ನವದೆಹಲಿ:ಕೋಚಿಂಗ್​ ಹಬ್ ಎಂದೇ ಹೆಸರಾಗಿರುವ ರಾಜಸ್ಥಾನದ ಕೋಟಾದಲ್ಲಿ ಕೋಚಿಂಗ್​ಗೆ ಎಂದು ಬರುತ್ತಿರುವ ವಿದ್ಯಾರ್ಥಿಗಳು ಹಾಸ್ಟೆಲ್​ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣದಿಂದ ಅಲ್ಲಿ ಹಾಸ್ಟೆಲ್​ ಎಂದರೇನೇ ಹೆದರುವಂಥ ಸನ್ನಿವೇಶ ಸೃಷ್ಟಿಯಾಗಿದೆ.
ಈ ಮಧ್ಯೆ ಬಿಹಾರದ ಪಾಟ್ನಾದ ಏಮ್ಸ್​ನ ವೈದ್ಯ ಕೂಡ ಹಾಸ್ಟೆಲ್​ನಲ್ಲಿ ಸಾವಿಗೀಡಾಗಿದ್ದಾನೆ. ಹರಿಯಾಣದ ಗುರುಗ್ರಾಮ ಮೂಲದ ನೀಲೇಶ್​ ಕುಮಾರ್ ಎಂಬ ಈತ ಬಿಹಾರದ ಪಾಟ್ನಾ ಎಐಐಎಂಎಸ್​ನಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಯಾಗಿದ್ದ. ಶುಕ್ರವಾರ ಈತ ತನ್ನ ಹಾಸ್ಟೆಲ್​ ರೂಮ್​ನಲ್ಲಿ ನಿಗೂಢವಾಗಿ ಸಾವಿಗೀಡಾಗಿದ್ದ.
ಇದನ್ನೂ ಓದಿ:ಚಂದ್ರಯಾನ-3ರ ಯಶಸ್ಸಿನ ಹಿಂದಿತ್ತು ಮಸಾಲೆ ದೋಸೆ ಮತ್ತು ಕಾಫಿಯ ಮಹತ್ವದ ಪಾತ್ರ!
ಅನಸ್ತೇಷಿಯಾದಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದ ಈತ, 2016-21ರಲ್ಲಿ ಇದೇ ಶಿಕ್ಷಣ ಸಂಸ್ಥೆಯಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡಿದ್ದ. ಈತ ಪಾಟ್ನಾ ಏಮ್ಸ್​ನಲ್ಲಿ ವೈದ್ಯನಾಗಿಯೂ ಅಭ್ಯಾಸ ಮಾಡುತ್ತಿದ್ದ. ಸಾವಿಗೆ ಕಾರಣ ಏನು ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ.
ಕೋಚಿಂಗ್​ಗೆ ತೆರಳುವ ಮಕ್ಕಳೊಂದಿಗೆ ಮನೆ ಬಿಡುತ್ತಿರುವ ತಂದೆ-ತಾಯಿ, ಅಜ್ಜ-ಅಜ್ಜಿ; ಕಾರಣ ಭಯಾನಕ!

ಬಸ್​ನಲ್ಲಿನ ಚಿಲ್ಲರೆ ಸಮಸ್ಯೆಗೆ ಕಂಡಕ್ಟರ್ ಕೊರಳಲ್ಲೇ ಪರಿಹಾರ!; ಅಂತೂ ಜಾರಿಗೆ ಬಂತು ಹಳೇ ಬೇಡಿಕೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 2 =
Remember me
