ನವದೆಹಲಿ:ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್​ ಇಂಟೆಲಿಜೆನ್ಸ್​) ತಂತ್ರಜ್ಞಾನದಿಂದ ಸೃಷ್ಟಿಸಲಾದ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದ್ದು ನೆಟ್ಟಿಗರ ಹುಬ್ಬೇರಿಸುತ್ತಿದೆ. ಇದೀಗ ಅಂಥದ್ದೇ ಮತ್ತೊಂದು ವಿಡಿಯೋವನ್ನು ಖ್ಯಾತ ಉದ್ಯಮಿ ಆನಂದ್​ ಮಹೀಂದ್ರಾ ಅವರು ತಮ್ಮ ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿದ್ದು, ನೆಟ್ಟಿಗರ ಗಮನ ಸೆಳೆದಿದೆ.
ವಿಡಿಯೋದಲ್ಲಿ ವಧುವಿನಂತೆ ಉಡುಗೆ ಧರಿಸಿರುವ ಐದು ವರ್ಷದ ಬಾಲೆಯನ್ನು ಕಾಣಬಹುದು. ಆ ಬಾಲಕಿ 5 ವರ್ಷದಿಂದ 95 ವರ್ಷದ ವೃದ್ಧೆಯವರೆಗೂ ವಿವಿಧ ಹಂತಗಳಲ್ಲಿ ಹೇಗೆ ಕಾಣತ್ತಾಳೆ ಎಂಬುದನ್ನು ಎಐ ತಂತ್ರಜ್ಞಾನದ ಮೂಲಕ ರಚಿಸಲಾಗಿದೆ. ಬಾಲ್ಯಾವಸ್ಥೆ, ಹರಿಹರೆಯದ ಹಂತ, ಯುವತಿ, ಗೃಹಿಣಿ ಹಾಗೂ ಅಂತಿಮವಾಗಿ ವೃದಾಪ್ಯವನ್ನು ವಿಡಿಯೋದಲ್ಲಿ ತೋರಿಸಲಾಗಿದೆ.
ಇದನ್ನೂ ಓದಿ:ಕಾಂಗ್ರೆಸಿಗರಿಗೆ ಸಿಎಂ ಬಹಿರಂಗ ಸವಾಲು: ದಮ್ಮು, ತಾಕತ್ತಿದ್ದರೆ ಕೇಸರಿ ಅಲೆ ತಡೆಯಿರಿ
ವಿಡಿಯೋ ಬಹಳ ನೈಜ್ಯವಾಗಿ ಮೂಡಿಬಂದಿದ್ದು ಸ್ವತಃ ಆನಂದ್​ ಮಹೀಂದ್ರಾ ವಿಡಿಯೋ ನೋಡಿ ಫಿದಾ ಆಗಿದ್ದಾರೆ. ತುಂಬಾ ಕಾಡುವ ಸುಂದರ ಮತ್ತು ಮಾನವನನ್ನು ರಚಿಸಲು ಸಾಧ್ಯವಾದರೆ ಅಂತಹ ಎಐ ಶಕ್ತಿಗೆ ನಾನು ಹೆದರುವುದಿಲ್ಲ. ಎಂದು ಆನಂದ್ ಮಹೀಂದ್ರಾ ಟ್ವೀಟ್ ಮಾಡಿದ್ದಾರೆ. ಸದ್ಯ ವಿಡಿಯೋ ಜಾಲತಾಣದಲ್ಲಿ ವೈರಲ್​ ಆಗಿದ್ದು, 3 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ.
Received this post of a sequence of portraits generated by Artificial Intelligence showing a girl ageing from 5years to 95 years. I won’t fear the power of AI so much if it can create something so hauntingly beautiful….and Human…pic.twitter.com/k7d2qupJ52
— anand mahindra (@anandmahindra)April 24, 2023

ಇದನ್ನೂ ಓದಿ:VIDEO| ಬಣ್ಣ ಹಚ್ಚುವ ನೆಪದಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ; ಆರೋಪಿ ಶಿಕ್ಷಕನ ಬಂಧನ
ಎಐ ಎಂದರೇನು?ಕೃತಕ ಬುದ್ಧಿಮತ್ತೆ (ಎಐ) ಎನ್ನುವುದು ಕಂಪ್ಯೂಟರ್ ವಿಜ್ಞಾನದ ಶಾಖೆಯಾಗಿದೆ. ಮನುಷ್ಯರಂತೆ ಯೋಚಿಸಿ, ಕೆಲಸ ಮಾಡುವ ಬುದ್ಧಿವಂತ ಯಂತ್ರಗಳ ಅಭಿವೃದ್ಧಿಗೆ ಇದು ಒತ್ತು ನೀಡುತ್ತದೆ. ಚೆಸ್ ಆಡುವ ಕಂಪ್ಯೂಟರ್​ಗಳು, ಸ್ವಯಂಚಾಲಿತ ಕಾರ್​ಗಳು ಇದಕ್ಕೆ ಉತ್ತಮ ಉದಾಹರಣೆಗಳಾಗಿವೆ. ಸಾರಿಗೆ, ಉತ್ಪಾದನೆ, ಹಣಕಾಸು, ಆರೋಗ್ಯ ರಕ್ಷಣೆ ಕ್ಷೇತ್ರಗಳಲ್ಲಿ ಸದ್ಯ ಹೆಚ್ಚಿನ ಪ್ರಮಾಣದಲ್ಲಿ ಎಐ ಬಳಸಲಾಗುತ್ತಿದೆ. ಯಾಂತ್ರೀಕರಣ, ಚಾಣಾಕ್ಷತನದ ನಿರ್ಧಾರ, ಸಂಕೀರ್ಣ ಸಮಸ್ಯೆಗಳಿಗೆ ಪರಿಹಾರ, ಪುನರಾವರ್ತಿತ ಕೆಲಸದ ಸುಲಭ ನಿರ್ವಹಣೆ ಮುಂತಾದವುಗಳು ಎಐನ ಪ್ರಯೋಜನಗಳಾಗಿವೆ. ಅಮೆರಿಕದ ಕಂಪ್ಯೂಟರ್ ವಿಜ್ಞಾನಿ ಜಾನ್ ಮೆಕ್ ಕಾರ್ತಿ ಅವರನ್ನು ‘ಕೃತಕ ಬುದ್ಧಿಮತ್ತೆಯ ಜನಕ’ ಎಂದು ಗುರುತಿಸುತ್ತಾರೆ.(ಏಜೆನ್ಸೀಸ್​)
ಪ್ಲಾಸ್ಟಿಕ್​​ ಸರ್ಜರಿ ಬಳಿಕ ಹೃದಯಾಘಾತದಿಂದ ಪ್ರಾಣ ಬಿಟ್ಟ ನಟಿ!

5 ನಿಮಿಷ ಮಾತಾಡಲು 10 ಸಾವಿರ ರೂ.: ಒಳ್ಳೇ ಹುಡ್ಗೀರು ಇತಿಹಾಸ ಸೃಷ್ಟಿಸಲಾರರು ಎಂದ ನಟಿ ಕಿರಣ್​

ಕಥೆ ಕೇಳಿ ಕೈ ಮುಗಿದಿದ್ದೆ:  ರಾಘವೇಂದ್ರ ಸ್ಟೋರ್ಸ್​ನಲ್ಲಿ ಚಿಕ್ಕಿಯ ಮೂಗುತಿ ಧರಿಸಿದ ಶ್ವೇತಾ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × three =
Remember me
