ನವದೆಹಲಿ :ಎರಡು ವರ್ಷದಿಂದ 18 ವರ್ಷದವರೆಗಿನ ವಯೋಮಾನದವರಿಗೆ ಕೋವಾಕ್ಸಿನ್ ಕರೊನಾ ಲಸಿಕೆ ನೀಡಬಹುದೇ ಎಂದು ಪರೀಕ್ಷಿಸಲು ಕ್ಲಿನಿಕಲ್ ಟ್ರಯಲ್ಸ್ ನಡೆಸಲು ದೆಹಲಿಯ ಏಮ್ಸ್​ ಆಸ್ಪತ್ರೆ ಸಜ್ಜಾಗಿದೆ. ಇದಕ್ಕಾಗಿ ಟ್ರಯಲ್​ನಲ್ಲಿ ಭಾಗವಹಿಸಲಿರುವ ಮಕ್ಕಳ ಸ್ಕ್ರೀನಿಂಗ್​ಅನ್ನು ಇಂದು ಆರಂಭಿಸಲಾಯಿತು.
ಅಭ್ಯರ್ಥಿಗಳಿಗೆ ಕರೊನಾ ಸೋಂಕು ಪತ್ತೆ ಹಚ್ಚುವ ಆರ್​ಟಿಪಿಸಿಆರ್​ ಟೆಸ್ಟ್​ ಮತ್ತು ಸಾಮಾನ್ಯ ಆರೋಗ್ಯ ತಪಾಸಣೆಗಾಗಿ ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು, ಸ್ಕ್ರೀನಿಂಗ್ ರಿಪೋರ್ಟ್​ ಬಂದ ಬಳಿಕ ಕೋವಾಕ್ಸಿನ್ ಲಸಿಕೆ ನೀಡಲಾಗುವುದು. ಮೊದಲ ಡೋಸ್​ ನೀಡಿದ ನಂತರ 28 ದಿನಗಳ ಅಂತರ ನೀಡಿ ಎರಡನೇ ಡೋಸ್​ ನೀಡಲಾಗುವುದು.
ಭಾರತ್​ ಬಯೋಟೆಕ್​ನ ಕೋವಾಕ್ಸಿನ್ ಟ್ರಯಲ್ಸ್​ಅನ್ನು 525 ಆರೋಗ್ಯವಂತ ವಾಲಂಟಿಯರ್​ಗಳ ಮೇಲೆ ನಡೆಸಬೇಕಿದೆ. ಈಗಾಗಲೇ ಪಟ್ನಾ ಏಮ್ಸ್​ನಲ್ಲೂ ಈ ಟ್ರಯಲ್ಸ್​ ಆರಂಭವಾಗಿದೆ.(ಏಜೆನ್ಸೀಸ್)
VIDEO| ಮನೆ ಬಾಗಿಲಿಗೆ ಹೋಗಿ ಕರೆದರೂ ಕರೊನಾ ವ್ಯಾಕ್ಸಿನ್​ ಪಡೆಯಲು ಸೋಲಿಗರು ಹಿಂದೇಟು

ಒಂದು ಹಣ್ಣಿಗೆ 1,000 ರೂ. ಬೆಲೆ ಬಾಳುವ ನೂರ್​ಜಹಾನ್ ಮಾವಿನಹಣ್ಣು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + 8 =
Remember me
