ನವದೆಹಲಿ:ಕೃತಕ ಬುದ್ಧಿಮತ್ತೆ (AI- ಆರ್ಟಿಫಿಶಿಯಲ್​ ಇಂಟೆಲಿಜೆನ್ಸ್​) ಸಾಧನ​ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಖ್ಯಾತಿ ಪಡೆದುಕೊಂಡಿದ್ದು, ಹಲವಾರು ಕಲಾವಿದರು ಇದನ್ನು ಬಳಸುತ್ತಿದ್ದಾರೆ. AI ಎಷ್ಟು ಆಧುನಿಕವಾಗಿದೆ ಅಂದರೆ ಜನರು ಹೆಚ್ಚು ಶ್ರಮವಹಿಸದೇ ಎಲ್ಲ ಬಗೆಯ ಫೋಟೋಗಳನ್ನು ರಚಿಸಬಹುದು. ಕೆಲವೊಮ್ಮೆ ಭವಿಷ್ಯದಲ್ಲಿ ವಸ್ತುಗಳು ಅಥವಾ ವ್ಯಕ್ತಿಗಳು ಹೇಗೆ ಕಾಣುತ್ತವೆ ಎಂಬುವನ್ನು ಸಹ AI ಮೂಲಕ ಊಹಿಸಿಕೊಳ್ಳಬಹುದು.
ಇದೀಗ ಇದೇ AI ಸಾಧನವನ್ನು ಉಪಯೋಗಿಸಿಕೊಂಡು ಟೀಮ್​ ಇಂಡಿಯಾ ಮಾಜಿ ನಾಯಕ ವಿರಾಟ್​ ಕೊಹ್ಲಿ ಅವರು ಕ್ರಿಕೆಟರ್​ ಹೊರತಾಗಿ ವಿವಿಧ ಕ್ಷೇತ್ರಗಳಲ್ಲಿ ಹೇಗೆ ಕಾಣುತ್ತಿದ್ದರು ಎಂಬುವನ್ನು ರಚಿಸಿದ್ದಾರೆ. ಫೋಟೋಗಳನ್ನು ನೋಡಿ ಅಭಿಮಾನಿಗಳು ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ.
ಫೋಟೋಗಳನ್ನು ಡಿಜಿಟಲ್​ ಕ್ರಿಯೆಟರ್​ ಸಾಹೀದ್​ ಎಂಬುವರು ತಮ್ಮ ಇನ್​ಸ್ಟಾಗ್ರಾಂಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಮೊದಲ ಚಿತ್ರದಲ್ಲಿ ವಿರಾಟ್, ಭಾರೀ ಆಭರಣ ಹಾಗೂ ಕಿರೀಟದೊಂದಿಗೆ​ ರಾಜನ ಅವತಾರದಲ್ಲಿದ್ದಾರೆ. ಅಲ್ಲದೆ, ರತ್ನಖಚಿತ ಸಿಂಹಾಸನದಲ್ಲಿ ಕುಳಿತಿದ್ದಾರೆ.
ಇತರ ಚಿತ್ರಗಳಲ್ಲಿ ಕೊಹ್ಲಿ ಅವರು ಗಗನಯಾತ್ರಿಯಂತೆ ಕಿತ್ತಳೆ ಬಣ್ಣದ ಬಾಹ್ಯಾಕಾಶ ಉಡುಪನ್ನು ಧರಿಸಿ, ರಾಕೆಟ್‌ನಲ್ಲಿ ಕುಳಿತಿರುವಂತೆ ಕಾಣುತ್ತಾರೆ. ಅಲ್ಲದೆ, ಫುಟ್‌ಬಾಲ್ ಆಟಗಾರ, ವೈದ್ಯ ಮತ್ತು ಸಂಗೀತಗಾರನಂತಹ ವೃತ್ತಿಗಳಲ್ಲಿ ಕೊಹ್ಲಿ ಕಾಣಿಸಿಕೊಂಡಿದ್ದಾರೆ. ಇನ್ನೊಂದು ಚಿತ್ರವು ಅವರನ್ನು ಸೈನಿಕನಂತೆ ತೋರಿಸುತ್ತದೆ, ಸಮವಸ್ತ್ರವನ್ನು ಧರಿಸಿ ಕೈಯಲ್ಲಿ ಬಂದೂಕು ಹಿಡಿದಿದ್ದಾರೆ ಮತ್ತು ಹಣೆಯ ಮೇಲೆ ಗಾಯವಾಗಿದೆ. ಇತರ ಚಿತ್ರಗಳಲ್ಲಿ ಅವರು ಫೈಟರ್, ಪೈಲಟ್ ಮತ್ತು ಪೊಲೀಸ್ ಆಗಿ ಕಾಣಿಸಿಕೊಂಡಿದ್ದಾರೆ.

A post shared by SAHID (@sahixd)

ಫೋಟೋ ನೋಡಿದ ಅಭಿಮಾನಿಗಳು ಖುಷಿಯಾಗಿ ತಮ್ಮದೇ ರೀತಿಯಲ್ಲಿ ಕಾಮೆಂಟ್​ ಮಾಡುತ್ತಿದ್ದಾರೆ. ಫೋಟೋಗಳು ನಿಜಕ್ಕೂ ಅದ್ಭುತ ಎಂದು ಒಬ್ಬ ವ್ಯಕ್ತಿ ಹೇಳಿದರೆ, ಕೊಹ್ಲಿ ಕಿಂಗ್ ಲುಕ್‌ನಲ್ಲಿ ಮಾತ್ರ ಸೂಟ್ ಆಗುತ್ತಾರೆ ಎಂದು ಮತ್ತೊಬ್ಬ ನೆಟ್ಟಿಗರು ತಿಳಿಸಿದ್ದಾರೆ. ಅನೇಕ ನೆಟ್ಟಿಗರು ಕಾಮೆಂಟ್‌ ಬಾಕ್ಸ್​ನಲ್ಲಿ ಬೆಂಕಿ ಮತ್ತು ಹೃದಯದ ಎಮೋಜಿಗಳನ್ನು ಹರಿಬಿಟ್ಟಿದ್ದಾರೆ. ಆದಾಗ್ಯೂ, AI ಚಿತ್ರಗಳು ಸ್ಟಾರ್ ಕ್ರಿಕೆಟಿಗನಂತೆ ಕಾಣುತ್ತಿಲ್ಲ ಎಂದು ಹಲವಾರು ಜನರು ಹೇಳಿದ್ದಾರೆ. ಒಂದೇ ಒಂದು ಚಿತ್ರ ಕೂಡ ವಿರಾಟ್ ಕೊಹ್ಲಿಯನ್ನು ಹೋಲುವುದಿಲ್ಲ ಎಂದು ವ್ಯಕ್ತಿಯೊಬ್ಬರು ಹೇಳಿದ್ದಾರೆ.
ಎಐ ಎಂದರೇನು?ಕೃತಕ ಬುದ್ಧಿಮತ್ತೆ (ಎಐ) ಎನ್ನುವುದು ಕಂಪ್ಯೂಟರ್ ವಿಜ್ಞಾನದ ಶಾಖೆಯಾಗಿದೆ. ಮನುಷ್ಯರಂತೆ ಯೋಚಿಸಿ, ಕೆಲಸ ಮಾಡುವ ಬುದ್ಧಿವಂತ ಯಂತ್ರಗಳ ಅಭಿವೃದ್ಧಿಗೆ ಇದು ಒತ್ತು ನೀಡುತ್ತದೆ. ಚೆಸ್ ಆಡುವ ಕಂಪ್ಯೂಟರ್​ಗಳು, ಸ್ವಯಂಚಾಲಿತ ಕಾರ್​ಗಳು ಇದಕ್ಕೆ ಉತ್ತಮ ಉದಾಹರಣೆಗಳಾಗಿವೆ. ಸಾರಿಗೆ, ಉತ್ಪಾದನೆ, ಹಣಕಾಸು, ಆರೋಗ್ಯ ರಕ್ಷಣೆ ಕ್ಷೇತ್ರಗಳಲ್ಲಿ ಸದ್ಯ ಹೆಚ್ಚಿನ ಪ್ರಮಾಣದಲ್ಲಿ ಎಐ ಬಳಸಲಾಗುತ್ತಿದೆ. ಯಾಂತ್ರೀಕರಣ, ಚಾಣಾಕ್ಷತನದ ನಿರ್ಧಾರ, ಸಂಕೀರ್ಣ ಸಮಸ್ಯೆಗಳಿಗೆ ಪರಿಹಾರ, ಪುನರಾವರ್ತಿತ ಕೆಲಸದ ಸುಲಭ ನಿರ್ವಹಣೆ ಮುಂತಾದವುಗಳು ಎಐನ ಪ್ರಯೋಜನಗಳಾಗಿವೆ. ಅಮೆರಿಕದ ಕಂಪ್ಯೂಟರ್ ವಿಜ್ಞಾನಿ ಜಾನ್ ಮೆಕ್ ಕಾರ್ತಿ ಅವರನ್ನು ‘ಕೃತಕ ಬುದ್ಧಿಮತ್ತೆಯ ಜನಕ’ ಎಂದು ಗುರುತಿಸುತ್ತಾರೆ.(ಏಜೆನ್ಸೀಸ್​)
5 ರಿಂದ 95 ವರ್ಷ! ಎಐ ತಂತ್ರಜ್ಞಾನದ ಈ ವಿಡಿಯೋ ನೋಡಿದ್ರೆ ನಿಮ್ಮ ಹುಬ್ಬೇರೋದು ಖಚಿತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × one =
Remember me
