಿದ್ದಾರೆ. AI ಎಷ್ಟು ಆಧುನಿಕವಾಗಿದೆ ಅಂದರೆ ಜನರು ಹೆಚ್ಚು ಶ್ರಮವಹಿಸದೇ ಎಲ್ಲ ಬಗೆಯ ಫೋಟೋಗಳನ್ನು ರಚಿಸಬಹುದು. ಕೆಲವೊಮ್ಮೆ ಭವಿಷ್ಯದಲ್ಲಿ ವಸ್ತುಗಳು ಅಥವಾ ವ್ಯಕ್ತಿಗಳು ಹೇಗೆ ಕಾಣುತ್ತಾರೆ ಎಂಬುದನ್ನು ಸಹ AI ಮೂಲಕ ಊಹಿಸಿಕೊಳ್ಳಬಹುದು. ಅಲ್ಲದೆ, ತಮ್ಮ ಕಲ್ಪನೆ ಹಾಗೂ ಇಷ್ಟದ ಪಾತ್ರವನ್ನು ಪ್ರಮುಖ ವ್ಯಕ್ತಿಗಳ ಮೇಲೆ ರಚಿಸಬಹುದು.
ಈ ಹಿಂದೆ ಎಐ ಕಲಾವಿದರೊಬ್ಬರು ಟೀಮ್​ ಇಂಡಿಯಾ ಮಾಜಿ ನಾಯಕ ವಿರಾಟ್​ ಕೊಹ್ಲಿ ಅವರು ಕ್ರಿಕೆಟರ್​ ಹೊರತಾಗಿ ಗಗನಯಾತ್ರಿ, ಯೋಧ, ಫೈಟರ್​, ಪೈಲಟ್​ ಹಾಗೂ ಪೊಲೀಸ್​ ಅವತಾರದಲ್ಲಿ ಹೇಗೆ ಕಾಣುತ್ತಿದ್ದರು ಎಂಬುವನ್ನು ರಚಿಸಿದ್ದರು. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸಂಚಲನ ಮೂಡಿಸಿತ್ತು ಮತ್ತು ಅಭಿಮಾನಿಗಳು ಫೋಟೋಗಳನ್ನು ನೋಡಿ ತುಂಬಾ ಖುಷಿಯಾಗಿದ್ದರು.
ಇದೀಗ ಮತ್ತೊಬ್ಬ ಎಐ ಕಲಾವಿದ, ಜಾಗತಿಕ ಮಾಧ್ಯಮಗಳನ್ನು ಸೆಳೆದಿರುವ ಬಾರ್ಬಿ ಚಿತ್ರದಿಂದ ಪ್ರೇರಣೆಯಾದ ಪಾತ್ರಗಳಲ್ಲಿ ಭಾರತದ ರಾಜಕೀಯ ಗಣ್ಯರು ಹೇಗೆ ಕಾಣಿಸುತ್ತಾರೆ ಎಂದು ಎಐ ಮೂಲಕ ರಚನೆ ಮಾಡಿದ್ದಾರೆ. ಅಂದಹಾಗೆ ಬಾರ್ಬಿ ಸಿನಿಮಾ ಜುಲೈ 21 ರಂದು ಬಿಡುಗಡೆಯಾಗಿದೆ. ಈ ಸಿನಿಮಾದಲ್ಲಿ ಮಾರ್ಗಟ್ ರಾಬಿ ಮತ್ತು ರಿಯಾನ್ ಗೊಸ್ಲಿಂಗ್ ಅಭಿನಯಿಸಿದ್ದಾರೆ. ಈ ಚಿತ್ರವು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ. ಇದೀಗ ಎಲ್ಲ ಕ್ಷೇತ್ರಗಳಲ್ಲೂ ಬಾರ್ಬಿ ಫೀವರ್​ ಶುರುವಾಗಿದೆ.
ಇದೀಗ ಎಐ ಕಲಾವಿದನೊಬ್ಬ ಭಾರತದ ರಾಜಕಾರಣಿಗಳಾದ ಪ್ರಧಾನಿ ಮೋದಿ, ಮಾಜಿ ಲೋಕಸಭಾ ಸದಸ್ಯ ಮತ್ತು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ, ಕೇಂದ್ರ ಗೃಹ ಸಚಿವ ಅಮಿತ್​ ಷಾ, ಮಾಜಿ ವಿಪಕ್ಷ ನಾಯಕಿ ಸೋನಿಯಾ ಗಾಂಧಿ, ಆರ್​ಜೆಡಿ ಲಾಲು ಪ್ರಸಾದ್​ ಯಾದವ್​, ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​, ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಮತ್ತು ಬಿಜೆಪಿ ನಾಯಕ ನಿತಿನ್​ ಗಡ್ಕರಿ ಅವರಿಗೆ ಬಾರ್ಬಿ ಅವತಾರವನ್ನು ರಚಿಸಿದ್ದಾರೆ.
ಇನ್​ಸ್ಟಾಗ್ರಾಂ ಪೇಜ್​ನಲ್ಲಿ ಫೋಟೋಗಳನ್ನು ಪೋಸ್ಟ್​ ಮಾಡಲಾಗಿದ್ದು, ಇವುಗಳಲ್ಲಿ ನಿಮ್ಮ ಫೇವರಿಟ್​ ಯಾವುದು? ಬಾರ್ಬಿ ಇಲ್ಲಿ ಬಾರ್ಬಿ ಅಲ್ಲಿ ಮತ್ತು ಬಾರ್ಬಿ ಎಲ್ಲಿಯೂ ಎಂದು ಅಡಿಬರಹ ನೀಡಲಾಗಿದೆ. ಎಐ ಟೆಕ್ನಾಲಜಿ ಮೂಲಕ ರಾಜಕಾರಣಿಗಳಿಗೆ ಗುಲಾಬಿ ಮತ್ತು ವರ್ಣರಂಜಿತ ಉಡುಪುಗಳು, ಮೇಕಅಪ್ ಮತ್ತು ಉತ್ತಮ ಕೇಶ ವಿನ್ಯಾಸದ ಮೂಲಕ ಬಾರ್ಬಿಯಂತಹ ಬೆರಗುಗೊಳಿಸುವ ಲುಕ್​ ನೀಡಿದ್ದಾರೆ. ಇದೀಗ ಈ ಫೋಟೋಗಳು ವೈರಲ್​ ಆಗುತ್ತಿದ್ದು, ನೆಟ್ಟಿಗರು ಬಗೆ ಬಗೆಯ ಕಾಮೆಂಟ್​ಗಳನ್ನು ಹರಿಬಿಡುತ್ತಿದ್ದಾರೆ. ಈ ಫೋಟೋಗಳನ್ನು ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್​ ಮೂಲಕ ನಮಗೆ ತಿಳಿಸಿ.








ಕೃತಕ ಬುದ್ಧಿಮತ್ತೆ (ಎಐ) ಎನ್ನುವುದು ಕಂಪ್ಯೂಟರ್ ವಿಜ್ಞಾನದ ಶಾಖೆಯಾಗಿದೆ. ಮನುಷ್ಯರಂತೆ ಯೋಚಿಸಿ, ಕೆಲಸ ಮಾಡುವ ಬುದ್ಧಿವಂತ ಯಂತ್ರಗಳ ಅಭಿವೃದ್ಧಿಗೆ ಇದು ಒತ್ತು ನೀಡುತ್ತದೆ. ಚೆಸ್ ಆಡುವ ಕಂಪ್ಯೂಟರ್​ಗಳು, ಸ್ವಯಂಚಾಲಿತ ಕಾರ್​ಗಳು ಇದಕ್ಕೆ ಉತ್ತಮ ಉದಾಹರಣೆಗಳಾಗಿವೆ. ಸಾರಿಗೆ, ಉತ್ಪಾದನೆ, ಹಣಕಾಸು, ಆರೋಗ್ಯ ರಕ್ಷಣೆ ಕ್ಷೇತ್ರಗಳಲ್ಲಿ ಸದ್ಯ ಹೆಚ್ಚಿನ ಪ್ರಮಾಣದಲ್ಲಿ ಎಐ ಬಳಸಲಾಗುತ್ತಿದೆ. ಯಾಂತ್ರೀಕರಣ, ಚಾಣಾಕ್ಷತನದ ನಿರ್ಧಾರ, ಸಂಕೀರ್ಣ ಸಮಸ್ಯೆಗಳಿಗೆ ಪರಿಹಾರ, ಪುನರಾವರ್ತಿತ ಕೆಲಸದ ಸುಲಭ ನಿರ್ವಹಣೆ ಮುಂತಾದವುಗಳು ಎಐನ ಪ್ರಯೋಜನಗಳಾಗಿವೆ. ಅಮೆರಿಕದ ಕಂಪ್ಯೂಟರ್ ವಿಜ್ಞಾನಿ ಜಾನ್ ಮೆಕ್ ಕಾರ್ತಿ ಅವರನ್ನು ‘ಕೃತಕ ಬುದ್ಧಿಮತ್ತೆಯ ಜನಕ’ ಎಂದು ಗುರುತಿಸುತ್ತಾರೆ.(ಏಜೆನ್ಸೀಸ್​)
ಕ್ರಿಕೆಟರ್​ ಹೊರತಾಗಿ ವಿವಿಧ ಕ್ಷೇತ್ರಗಳಲ್ಲಿ ಕೊಹ್ಲಿ ಹೇಗೆ ಕಾಣುತ್ತಿದ್ದರು? ಇಲ್ಲಿವೆ ಎಐ ರಚಿಸಿದ ಅದ್ಭುತ ಫೋಟೋಗಳು…

5 ರಿಂದ 95 ವರ್ಷ! ಎಐ ತಂತ್ರಜ್ಞಾನದ ಈ ವಿಡಿಯೋ ನೋಡಿದ್ರೆ ನಿಮ್ಮ ಹುಬ್ಬೇರೋದು ಖಚಿತ

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:10 + 2 =
Remember me
