ಚೆನ್ನೈ:ಚಿತ್ರನಟಿ, ರಾಜಕಾರಣಿ ಖುಷ್ಬೂ ಸುಂದರ್ ಸೋಮವಾರ ನವದೆಹಲಿಯಲ್ಲಿ ಬಿಜೆಪಿ ಸೇಪರ್ಡೆಯಾದ ಬೆನ್ನಿಗೆ ತಮಿಳುನಾಡಿನ ಆಡಳಿತಾರೂಢ ಎಐಎಡಿಎಂಕೆ ನಾಯಕರಲ್ಲಿ ಸಂಭ್ರಮ ಮೂಡಿರುವುದು ಕಂಡು ಅನೇಕರಿಗೆ ಅಚ್ಚರಿ. ಯಾಕೆ ಇಂಥಾ ಸಂಭ್ರಮ? ಎಂಬ ಕುತೂಹಲ!
ಮೀನುಗಾರಿಕೆ ಸಚಿವರೂ ಆಗಿರುವ ಪಕ್ಷದ ಹಿರಿಯ ನಾಯಕ ಡಿ.ಜಯಕುಮಾರ್​ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಇದೊಂದು ಶುಭ ಸುದ್ದಿ. ಖುಷ್ಬೂ ನಮ್ಮ ಮಿತ್ರ ಪಕ್ಷ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಇದೊಂದು ಉತ್ತಮ ನಡೆ ಎಂದು ಖುಷಿ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ನನ್ನ ಗಮನಕ್ಕೆ ತರದೇ ಖಾತೆ ಬದಲಾಯಿಸಿದ್ದು ಸರಿಯೇ? ಸಿಎಂಗೆ ಶ್ರೀರಾಮುಲು ಪ್ರಶ್ನೆ
ಕಾಂಗ್ರೆಸ್ ಪಕ್ಷದೊಂದಿಗಿನ ಆರು ವರ್ಷದ ಯಾತ್ರೆಯನ್ನು ಖುಷ್ಬೂ ಕೊನೆಗೊಳಿಸಿ ಇಂದು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಅಧ್ಯಕ್ಷ ಎಲ್​. ಮುರುಗನ್​ ಕೂಡ ಹಾಜರಿದ್ದರು. ರಾಜ್ಯದಲ್ಲಿ ಈ ಸಲದ ವಿಧಾನಸಭಾ ಚುನಾವಣೆಗೆ ಎಐಎಡಿಎಂಕೆ ನಾಯಕರಾಗಿ ಕೆ.ಪಳನಿಸಾಮಿ ಅವರನ್ನು ನೇಮಕ ಮಾಡಿರುವುದನ್ನು ಮಿತ್ರಪಕ್ಷವಾಗಿ ಬಿಜೆಪಿ ಕೂಡ ಈ ಹಿಂದೆಯೇ ಸ್ವಾಗತಿಸಿತ್ತು. (ಏಜೆನ್ಸೀಸ್)
ಪತ್ರಕರ್ತ ಸಿದ್ಧಿಕ್ ಬಂಧನ ಅಕ್ರಮವೆಂದ ಕೆಯುಡಬ್ಲ್ಯುಜೆ; ಪಿಎಫ್​ಐ ನಂಟಿನ ಸಿದ್ಧಿಕ್ ಇರೋದು ಎಂದ ಪೊಲೀಸರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + 4 =
Remember me
