ಲಖನೌ:ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಕಚೇರಿ ಎದುರು ಆತ್ಮಾಹುತಿ ಮಾಡಿಕೊಳ್ಳಲು ಪ್ರಯತ್ನಿಸಿದ ಪ್ರಕರಣಕ್ಕೆ ಹೊಸದೊಂದು ತಿರುವು ಸಿಕ್ಕಿದೆ. ಅವರ ಆ ಕೃತ್ಯಕ್ಕೆ ಪ್ರಚೋದನೆ ನೀಡಿದ್ದು ಎಐಎಂಐಎಂ ಮತ್ತು ಕಾಂಗ್ರೆಸ್ ನಾಯಕರು ಎಂಬ ಅಂಶ ಬಹಿರಂಗವಾಗಿದೆ!
ಲಖನೌ ಪೊಲೀಸ್ ಆಯುಕ್ತ ಸುಜೀತ್ ಪಾಂಡೆ ಅವರು ಈ ಕುರಿತು ಪ್ರತಿಕ್ರಿಯಿಸಿದ್ದು, ತಾಯಿ-ಮಗಳ ಆತ್ಮಾಹುತಿಗೆ ಕೆಲವರು ಪ್ರಚೋದನೆ ನೀಡಿದ್ದರು. ಈ ರೀತಿ ಆತ್ಮಾಹುತಿಗೆ ಪ್ರಯತ್ನಿಸಿದ ತಾಯಿಯನ್ನು ಸಫಿಯಾ(50) ಮತ್ತು ಮಗಳನ್ನು ಗುಡಿಯಾ(28) ಎಂದು ಗುರುತಿಸಲಾಗಿದೆ. ಲೋಕಭವನದ ಎದುರು ಆತ್ಮಾಹುತಿ ಮಾಡಿಕೊಳ್ಳಿ ಎಂದು ಅವರನ್ನು ಪ್ರಚೋದಿಸಿದ್ದು ಆಲ್ ಇಂಡಿಯಾ ಮಜ್ಲಿಸ್​-ಏ-ಇತ್ತೇಹಾದ್​-ಉಲ್​ ಮುಸ್ಲಿಮೀನ್​(ಎಐಎಂಐಎಂ) ಪಕ್ಷದ ಅಮೇಠಿ ಜಿಲ್ಲಾಧ್ಯಕ್ಷ ಕಾದಿರ್ ಖಾನ್ ಮತ್ತು ಕಾಂಗ್ರೆಸ್ ನಾಯಕ ಅನೂಪ್ ಪಟೇಲ್​. ಅವರು ಈ ಪ್ರಕರಣದಲ್ಲಿ ನೇರ ಭಾಗಿಯಾಗಿರುವ ಕಾರಣ ಅವರೂ ಸೇರಿ ನಾಲ್ವರ ವಿರುದ್ಧ ಎಫ್​ಐಆರ್ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ನಾವಿಕೋತ್ಸವ 2020 ಕಥಾಸ್ಪರ್ಧೆ- ಇದು ಕರ್ನಾಟಕದವರಿಗಾಗಿ!
ಈ ಪ್ರಕರಣ ಒಂದು ಪಿತೂರಿಯಾಗಿದ್ದು, ಈ ಬಗ್ಗೆ ವಿಸ್ತೃತ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು. ಆ ಮಹಿಳೆಯರನ್ನು ಪ್ರಚೋದಿಸಿದ ಗುಂಪಿನಲ್ಲಿ ಇನ್ನೂ ಕೆಲವರು ಭಾಗಿಯಾಗಿದ್ದಾರೆ. ಅವರು ಯಾರೆಂದು ಪತ್ತೆ ಹಚ್ಚಲಾಗುತ್ತದೆ. ಸದ್ಯ ಅವರಿಬ್ಬರೂ ಆಸ್ಪತ್ರೆಯಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ತಾಯಿಗೆ ಶೇಕಡ 80ರಷ್ಟು ಸುಟ್ಟಗಾಯಗಳಾಗಿದ್ದು ಸ್ಥಿತಿ ಗಂಭೀರವಾಗಿದೆ ಎಂದು ಪಾಂಡೆ ಹೇಳಿದ್ದಾರೆ. (ಏಜೆನ್ಸೀಸ್)
ಸಿಎಂ ಯೋಗಿ ಕಚೇರಿ ಎದುರೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆತ್ನಿಸಿದ ಅಮೇಠಿಯ ತಾಯಿ-ಮಗಳು!

It has come to light that it was done as per a criminal conspiracy in which some people played key role in instigating the women. We have registered FIR against 4 people including an MIM leader Kadir Khan & a Congress leader Anup Patel: Sujeet Pandey, Lucknow Police Commissionerhttps://t.co/KR90axabLCpic.twitter.com/0WrdoXL8Q6
— ANI UP/Uttarakhand (@ANINewsUP)July 18, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × four =
Remember me
