ಹೈದರಾಬಾದ್​​:ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) 12ನೇ ತರಗತಿಯ ರಾಜ್ಯಶಾಸ್ತ್ರ ಪುಸ್ತಕದಿಂದ ಬಾಬ್ರಿ ಮಸೀದಿ ಪದವನ್ನು ತೆಗೆದುಹಾಕಿ ಬದಲಿಗೆ ಮೂರು-ಗುಮ್ಮಟ ರಚನೆ ಎಂಬ ಪದವನ್ನು ಬಳಸಲಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನು ಓದಿ:ಒಂದು ಸಣ್ಣ ತಪ್ಪು ಸರ್ಕಾರವನ್ನು ಪತನಗೊಳಿಸಬಹುದು ಎಂದಿದ್ದೇಕೆ ಕಾಂಗ್ರೆಸ್​​ ನಾಯಕ ರಾಹುಲ್​ ಗಾಂಧಿ
ಎನ್‌ಸಿಇಆರ್‌ಟಿ ಬಾಬರಿ ಮಸೀದಿಯ ಬದಲಿಗೆ ಮೂರು ಗುಮ್ಮಟ ರಚನೆಯನ್ನು ಬಳಸಲು ನಿರ್ಧರಿಸಿದೆ. ಅಯೋಧ್ಯೆ ತೀರ್ಪನ್ನು ಒಮ್ಮತದ ಉದಾಹರಣೆ ಎಂದು ವಿವರಿಸಲು ನಿರ್ಧರಿಸಿದೆ. ಬಾಬರಿ ಮಸೀದಿ ಧ್ವಂಸವನ್ನು ಅತ್ಯಂತ ಕೆಟ್ಟ ಅಪರಾಧ ಕೃತ್ಯ ಎಂದು ಸುಪ್ರೀಂಕೋರ್ಟ್ ಹೇಳಿದೆ. ದೇಶದ ಮಕ್ಕಳು ಅದನ್ನು ತಿಳಿದುಕೊಳ್ಳಬೇಕು ಎಂದು ಅಸಾದುದ್ದೀನ್ ಓವೈಸಿ ತಮ್ಮ ಎಕ್ಸ್​​ ಖಾತೆಯಲ್ಲಿ ಪೋಸ್ಟ್​ ಮಾಡಿದ್ದಾರೆ.
1949ರಲ್ಲಿ ಮಸೀದಿಯನ್ನು ಹೇಗೆ ಅವಮಾನಿಸಲಾಯಿತು ಮತ್ತು 1992ರಲ್ಲಿ ಹೇಗೆ ಕೆಡವಲಾಯಿತು ಎಂಬುದು ಮಕ್ಕಳಿಗೆ ತಿಳಿದಿರಬೇಕು. ಅಪರಾಧ ಕೃತ್ಯಗಳನ್ನು ವೈಭವೀಕರಿಸುತ್ತಾ ಅವರು ಬೆಳೆಯಬಾರದು ಎಂದಿದ್ದಾರೆ.

ಈ ಹಿಂದೆ ಎನ್‌ಸಿಇಆರ್‌ಟಿ ನಿರ್ದೇಶಕ ದಿನೇಶ್ ಪ್ರಸಾದ್ ಸಕ್ಲಾನಿ ಅವರು ಬಾಬರಿ ಮಸೀದಿ ಮತ್ತು ಗುಜರಾತ್ ಗಲಭೆಗೆ ಸಂಬಂಧಿಸಿದಂತೆ ಪಠ್ಯಪುಸ್ತಕಗಳಲ್ಲಿ ಮಾಡಲಾದ ಬದಲಾವಣೆಗಳನ್ನು ಪ್ರಸ್ತಾಪಿಸಿದ್ದರು. ಗಲಭೆಗಳ ಬಗ್ಗೆ ಬೋಧನೆ ಮಾಡುವುದರಿಂದ ಹಿಂಸಾತ್ಮಕ ಮತ್ತು ಖಿನ್ನತೆಗೆ ಒಳಗಾದ ನಾಗರಿಕರನ್ನು ಸೃಷ್ಟಿಸುತ್ತದೆ ಎಂದು ಅವರು ಹೇಳಿದ್ದರು. ಈ ಬಗ್ಗೆ ಓವೈಸಿ, ಇತಿಹಾಸದಿಂದ ಪಾಠ ಕಲಿಯದವನು ಮತ್ತೆ ಅದೇ ಇತಿಹಾಸವನ್ನು ಎದುರಿಸುವುದು ಖಚಿತ ಎಂದು ಹೇಳಿದ್ದಾರೆ. (ಏಜೆನ್ಸೀಸ್​​)
ನೀಟ್​ ಪರೀಕ್ಷೆ ವಿವಾದ; ನಿರ್ಲಕ್ಷ್ಯ ಯಾರದ್ದಾದರೂ ಸಂಪೂರ್ಣ ನಿಭಾಯಿಸಬೇಕು ಎಂದ ಸುಪ್ರೀಂಕೋರ್ಟ್​​​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + twenty =
Remember me
