ನವದೆಹಲಿ:ಕೋವಿಡ್19 ವೈರಸ್ ಪಾಸಿಟಿವ್ ಬಂದು, ಮೆದು ಲಕ್ಷಣ ಹಾಗೂ ಲಕ್ಷಣರಹಿತ ಇರುವ ರೋಗಿಗಳಲ್ಲಿ ಕರೊನಾ ವೈರಸ್ 7 ರಿಂದ 8 ದಿನಗಳಲ್ಲಿ ಸಾಯುತ್ತದೆ ಎಂದು ದೆಹಲಿ ಏಮ್ಸ್​ ನಿರ್ದೇಶಕ ರಂದೀಪ್ ಗುಲೇರಿಯಾ ಅವರು ಶುಕ್ರವಾರ ಹೇಳಿದ್ದಾರೆ.
ಈ ವೇಳೆಯಲ್ಲಿ ವೈರಸ್ ಬೇರೆಯವರಿಗೆ ಹರಡುವುದು ತುಂಬಾ ವಿರಳ. ಆದರೆ, ಮೃತ ಕರೊನಾ ಕಣಗಳು ಆರ್​ಟಿ ಪಿಸಿಆರ್​ ಟೆಸ್ಟ್​​ನಲ್ಲಿ ಪಾಸಿಟಿವ್ ಬರಬಹುದು ಎಂದು ಗುಲೇರಿಯಾ ಹೇಳಿದ್ದಾರೆ. ಕೋವಿಡ್ ಕಾಣಿಸಿಕೊಂಡು ಮೆದು ಹಾಗೂ ಲಕ್ಷಣರಹಿತ ರೋಗಿಗಳು ಹೋಮ್​ ಐಸೋಲೇಷನ್​ ನಂತರ ಮತ್ತೆ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.
ಆದರೆ, ಕೇಂದ್ರ ಸರ್ಕಾರ ಮತ್ತೆ ಶುಕ್ರವಾರ ಹೋಮ್​ ಐಸೋಲೇಷನ್ ಬಗ್ಗೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಕೋವಿಡ್ ಕಾಣಿಸಿಕೊಂಡ ನಂತರ ಈ ಮೊದಲು ಹತ್ತು ದಿನ ಐಸೋಲೇಷನ್ ಇರಬೇಕು ಎಂದು ಮೊದಲು ಹೇಳಿತ್ತು. ಇದೀಗ ಮತ್ತೆ ರೋಗಿ ಹತ್ತು ದಿನ ಐಸೋಲೇಷನ್​ನಲ್ಲಿ ಇರಬೇಕು ಎಂದು ಹೇಳಿದೆ.
ಭಾರತದಲ್ಲಿ ಶುಕ್ರವಾರ 3.87 ಲಕ್ಷ ಕರೊನಾ ಪ್ರಕರಣಗಳು ವರದಿಯಾಗಿದ್ದು, 3498 ಜನ ಮೃತಪಟ್ಟಿದ್ದಾರೆ.
ಇವತ್ತೊಂದೇ ದಿನ 217 ಮಂದಿ ಕೋವಿಡ್‌ಗೆ ಬಲಿ, ಇಂದು 48 ಸಾವಿರ ಕರೊನಾ ಕೇಸ್‌; ನಿನ್ನೆಗಿಂತ 13 ಸಾವಿರ ಹೆಚ್ಚಳ!

ಆ್ಯಂಬುಲೆನ್ಸ್​ ಚಾಲಕನಾದ ‘ಯುವರತ್ನ’ ಸಿನಿಮಾ ನಟ ಅರ್ಜುನ್​ ಗೌಡ

ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
Sign in to your account
Please enter an answer in digits:9 + eleven =
Remember me
