ನವದೆಹಲಿ:ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಕಲೆಯನ್ನು ಬಳಸಿಕೊಂಡು ‘ವಾವ್’ ಎಂದೆನಿಸುವಂತಹ ಸೃಜನಶೀಲ ಚಿತ್ರಗಳನ್ನು ಸೃಷ್ಟಿಸಲು ಸಾಧ್ಯವಿದೆ. ಇಂತಹ ಕಲಾಕೃತಿಗಳು ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ಹೆಚ್ಚು ಪ್ರಚಾರ ಪಡೆದುಕೊಳ್ಳುತ್ತಿವೆ. ಇದೀಗ ಕಲಾವಿದರೊಬ್ಬರು ರಚಿಸಿರುವ ವಿಭಿನ್ನ ಕಲಾಕೃತಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಟ್ರೆಂಡಿಂಗ್​ನಲ್ಲಿದೆ.
ಇದನ್ನೂ ಓದಿ:VIDEO | ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳುಹಿಸುವಂತೆ ವಿನಂತಿಸಿದ ಪೊಲೀಸ್; ಅಧಿಕಾರಿಯ ಕಾರ್ಯಕ್ಕೆ ಸಿಎಂ ಶ್ಲಾಘನೆ
ಆಶಿಶ್ ಜೋಸ್ ಎಂಬ ಕಲಾವಿದರೊಬ್ಬರು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮೂಲಕ ವಯಸ್ಸಾದ ಮಹಿಳೆಯರು ಸ್ಕೇಟಿಂಗ್ ಮಾಡುತ್ತಿರುವ ಚಿತ್ರಗಳನ್ನು ರಚಿಸಿ, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ಫೋಟೋಗಳು ಎಲ್ಲೆಡೆ ವೈರಲ್ ಆಗುತ್ತಿವೆ. AI ಅಪ್ಲಿಕೇಶನ್‌ ಸಹಾಯದಿಂದ ತನ್ನ ಕಲ್ಪನೆಯ ಚಿತ್ರಗಳನ್ನು ರಚಿಸಿದ್ದಾರೆ.


A post shared by Ashish Jose (@tarqeeb)

AI ಅಪ್ಲಿಕೇಶನ್‌ ಬಳಿಸಿಕೊಂಡು ಆಶಿಶ್ ಜೋಸ್ ರಚಿಸಿರುವ ವಯಸ್ಸಾದ ಮಹಿಳೆಯರು ಸ್ಕೇಟ್​​ ಬೋರ್ಡ್​ ಮೇಲೆ ಸಾಹಸ ಪ್ರದರ್ಶಿಸುತ್ತಿರುವ ಚಿತ್ರಗಳು ಇದೀಗ ಮೆಚ್ಚುಗೆ ಪಡೆಯುತ್ತಿವೆ. ಈ ಚಿತ್ರಗಳನ್ನು ನೋಡಿದರೆ ಒಂದು ಕ್ಷಣ ಈ ಅಜ್ಜಿಯಂದಿರು ನಿಜವಾಗಿಯೂ ಸ್ಕೇಟಿಂಗ್ ಮಾಡುತ್ತಿದ್ದಾರೆ ಎಂದುಕೊಳ್ಳಬಹದು. ಅಷ್ಟೊಂದು ನಾಜೂಕಾಗಿ ಈ ಚಿತ್ರಗಳು ರಚನೆಯಾಗಿವೆ.
ಇದನ್ನೂ ಓದಿ:ರಾಹುಲ್ ಗಾಂಧಿ ಪ್ರಧಾನಿ ಆಗುವವರೆಗೆ ಸಾಲ ನೀಡುವುದಿಲ್ಲ! ವೈರಲ್ ಆಯ್ತು ಪಾನ್ ಅಂಗಡಿ ಮುಂದಿರುವ ಬೋರ್ಡ್
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − 1 =
Remember me
