ನವದೆಹಲಿ:ಕುಡಿತದ ದಾಸರಾದವರಿಗೆ ಮದ್ಯ ಬೇಕೇ ಬೇಕು. ಲಾಕ್​ಡೌನ್​ ನಂತರದಲ್ಲಿ ಹಲವು ದಿನಗಳವರೆಗೆ ಮದ್ಯದಂಗಡಿಗಳ ಎದುರು ಜನರು ಮೈಲುಗಟ್ಟಲೇ ನಿಂತು ಮದ್ಯ ಖರೀದಿಸಿದ್ದು ಭಾರಿ ಸುದ್ದಿಯಾಗಿತ್ತು.
ಆದರೆ, ಮದ್ಯವೇ ಸಿಗದಿದ್ದರೆ ಏನು ಮಾಡ್ತಾರೆ..? ಮತ್ತು ಬರುವ ಏನನ್ನಾದರೂ ಅವರ ಸೇವಿಸಲು ಸಜ್ಜಾಗಿರುತ್ತಾರೆ. ಕೆಲವರಲ್ಲಿ ವಿಚಿತ್ರ ಕಾಯಿಲೆಯೊಂದು ಮನೆ ಮಾಡಿರುತ್ತದೆ.
ದೆಹಲಿ ಏಮ್ಸ್​ ವೈದ್ಯರು ಇತ್ತೀಚೆಗೆ ವ್ಯಕ್ತಿಯೊಬ್ಬನ ಶಸ್ತ್ರಚಿಕಿತ್ಸೆ ನಡೆಸಿ ಆತನ ಯಕೃತ್ತಿನಲ್ಲಿದ್ದನ್ನು ತೆರೆದಾಗ ಅವರಿಗೆ ಅಚ್ಚರಿ ಕಾದಿತ್ತು. ಏಕೆಂದರೆ ಅಲ್ಲಿದ್ದದ್ದು 20 ಸೆಂ. ಮೀಟರ್​ ಉದ್ದದ ಚಾಕು…!
ಇದನ್ನೂ ಓದಿ;ಪ್ರಸಾದಕ್ಕಾಗಿ ಇಟ್ಟಿದ್ದ ಹಣ್ಣನ್ನು ತಿಂದ ಮಕ್ಕಳಿಗೆ ಇದೆಂಥಾ ಗತಿ…! ಮೆಚ್ತಾನಾ ಭಗವಂತ..?
28 ವರ್ಷದ ವ್ಯಕ್ತಿಗೆ ಕುಡಿತದ ಚಟವಿತ್ತು. ಜತೆಗೆ ಗಾಂಜಾ ಕೂಡ ಸೇವಿಸುತ್ತಿದ್ದ. ಲಾಕ್​ಡೌನ್​ ಸಮಯದಲ್ಲಿ ಕುಡಿತಕ್ಕೆ ಏನೂ ಸಿಗದಿದ್ದಾಗ ಒಂದು ಬಟ್ಟಲಲ್ಲಿ ನೀರು ತೆಗೆದುಕೊಂಡು ಅದರ ಜತೆಗೆ ಚಾಕು ನುಂಗಿದ್ದಾನೆ. ಇದಾಗಿ ಒಂದೂವರೆ ತಿಂಗಳವರೆಗೆ ಆತ ಯಾರಿಗೂ ಏನನ್ನೂ ಹೇಳಿಲ್ಲ. ಹೊಟ್ಟೆ ನೋವು ಆರಂಭವಾದಾಗ ಸಫ್ದರ್​ಜಂಗ್​ ಆಸ್ಪತ್ರೆಗೆ ಹೋಗಿದ್ದಾನೆ. ಎಕ್ಸ್​ರೇ ಮಾಡಿಸಿದ ವೈದ್ಯರಿಗೆ ಹೊಟ್ಟೆಯಲ್ಲಿ ಚಾಕು ಇರುವುದು ಗೊತ್ತಾಗಿದೆ. ಕೂಡಲೇ ಆತನನ್ನು ಏಮ್ಸ್​ಗೆ ಕೊಂಡೊಯ್ಯುವಂತೆ ಹೇಳಿದ್ದಾರೆ.
ಅಮಲಿನ ದಾಸರಾದವರು ಸೈಕೋಸಿಸ್​ ಕಾಯಿಲೆಗೆ ಒಳಗಾಗುತ್ತಾರೆ. ಇದಕ್ಕೆ ಚಿಕಿತ್ಸೆ ಪಡೆಯದೇ ಉಲ್ಬಣಿಸಿದಲ್ಲಿ ರೋಗಿಗಳು ಸೇಫ್ಟಿ ಪಿನ್​ಗಳನ್ನು ನುಂಗುವ ಗೀಳಿಗೆ ಒಳಗಾಗುತ್ತಾರೆ. ಚಮಚಗಳು ಹಾಗೂ ಇತರ ಲೋಹದ ವಸ್ತುಗಳನ್ನು ಗಂಟಲಲ್ಲಿ ಇಳಿಸಿಕೊಳ್ತಾರೆ ಎನ್ನುತ್ತಾರೆ ಏಮ್ಸ್​ ವೈದ್ಯ ಡಾ. ನಿಹಾರ್​ ರಂಜನ್​.
ಇದನ್ನೂ ಓದಿ;ಅಮೆರಿಕ ಸರ್ಕಾರಕ್ಕೇ 41 ಕೋಟಿ ರೂ. ಮುಂಡಾಯಿಸಿದ ಮುಕುಂದ್​ ಮೋಹನ್​; ಕರೊನಾ ಸಂಕಷ್ಟದಲ್ಲಿ ಖತರ್ನಾಕ್​ ಐಡಿಯಾ…!
ಚಾಕು ಇಷ್ಟು ದಿನ ಅಲ್ಲಿ ಇದ್ದಿದ್ದಾದರೂ ಹೇಗೆ ಎಂಬುದು ವೈದ್ಯರಿಗೂ ಆಶ್ಚರ್ಯ ಮೂಡಿಸಿದೆ. ಅದನ್ನು ಹೊರ ತೆಗೆಯುವುದು ಕೂಡ ಅವರಿಗೆ ಭಾರಿ ಸವಾಲಾಗಿ ಪರಿಣಮಿಸಿತ್ತು. ಸದ್ಯ ರೋಗಿ ಅಪಾಯದಿಂದ ಪಾರಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾನೆ.
ಮಕ್ಕಳು ಬೇಡ, ಪೊಲೀಸರೇ ಅಂತ್ಯಕ್ರಿಯೆ ನೆರವೇರಿಸಲಿ; ಡೆತ್​ನೋಟ್​ ಬರೆದಿಟ್ಟು ಪಯಣ ಮುಗಿಸಿದ ದಂಪತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − seventeen =
Remember me
