ಉತ್ತರ ಪ್ರದೇಶ:ಆಧುನಿಕವಾಗಿ ಎಷ್ಟೇ ಮುಂದುವರಿದಿದ್ದರೂ, ಗ್ರಾಮೀಣ ಭಾಗಗಳಲ್ಲಿ ಇಂದಿಗೂ ಮೂಲಕ ಸೌಕರ್ಯದ ಕೊರೆತೆಯಿದೆ. ಕೆಲವು ಕಡೆ ಸಾರ್ವಜನಿಕ ಸೌಲಭ್ಯಗಳು ಸಮರ್ಪಕವಾಗಿದ್ದರೂ, ಜನರ ಬೇಜವಾಬ್ದಾರಿಯಿಂದಾಗಿ ಬಳಕೆಗೆ ಯೋಗ್ಯವಾಗಿರುವುದಿಲ್ಲ. ಇನ್ನು ತುರ್ತು ಸಂದರ್ಭಗಳಲ್ಲಿ ಅಗತ್ಯವಾಗಿ ಬೇಕಾಗಿರುವುದು ಆ್ಯಂಬುಲೆನ್ಸ್​ ಸೌಲಭ್ಯಗಳು. ಇಂದಿಗೂ ಕೂಡ ಗ್ರಾಮೀಣ ಭಾಗದ ಜನರ ತುರ್ತು ಅಗತ್ಯಕ್ಕೆ ಆ್ಯಂಬುಲೆನ್ಸ್​​​ಗಳ ಕೊರತೆಯಿದೆ. ಹೀಗಾಗಿ ಅಗತ್ಯದ ಸಂದರ್ಭಗಳಲ್ಲಿ ಅನಾರೋಗ್ಯ ಪೀಡಿತರನ್ನು ಹೊತ್ತುಕೊಂಡು ಆಸ್ಪತ್ರೆಗೆ ಸಾಗಿಸಿದಂತಹ ವಿಚಾರಗಳು ಆಗಾಗ ಸುದ್ದಿಯಾಗುತ್ತಲೇ ಇರುತ್ತವೆ. ಇದೀಗ ಇಂತದ್ದೇ ಪ್ರಕರಣವೊಂದು ನಡೆದಿದೆ.
ಉತ್ತರ ಪ್ರದೇಶದ ಖುಶಿನಗರ ಎಂಬ ಜಿಲ್ಲೆಯಲ್ಲಿ ಸಮರ್ಪಕವಾದ ಆ್ಯಂಬುಲೆನ್ಸ್ ಸೌಲಭ್ಯ ಇಲ್ಲದಾಗಿದೆ. ಇದರಿಂದಾಗಿ ವ್ಯಕ್ತಿಯೊಬ್ಬ ಮುದಿ ವಯಸ್ಸಿನ ಅನಾರೋಗ್ಯ ಪೀಡಿತೆಯನ್ನು ತಳ್ಳುಗಾಡಿಯಲ್ಲಿ ಮಲಗಿಸಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾನೆ. ಕಟ್ಟಡ ಕಾರ್ಮಿಕರು ಬಳಸುವಂತಹ ತಳ್ಳುಗಾಡಿ ಇದಾಗಿದೆ. ನಂತರ ಆಸ್ಪತ್ರೆಯ ಹೊರಾಂಗಣದಲ್ಲಿ ಸಿಬ್ಬಂದಿಗಳೊಂದಿಗೆ ಮಾತನಾಡುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ. ವಿಡಿಯೋದಲ್ಲಿ ಮಹಿಳೆಯೊಬ್ಬಳು ತಳ್ಳುಗಾಡಿಯಲ್ಲಿ ಮಲಗಿಕೊಂಡು ನರಳಾಡುತ್ತಿರುವುದನ್ನು ಗಮನಿಸಿಬಹುದು.
ठेले पर पहुंची स्वास्थ्य व्यवस्था! कुशीनगर में एम्बुलेंस न मिलने के कारण मरीज को ठेले पर अस्पताल ले जाना पड़ा।pic.twitter.com/778cIqaein— Priya singh (@priyarajputlive)December 15, 2022
ठेले पर पहुंची स्वास्थ्य व्यवस्था! कुशीनगर में एम्बुलेंस न मिलने के कारण मरीज को ठेले पर अस्पताल ले जाना पड़ा।pic.twitter.com/778cIqaein
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ಸರ್ಕಾರದ ವ್ಯವಸ್ಥೆಯ ಬಗ್ಗೆ ಕಿಡಿಕಾರಿದ್ದಾರೆ. ಉತ್ತರ ಪ್ರದೇಶದಂತಹ ಅತೀ ದೊಡ್ಡ ರಾಜ್ಯದಲ್ಲಿ ಜನರ ಉಪಯೋಗಕ್ಕೆ ಸಮರ್ಪಕವಾದಂತಹ ಸೌಲಭ್ಯಗಳು ಸಿಗಬೇಕು. ಆಗ ಮಾತ್ರ ಬದಲಾಗುತ್ತಿರುವ ಹಾಗೂ ಅಭಿವೃದ್ಧಿ ಹೊಂದಿದ ರಾಜ್ಯ ಎನ್ನಬಹುದು. ಅದರಲ್ಲೂ ತುರ್ತು ಪರಿಸ್ಥಿತಿಯಲ್ಲಿ ಆ್ಯಂಬುಲೆನ್ಸ್​ ಸೇವೆ ಸರಿಯಾಗಿ ಸಿಗುತ್ತಿಲ್ಲ ಎಂದಾದರೆ ಆರೋಗ್ಯ ಇಲಾಖೆ ಏನು ಮಾಡುತ್ತಿದೆ ಎಂದು ಪ್ರಶ್ನಿಸುತ್ತಿದ್ದಾರೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × three =
Remember me
