ಸೇಲಂ:ಮಾಜಿ ಶಾಸಕನೋರ್ವ ತನ್ನ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು, ಕರ್ತವ್ಯದಲ್ಲಿದ್ದ ಪೊಲೀಸ್​ ಮೇಲೆ ಹಲ್ಲೆ ನಡೆಸಿದ್ದಾರೆ.
ತಮಿಳುನಾಡಿನ ಸೇಲಂನಲ್ಲಿ ಟೋಲ್​ ಗೇಟ್​ ಬಳಿ ಕರ್ತವ್ಯದಲ್ಲಿದ್ದ ಪೋಲೀಸ್ ಅಧಿಕಾರಿ ವಿರುದ್ಧ ಕೂಗಾಡಿದ ಎಐಎಡಿಎಂಕೆ ಮಾಜಿ ಶಾಸಕ, ಡಿಎಂಕೆ ಮಾಜಿ ಸಂಸದನೂ ಆಗಿರುವ ಅರ್ಜುನನ್​, ಅವರ ಮೇಲೆ ಹಲ್ಲೆಯನ್ನೂ ಮಾಡಿದ್ದು ಕ್ಯಾಮರಾದಲ್ಲಿ ಸೆರೆಯಾಗಿದೆ.ತಮಿಳುನಾಡಿನಲ್ಲಿ ಲಾಕ್​ಡೌನ್​ ಇರುವುದರಿಂದ ಹೊರಗೆ ಓಡಾಡುವವರಿಗೆ ಇ ಪಾಸ್​ ಕಡ್ಡಾಯವಾಗಿದೆ. ಸೇಲಂ ಬಳಿ ಶಾಸಕ ಅರ್ಜುನನ್​ ಕಾರನ್ನು ತಡೆದ ಪೊಲೀಸರು ಇ ಪಾಸ್​ ತೋರಿಸುವಂತೆ ಕೇಳಿದ್ದಾರೆ. ಆದರೆ ಮಾಜಿ ಸಂಸದ ಸಂಯಮ ಕಳೆದುಕೊಂಡು ಪೊಲೀಸರ ವಿರುದ್ಧ ಕೂಗಾಡಲು ಆರಂಭಿಸಿದ್ದಾರೆ. ಬಳಿಕ ಕಾರಿನಿಂದ ಇಳಿದು ಬಂದು ಅಲ್ಲಿದ್ದ ಪೊಲೀಸ್​ ಅಧಿಕಾರಿಯನ್ನು ತಳ್ಳಿದ್ದಲ್ಲದೆ, ಕ್ರೂರವಾಗಿ ಒದ್ದಿದ್ದಾರೆ.ಇದನ್ನೂ ಓದಿ:ತಿರುಪತಿ ಭಕ್ತರಿಗೆ ಗುಡ್‌ ನ್ಯೂಸ್‌: ಆನ್‌ಲೈನ್‌ ಟಿಕೆಟ್‌ ಸಂಖ್ಯೆ ಹೆಚ್ಚಿಸಿದ ಟಿಟಿಡಿ
ಪೊಲೀಸರು ಮತ್ತು ಅರ್ಜುನನ್​ ನಡುವೆ ಕೆಲ ಹೊತ್ತು ಗಲಾಟೆ ನಡೆದಿದೆ. ಲಾಕ್​ಡೌನ್​ ಮಾರ್ಗಸೂಚಿಯಲ್ಲಿ ಹೇಳಲ್ಪಟ್ಟಂತಹ ಇ ಪಾಸ್ ಸೇರಿ ಯಾವುದೇ ದಾಖಲೆಯನ್ನೂ ಅರ್ಜುನನ್​ ಹೊಂದಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.ಅರ್ಜುನನ್​ ಐಪಿಸಿ ಮತ್ತು ಸಿಆರ್​ಪಿಸಿಯ ಹಲವು ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಆದರೆ ಇದುವರೆಗೂ ಅವರ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ ಎನ್ನಲಾಗಿದೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + 11 =
Remember me
