ಚೆನ್ನೈ:ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಮತದಾರರ ಮನವೊಲಿಸಲು ಏನೇನೊ ಕಸರತ್ತು ಮಾಡುತ್ತಾರೆ. ಆದರೆ ಇಲ್ಲೊಬ್ಬ ಅಭ್ಯರ್ಥಿ ಮತದಾರರ ಬಟ್ಟೆಗಳನ್ನು ತೊಳೆದು ಸುದ್ದಿಯಾಗಿದ್ದಾರೆ.
ಹೌದು ಸದ್ಯ ತಮಿಳುನಾಡು ವಿಧಾನಸಭೆ ಚುನಾವಣೆ ಭರ್ಜರಿಯಾಗಿ ನಡೆದಿದೆ. ಎಐಎಡಿಎಂಕೆ ಪಕ್ಷದಿಂದ ತಮಿಳುನಾಡಿನ ನಾಗಪಟ್ಟಿಣಂ ವಿಧಾನಸಭಾ ಕ್ಷೇತ್ರಕ್ಕೆ ಸ್ಪರ್ಧೆ ಮಾಡಿರುವ ತಂಗಾ ಕಾತಿರವನ್ ಎನ್ನುವರು ಮತದಾರರ ಸೆಳೆಯಲು ಅವರ ಬಟ್ಟೆಗಳನ್ನು ತೊಳೆದು ಕೊಟ್ಟಿದ್ದಾರೆ. ಪ್ರಚಾರಾರ್ಥ ನಾಗೋರೆಗೆ ತೆರಳಿದ್ದ ಅವರು ಮನೆಯೊಂದಕ್ಕೆ ತೆರಳಿ ಮಹಿಳೆಯಿಂದ ಬಟ್ಟೆಗಳನ್ನು ಕೇಳಿ ಪಡೆದು ಸುಮಾರು ಹತ್ತು ನಿಮಿಷ ಅವುಗಳನ್ನು ನೀಟಾಗಿ ತೊಳೆದುಕೊಟ್ಟಿದ್ದಾರೆ.
Tamil Nadu: AIADMK candidate Thanga Kathiravan from Nagapattinam washed clothes and promised to give washing machine after winning elections during campaigning yesterday.pic.twitter.com/orDGoRFUhn
— ANI (@ANI)March 23, 2021

ಇದನ್ನೂ ಓದಿ:ಮೊರಟೋರಿಯಂ ಅವಧಿಯಲ್ಲಿನ ಬಡ್ಡಿ, ಚಕ್ರಬಡ್ಡಿ ಮನ್ನಾ ವಿವಾದ: ಸುಪ್ರೀಂ‌ಕೋರ್ಟ್‌ ಏನು ಹೇಳಿದೆ ನೋಡಿ…
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಯಲ್ಲಿ ಗೆದ್ದು ಬಂದರೆ ಮಹಿಳೆಯರ ಕಷ್ಟಗಳನ್ನು ನೀಗಿಸಲು ನಾನು ಪ್ರತಿ ಮನೆಗೆ ವಾಷಿಂಗ್ ಮಷಿನ್​ ನೀಡುತ್ತೇನೆ. ಇದನ್ನು ಹೇಳುವುದಕ್ಕಾಗಿ ನಾನು ಬಟ್ಟೆಗಳನ್ನು ತೊಳೆದಿದ್ದೇನೆ. ದಿವಂಗತ ಮುಖ್ಯಮಂತ್ರಿ ಜಯಲಲಿತಾ ಅವರು ಮನೆ ಮನೆಗೆ ವಾಷಿಂಗ್ ಮಷಿನ್ ಕೊಡುವುದಾಗಿ ಹೇಳಿದ್ದರು ಎಂದು ಹೇಳಿದ್ದಾರೆ.
ಎಐಎಡಿಎಂಕೆ ಸಕ್ರಿಯ ಕಾರ್ಯಕರ್ತರಾಗಿರುವ 50 ರ ವಯಸ್ಸಿನ ಕಾತಿರವನ್ ಅವರು, ನಾಗಪಟ್ಟಿಣಂ ನಗರಸಭೆಯ ಅಧ್ಯಕ್ಷರೂ ಆಗಿದ್ದಾರೆ. ಪಕ್ಷ ಅವರ ಸೇವೆಯನ್ನು ಪರಿಗಣಿಸಿ ಇದೇ ಮೊದಲ ಬಾರಿಗೆ ವಿಧಾನಸಭೆ ಚುನಾವಣೆ ಟಿಕೆಟ್ ನೀಡಿದೆ.
ಕುಡಿದು ಸತ್ತರೆ ವಿಮೆ ಹಣ ಸಿಗಲ್ಲ: ಮಹತ್ವದ ತೀರ್ಪಿನಲ್ಲಿ ಸುಪ್ರೀಂಕೋರ್ಟ್‌ ಏನು ಹೇಳಿದೆ ನೋಡಿ…

ತೆಲಂಗಾಣ ಸರ್ಕಾರಿ ನೌಕರರಿಗೆ ಭರ್ಜರಿ ಉಡುಗೊರೆ ನೀಡಿದ ಮಖ್ಯಮಂತ್ರಿ ಕೆಸಿಆರ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 4 =
Remember me
